ಪ್ರೋಟೀನ್ ಕಾಫಿ. ಕಾಫಿಯನ್ನು ಇಷ್ಟಪಡುವ ಹೆಚ್ಚಿನ ಜನರು ಅದರ ರುಚಿಯನ್ನು ಸೇರಿಸಲು ಪ್ರೋಟೀನ್ ಪುಡಿ ಬಳಸುತ್ತಾರೆ. ಕಾಫಿಗೆ ಪ್ರೋಟೀನ್ ಪೌಡರ್ ಸೇರಿಸಿದರೆ ರುಚಿ ಹೆಚ್ಚುತ್ತದೆ. ತೂಕ ನಷ್ಟಕ್ಕೆ ಸಹಕಾರಿ. ದೇಹವು ದಿನವಿಡೀ ಸಕ್ರಿಯವಾಗಿರುತ್ತದೆ. ಸ್ನಾಯುಗಳು ನಿರ್ಮಿಸಲು, ಕೊಬ್ಬನ್ನು ಕಡಿಮೆ ಮಾಡುತ್ತದೆ. ದಾಲ್ಚಿನ್ನಿ ಕಾಫಿ. ಇದು ಚಯಾಪಚಯ ಹೆಚ್ಚಿಸುತ್ತದೆ. ದೇಹದ ಕೊಬ್ಬನ್ನು ಸುಡಲು ಸಹಾಯ ಮಾಡುತ್ತದೆ.
ಕೋಕೋ ಕಾಫಿ. ಒಂದು ಸ್ಕೂಪ್ ಕೋಕೋ ಪೌಡರ್ ಅನ್ನು ಕಾಫಿಗೆ ಸೇರಿಸಿ. ಇದು ಕಾಫಿಯ ಪರಿಮಳ ಹೆಚ್ಚು ಉತ್ಕೃಷ್ಟ ಮತ್ತು ಉತ್ತಮಗೊಳಿಸುತ್ತದೆ. ಸಾಕಷ್ಟು ಆಂಟಿ-ಆಕ್ಸಿಡೆಂಟ್‌ಗಳಿಂದ ಸಮೃದ್ಧ ಕೊಕೋ ಕಾಫಿ ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಡಾರ್ಕ್ ಚಾಕೊಲೇಟ್ ಸ್ಥೂಲಕಾಯತೆಯಿಂದ ಬಳಲುತ್ತಿರುವ ಜನರಿಗೆ ಪ್ರಯೋಜನಕಾರಿ. ದೀರ್ಘಕಾಲದ ಕಾಯಿಲೆಗಳಿಂದ ದೇಹವನ್ನು ರಕ್ಷಿಸುತ್ತದೆ.