Breakfast: ನೋಡಲು ಚೆಂದ, ನಾಲಿಗೆಗೂ ರುಚಿಕರ; ಇಲ್ಲಿದೆ ವೆರೈಟಿ ಎಗ್ ರೆಸಿಪಿ

ಚಾಕೊಲೇಟ್ ಮತ್ತು ಮೊಟ್ಟೆ ಸೇರಿಸಿ ಮಾಡಿದ ಫುಡ್ ಯಾರಿಗೆ ತಾನೆ ಬೇಡ ಹೇಳಿ. ಜನರು ಪ್ರೀತಿ ಮತ್ತು ಸಂತೋಷದಿಂದ ಚಾಕೊಲೇಟ್ ಮತ್ತು ಮೊಟ್ಟೆ ಫುಡಿಂಗ್ ತಿನ್ನುತ್ತಾರೆ. ವಾರಾಂತ್ಯದಲ್ಲಿ ಚಾಕೊಲೇಟ್ ಮತ್ತು ಮೊಟ್ಟೆ ರೆಸಿಪಿಯು ಸಖತ್ ಟೇಸ್ಟ್ ಮತ್ತು ಸಂತೃಪ್ತಿ ಹಾಗೂ ತಿನ್ನುವ ಕ್ರೇವಿಂಗ್ಸ್ ತಣಿಸುತ್ತದೆ.

First published:

  • 18

    Breakfast: ನೋಡಲು ಚೆಂದ, ನಾಲಿಗೆಗೂ ರುಚಿಕರ; ಇಲ್ಲಿದೆ ವೆರೈಟಿ ಎಗ್ ರೆಸಿಪಿ

    ಹಬ್ಬಗಳಲ್ಲಿ ರುಚಿಕರ ಭಕ್ಷ್ಯ ತಯಾರಿಸುವುದು ಸಖತ್ ಖುಷಿ ಕೊಡುತ್ತದೆ. ಜೊತೆಗೆ ಹಬ್ಬದ ದಿನಗಳು ಮುಗಿದ ಮೇಲೂ ವಾರಕ್ಕೊಮ್ಮೆ ರುಚಿಕರ ಪದಾರ್ಥ ಸೇವಿಸುವ ಮನಸ್ಸಾಗುತ್ತದೆ. ಜನರು ಚಾಕೊಲೇಟ್ ನ್ನು ತುಂಬಾ ಇಷ್ಟ ಪಟ್ಟು ತಿನ್ನುತ್ತಾರೆ. ಬೆಳಗ್ಗೆಯಿಂದ ಸಂಜೆಯವರೆಗೆ ಚಾಕೊಲೇಟ್ ತಿನ್ನುವವರಿದ್ದಾರೆ.

    MORE
    GALLERIES

  • 28

    Breakfast: ನೋಡಲು ಚೆಂದ, ನಾಲಿಗೆಗೂ ರುಚಿಕರ; ಇಲ್ಲಿದೆ ವೆರೈಟಿ ಎಗ್ ರೆಸಿಪಿ

    ಚಾಕೊಲೇಟ್ ಮತ್ತು ಮೊಟ್ಟೆ ಸೇರಿಸಿ ಮಾಡಿದ ಫುಡ್ ಯಾರಿಗೆ ತಾನೆ ಬೇಡ ಹೇಳಿ. ಜನರು ಪ್ರೀತಿ ಮತ್ತು ಸಂತೋಷದಿಂದ ಚಾಕೊಲೇಟ್ ಮತ್ತು ಮೊಟ್ಟೆ ಫುಡಿಂಗ್ ತಿನ್ನುತ್ತಾರೆ. ವಾರಾಂತ್ಯದಲ್ಲಿ ಚಾಕೊಲೇಟ್ ಮತ್ತು ಮೊಟ್ಟೆ ರೆಸಿಪಿಯು ಸಖತ್ ಟೇಸ್ಟ್ ಮತ್ತು ಸಂತೃಪ್ತಿ ಹಾಗೂ ತಿನ್ನುವ ಕ್ರೇವಿಂಗ್ಸ್ ತಣಿಸುತ್ತದೆ.

    MORE
    GALLERIES

  • 38

    Breakfast: ನೋಡಲು ಚೆಂದ, ನಾಲಿಗೆಗೂ ರುಚಿಕರ; ಇಲ್ಲಿದೆ ವೆರೈಟಿ ಎಗ್ ರೆಸಿಪಿ

    ಮೊಟ್ಟೆ ಆರೋಗ್ಯಕ್ಕೆ ಯಾಕೆ ವಿಶೇಷವಾಗಿದೆ? ಪೋಷಕಾಂಶಗಳು ಸಮೃದ್ಧವಾಗಿರುವ ಮೊಟ್ಟೆಯನ್ನು ಬೆಳಗಿನ ತಿಂಡಿಗೆ ಸೇರಿಸಿದರೆ ದಿನವಿಡೀ ನಮ್ಮನ್ನು ಸಕ್ರಿಯವಾಗಿರಿಸುತ್ತವೆ. ಮೊಟ್ಟೆ ಕುದಿಸಿ, ಆಮ್ಲೆಟ್ ಮಾಡಿ, ಭುರ್ಜಿ ತಿಂದರೆ ಪ್ರೋಟೀನ್, ಕಬ್ಬಿಣ ಮತ್ತು ವಿಟಮಿನ್ಸ್ ಒದಗಿಸುತ್ತದೆ.

    MORE
    GALLERIES

  • 48

    Breakfast: ನೋಡಲು ಚೆಂದ, ನಾಲಿಗೆಗೂ ರುಚಿಕರ; ಇಲ್ಲಿದೆ ವೆರೈಟಿ ಎಗ್ ರೆಸಿಪಿ

    ಮಕ್ಕಳು ಹಾಗೂ ಹಿರಿಯರು, ಎಲ್ಲ ವಯಸ್ಸಿನವರಿಗೂ ಇದು ಪ್ರಯೋಜನಕಾರಿ. ಇದನ್ನು ಸೌಂದರ್ಯವರ್ಧಕವಾಗಿಯೂ ಬಳಸುತ್ತಾರೆ. ಕ್ಲಾಸಿಕ್ ಡೆವಿಲ್ಡ್ ಎಗ್ ರೆಸಿಪಿ, ಇದರಲ್ಲಿ ಮೊಟ್ಟೆಗಳನ್ನು ಕುದಿಸಿ. ಒಂದು ಬಟ್ಟಲಿಗೆ ಹಾಕಿ. ಚಿಪ್ಪು ತೆಗೆಯಿರಿ. ಉದ್ದವಾಗಿ ಕತ್ತರಿಸಿ. ಹಳದಿ ಲೋಳೆ ಬೇರ್ಪಡಿಸಿ. ಫೋರ್ಕ್‌ನಿಂದ ಮ್ಯಾಶ್ ಮಾಡಿ.

    MORE
    GALLERIES

  • 58

    Breakfast: ನೋಡಲು ಚೆಂದ, ನಾಲಿಗೆಗೂ ರುಚಿಕರ; ಇಲ್ಲಿದೆ ವೆರೈಟಿ ಎಗ್ ರೆಸಿಪಿ

    ಮೊಟ್ಟೆಗಳನ್ನು ತಟ್ಟೆಯಲ್ಲಿ ಇರಿಸಿ. ಈಗ ಮೊಟ್ಟೆಯ ಹಳದಿ ಭಾಗಕ್ಕೆ ಮೇಯನೇಸ್, ಡಿಜಾನ್ ಸಾಸಿವೆ, ವಿನೆಗರ್, ಒಂದು ಪಿಂಚ್ ಉಪ್ಪು ಮತ್ತು ಕರಿಮೆಣಸು ಸೇರಿಸಿ. ಈ ಮಿಶ್ರಣವು ನಯವಾಗುವವರೆಗೆ ಬೆರೆಸಿ. ಬೇಕಾದರೆ ಮೊಟ್ಟೆಯ ಚಿಪ್ಪುಗಳಿಗೆ ತುಂಬಿಸಿ, ಸೇವಿಸಿ.

    MORE
    GALLERIES

  • 68

    Breakfast: ನೋಡಲು ಚೆಂದ, ನಾಲಿಗೆಗೂ ರುಚಿಕರ; ಇಲ್ಲಿದೆ ವೆರೈಟಿ ಎಗ್ ರೆಸಿಪಿ

    ಆವಕಾಡೊ ಡೆವಿಲ್ಡ್ ಎಗ್ ರೆಸಿಪಿ. ಗಟ್ಟಿಯಾದ ಬೇಯಿಸಿದ ಮೊಟ್ಟೆ, ಆವಕಾಡೊ, ನಿಂಬೆ ರಸ, ಈರುಳ್ಳಿ, ಪುದೀನ, ಬೆಳ್ಳುಳ್ಳಿ ಪುಡಿ ಮತ್ತು ಉಪ್ಪು ಮತ್ತು ಮೆಣಸು ಒಂದು ಪಿಂಚ್ ಬೇಕು. ಬೇಯಿಸಿದ ಮೊಟ್ಟೆಗಳನ್ನು ಉದ್ದವಾಗಿ ಕತ್ತರಿಸಿ. ಹಳದಿ ಭಾಗ ಬೇರ್ಪಡಿಸಿ. ಆವಕಾಡೊ ಸೇರಿದಂತೆ ಎಲ್ಲಾ ಪದಾರ್ಥಗಳನ್ನು ಬಟ್ಟಲಿಗೆ ಹಾಕಿ. ಫೋರ್ಕ್‌ನಿಂದ ಮ್ಯಾಶ್ ಮಾಡಿ.

    MORE
    GALLERIES

  • 78

    Breakfast: ನೋಡಲು ಚೆಂದ, ನಾಲಿಗೆಗೂ ರುಚಿಕರ; ಇಲ್ಲಿದೆ ವೆರೈಟಿ ಎಗ್ ರೆಸಿಪಿ

    ಅದಕ್ಕೆ ಉಪ್ಪು ಮತ್ತು ಹಸಿಮೆಣಸು ಹಾಕಿ. ಈಗ ಮಿಶ್ರಣ ಮಾಡಿ. ನಂತರ ಮಿಶ್ರಣವನ್ನು ಎಲ್ಲಾ ಮೊಟ್ಟೆಯ ಚಿಪ್ಪಿನಲ್ಲಿ ತುಂಬಿಸಿ. ಈರುಳ್ಳಿ ಮತ್ತು ಪುದೀನ ಎಲೆಯ ಜೊತೆ ಸವಿಯಿರಿ. ಬೀಟ್ ಪಿಕ್ಲ್ಡ್ ಡೆವಿಲ್ಡ್ ಎಗ್ ರೆಸಿಪಿ. ಪಾತ್ರೆಗೆ ಎರಡು ಲೋಟ ನೀರು, ಕತ್ತರಿಸಿದ ಬೀಟ್ರೂಟ್, ವಿನೆಗರ್, ಉಪ್ಪು ಸೇರಿಸಿ. 20 ನಿಮಿಷ ಬೇಯಿಸಿ.

    MORE
    GALLERIES

  • 88

    Breakfast: ನೋಡಲು ಚೆಂದ, ನಾಲಿಗೆಗೂ ರುಚಿಕರ; ಇಲ್ಲಿದೆ ವೆರೈಟಿ ಎಗ್ ರೆಸಿಪಿ

    ಕುದಿಸಿದ ಮೊಟ್ಟೆಗಳನ್ನು ಇಡಿಯಾಗಿ ಬೀಟ್ರೂಟ್ ನೀರಿನಲ್ಲಿ ಒಂದು ಗಂಟೆ ನೆನೆಸಿ. ಮೊಟ್ಟೆಗಳನ್ನು ಮಧ್ಯದಿಂದ ಕತ್ತರಿಸಿ, ಹಳದಿ ಭಾಗ ಬೇರ್ಪಡಿಸಿ. ಮೇಯನೇಸ್, ಸಾಸಿವೆ ಸಾಸ್, ವಿನೆಗರ್, ಕರಿಮೆಣಸು ಮತ್ತು ಉಪ್ಪನ್ನು ಸೇರಿಸಿ. ಮಿಕ್ಸ್ ಮಾಡಿ. ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ ಸೇವಿಸಿ.

    MORE
    GALLERIES