Breakfast: ಉದ್ದಿನ ವಡೆ ಮಾತ್ರ ಅಲ್ಲ, ಇಡ್ಲಿ ಜೊತೆಗೆ ಸೋಯಾ ಕಬಾಬ್ ಬೆಸ್ಟ್​ ಕಾಂಬಿನೇಷನ್!

ಸೋಯಾ ಚಂಕ್‌ಗಳು ಮೂಳೆಯ ಆರೋಗ್ಯ ಬಲಪಡಿಸುತ್ತದೆ. ಸೋಯಾದಲ್ಲಿ ಜೆನಿಸ್ಟೀನ್ ಸಂಯುಕ್ತವಿದೆ. ಇದು ಸ್ತನ ಕ್ಯಾನ್ಸರ್ ತಡೆಗಟ್ಟುವಲ್ಲಿ ಸಹಕಾರಿ. ಸೋಯಾದಿಂದ ತಯಾರಿಸಿದ ಕಬಾಬ್‌ ಗಳು ಆರೋಗ್ಯಕ್ಕೆ ಉತ್ತಮ ಆಯ್ಕೆ ಆಗಿದೆ. ಇಂದು ನಾವು ಸೋಯಾ ಕಬಾಬ್ ಮಾಡುವ ವಿಧಾನ ನೋಡೋಣ.

First published:

  • 17

    Breakfast: ಉದ್ದಿನ ವಡೆ ಮಾತ್ರ ಅಲ್ಲ, ಇಡ್ಲಿ ಜೊತೆಗೆ ಸೋಯಾ ಕಬಾಬ್ ಬೆಸ್ಟ್​ ಕಾಂಬಿನೇಷನ್!

    ಸೋಯಾ ಚಂಕ್‌ಗಳು ಪ್ರೋಟೀನ್‌ನ ಶಕ್ತಿಕೇಂದ್ರ. ದೇಹದಲ್ಲಿ ಸ್ನಾಯುಗಳನ್ನು ನಿರ್ಮಿಸುತ್ತವೆ. ಫೈಬರ್, ಕ್ಯಾಲ್ಸಿಯಂ, ಒಮೆಗಾ 3 ಕೊಬ್ಬಿನಾಮ್ಲಗಳು, ವಿಟಮಿನ್‌ಗಳು, ಖನಿಜಗಳು ಮತ್ತು ಪ್ರೋಟೀನ್‌ಗಳಲ್ಲಿ ಸಮೃದ್ಧವಾಗಿರುವ ಸೋಯಾ ಚಂಕ್‌ಗಳು ತೂಕ ಇಳಿಕೆಗೂ ಸಹಕಾರಿ. ಇದು ದೇಹವನ್ನು ಅನೇಕ ರೋಗಗಳಿಂದ ರಕ್ಷಿಸುತ್ತದೆ.

    MORE
    GALLERIES

  • 27

    Breakfast: ಉದ್ದಿನ ವಡೆ ಮಾತ್ರ ಅಲ್ಲ, ಇಡ್ಲಿ ಜೊತೆಗೆ ಸೋಯಾ ಕಬಾಬ್ ಬೆಸ್ಟ್​ ಕಾಂಬಿನೇಷನ್!

    ಸೋಯಾ ಚಂಕ್‌ಗಳು ಮೂಳೆಯ ಆರೋಗ್ಯ ಬಲಪಡಿಸುತ್ತದೆ. ಸೋಯಾದಲ್ಲಿ ಜೆನಿಸ್ಟೀನ್ ಸಂಯುಕ್ತವಿದೆ. ಇದು ಸ್ತನ ಕ್ಯಾನ್ಸರ್ ತಡೆಗಟ್ಟುವಲ್ಲಿ ಸಹಕಾರಿ. ಸೋಯಾದಿಂದ ತಯಾರಿಸಿದ ಕಬಾಬ್‌ ಗಳು ಆರೋಗ್ಯಕ್ಕೆ ಉತ್ತಮ ಆಯ್ಕೆ ಆಗಿದೆ. ಇಂದು ನಾವು ಸೋಯಾ ಕಬಾಬ್ ಮಾಡುವ ವಿಧಾನ ನೋಡೋಣ.

    MORE
    GALLERIES

  • 37

    Breakfast: ಉದ್ದಿನ ವಡೆ ಮಾತ್ರ ಅಲ್ಲ, ಇಡ್ಲಿ ಜೊತೆಗೆ ಸೋಯಾ ಕಬಾಬ್ ಬೆಸ್ಟ್​ ಕಾಂಬಿನೇಷನ್!

    ಸೋಯಾ ತುಂಡುಗಳ ಪ್ರೋಟೀನ್, ಒಮೆಗಾ 3 ಕೊಬ್ಬಿನಾಮ್ಲಗಳು ಮತ್ತು ಫೈಬರ್ ಸಮೃದ್ಧವಾಗಿದೆ. ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಮಟ್ಟ ಕಡಿಮೆ ಮಾಡುವ ಮೂಲಕ ದೇಹಕ್ಕೆ ಪೌಷ್ಟಿಕಾಂಶ ಒದಗಿಸುತ್ತದೆ. ದೇಹದಲ್ಲಿ ಉತ್ತಮ ಕೊಲೆಸ್ಟ್ರಾಲ್ ಹೆಚ್ಚಾಗುತ್ತದೆ. ರಕ್ತದೊತ್ತಡ ನಿಯಂತ್ರಣದಲ್ಲಿರುತ್ತದೆ. ಹೃದಯ ಸಂಬಂಧಿ ಸಮಸ್ಯೆಗೆ ರಾಮಬಾಣ.

    MORE
    GALLERIES

  • 47

    Breakfast: ಉದ್ದಿನ ವಡೆ ಮಾತ್ರ ಅಲ್ಲ, ಇಡ್ಲಿ ಜೊತೆಗೆ ಸೋಯಾ ಕಬಾಬ್ ಬೆಸ್ಟ್​ ಕಾಂಬಿನೇಷನ್!

    ಋತುಬಂಧದ ಲಕ್ಷಣಗಳನ್ನು ನಿಯಂತ್ರಿಸುತ್ತದೆ. ರಾತ್ರಿಯಲ್ಲಿ ಬೆವರುವುದು, ನಿದ್ರಾಹೀನತೆ ಮತ್ತು ಮೂಡ್ ಬದಲಾವಣೆಗಳು ಋತುಬಂಧ ಸಮಯದಲ್ಲಿ ಕಾಣಿಸುತ್ತವೆ. ಸೋಯಾ ಪ್ರೋಟೀನ್ ಸೇವನೆಯು ದೇಹದಲ್ಲಿ ಐಸೊಫ್ಲಾವೊನ್ಗಳನ್ನು ಪೂರೈಸುತ್ತದೆ. ಇದು ಋತುಬಂಧದ ಸ್ಥಿತಿಯನ್ನು ಸುಧಾರಿಸುತ್ತದೆ. ಅವಧಿಯ ಚಕ್ರವನ್ನು ಸರಿಯಾಗಿಡುತ್ತದೆ.

    MORE
    GALLERIES

  • 57

    Breakfast: ಉದ್ದಿನ ವಡೆ ಮಾತ್ರ ಅಲ್ಲ, ಇಡ್ಲಿ ಜೊತೆಗೆ ಸೋಯಾ ಕಬಾಬ್ ಬೆಸ್ಟ್​ ಕಾಂಬಿನೇಷನ್!

    ತೂಕ ನಷ್ಟದಲ್ಲಿ ಸಹಕಾರಿ. ಸೋಯಾಬೀನ್ ಸೇವನೆಯು ದೇಹದಲ್ಲಿ ಫೈಬರ್ ಪೂರೈಸುತ್ತದೆ. ಪ್ರೋಟೀನ್ ಭರಿತ ಸೋಯಾ ಕಬಾಬ್ ಮಾಡಲು ಬೇಕಾಗುವ ಪದಾರ್ಥಗಳು ಹೀಗಿವೆ. ಸೋಯಾ ಚಂಕ್ಸ್ 50 ಗ್ರಾಂ, ಆಲೂಗಡ್ಡೆ 150 ಗ್ರಾಂ, ಶುಂಠಿ ಪೇಸ್ಟ್ 1 ಟೀಸ್ಪೂನ್, ಕೆಂಪು ಮೆಣಸಿನಕಾಯಿ ಒಂದು ಟೀಚಮಚ, ಜೀರಿಗೆ ಪುಡಿ ಅರ್ಧ ಟೀಚಮಚ, ಕೊತ್ತಂಬರಿ ಪುಡಿ ಒಂದು ಟೀಚಮಚ,

    MORE
    GALLERIES

  • 67

    Breakfast: ಉದ್ದಿನ ವಡೆ ಮಾತ್ರ ಅಲ್ಲ, ಇಡ್ಲಿ ಜೊತೆಗೆ ಸೋಯಾ ಕಬಾಬ್ ಬೆಸ್ಟ್​ ಕಾಂಬಿನೇಷನ್!

    ನುಣ್ಣಗೆ ಕತ್ತರಿಸಿದ ಹಸಿರು ಮೆಣಸಿನಕಾಯಿ 1 ರಿಂದ 2, ಅಗತ್ಯವಿರುವಂತೆ ಕೊತ್ತಂಬರಿ ಸೊಪ್ಪು, ರುಚಿಗೆ ಉಪ್ಪು ಬೇಕು. ಮಾಡುವ ವಿಧಾನ. ಮೊದಲು 50 ಗ್ರಾಂ ಸೋಯಾ ತುಂಡು ಕುದಿಸಿ. ಈಗ ಅದನ್ನು ನೀರಿನಿಂದ ತೆಗೆದುಕೊಂಡು ಅದನ್ನು ಸ್ಟ್ರೈನರ್‌ನಲ್ಲಿ ಹಾಕಿ ನೀರು ತೆಗೆಯಿರಿ. ಆಲೂಗಡ್ಡೆ ಕುದಿಸಿ. ಸಿಪ್ಪೆ ತೆಗೆದು ಮ್ಯಾಶ್ ಮಾಡಿ. ರುಬ್ಬಿದ ಸೋಯಾ ತುಂಡು ಮಿಶ್ರಣ ಮಾಡಿ.

    MORE
    GALLERIES

  • 77

    Breakfast: ಉದ್ದಿನ ವಡೆ ಮಾತ್ರ ಅಲ್ಲ, ಇಡ್ಲಿ ಜೊತೆಗೆ ಸೋಯಾ ಕಬಾಬ್ ಬೆಸ್ಟ್​ ಕಾಂಬಿನೇಷನ್!

    ಶುಂಠಿ ಪೇಸ್ಟ್, ಹಸಿರು ಮೆಣಸಿನಕಾಯಿ ಮತ್ತು ಕೊತ್ತಂಬರಿ ಸೊಪ್ಪು, ಕೊತ್ತಂಬರಿ ಪುಡಿ, ಜೀರಿಗೆ ಪುಡಿ, ಕೆಂಪು ಮೆಣಸಿನಕಾಯಿ ಮತ್ತು ಉಪ್ಪು ಸೇರಿಸಿ ಮಿಕ್ಸ್ ಮಾಡಿ. ಕೈಗಳಿಂದ ಟಿಕ್ಕಿಯ ಆಕಾರದಲ್ಲಿ ಕಬಾಬ್ಗಳನ್ನು ತಯಾರಿಸಿ. ಪ್ಯಾನ್ ಅನ್ನು ಎಣ್ಣೆಯಿಂದ ಗ್ರೀಸ್ ಮಾಡಿ. ಕಬಾಬ್ ಹಾಕಿ ಬೇಯಿಸಿ. ಪುದೀನ ಚಟ್ನಿಯೊಂದಿಗೆ ಬಡಿಸಿ.

    MORE
    GALLERIES