Morning Breakfast: ರುಚಿ ರುಚಿಯಾದ ಕ್ರಿಸ್ಪಿಯಾಗಿ ಖಾಲಿ ದೋಸೆ ಮಾಡೋದು ಹೀಗೆ ನೋಡಿ

Dosa Recipe: ದೋಸೆ ಎಂದಾಕ್ಷಣ ಬಾಯಲ್ಲಿ ನೀರು ಬರುತ್ತದೆ. ದಕ್ಷಿಣ ಭಾರತದ ಪ್ರಮುಖ ಆಹಾರ ದೋಸೆ. ಬೆಳಗಿನ ತಿಂಡಿಗೆ ದೋಸೆ ತಿನ್ನುವುದು ಏನೋ ಆನಂದ. ದಿನವೂ ದೋಸೆ ತಿಂದರೂ ಬೇಸರವಾಗಲ್ಲ. ಹಾಗಿದ್ರೆ ನಾವು ಇಂದು ಖಾಲಿ ದೋಸೆ ಮಾಡುವುದು ಹೇಗೆ ನೋಡೋಣ.

First published:

  • 18

    Morning Breakfast: ರುಚಿ ರುಚಿಯಾದ ಕ್ರಿಸ್ಪಿಯಾಗಿ ಖಾಲಿ ದೋಸೆ ಮಾಡೋದು ಹೀಗೆ ನೋಡಿ

    ಉದ್ದಿನಬೇಳೆ ಮತ್ತು ಅಕ್ಕಿಯನ್ನು ನೀರಿನಲ್ಲಿ ನೆನೆಸಿ, ನಯವಾಗಿ ರುಬ್ಬಿ ಪೇಸ್ಟ್ ತಯಾರಿಸಲಾಗುತ್ತದೆ. ನಂತರ ಹಿಟ್ಟನ್ನು ರಾತ್ರಿಯಿಡೀ ಹುದುಗುವಿಕೆಗೆ ಇರಿಸುತ್ತಾರೆ. ವೃತ್ತಾಕಾರದ ಚಲನೆ ದೋಸೆ ಹೊಯ್ದು ತಿಂದರೆ ಸಂತೃಪ್ತಿ.

    MORE
    GALLERIES

  • 28

    Morning Breakfast: ರುಚಿ ರುಚಿಯಾದ ಕ್ರಿಸ್ಪಿಯಾಗಿ ಖಾಲಿ ದೋಸೆ ಮಾಡೋದು ಹೀಗೆ ನೋಡಿ

    ಗರಿಗರಿಯಾದ ಗೋಲ್ಡನ್ ದೋಸೆಗಳು ಕ್ರಿಸ್ಪಿ ರುಚಿ ಹೆಚ್ಚಿಸುತ್ತದೆ. ಅಕ್ಕಿ ಮತ್ತು ಉದ್ದಿನ ಬೇಳೆ ನೆನೆಸುವಾಗ ಮೆಂತ್ಯ ಬೀಜ ಸೇರಿಸಿದರೆ ಇದು ಹಲವು ಪೋಷಕಾಂಶಗಳನ್ನು ದೇಹಕ್ಕೆ ಒದಗಿಸುತ್ತದೆ. ದೋಸೆ ಹಿಟ್ಟಿನ ಹುದುಗುವಿಕೆಯು ಅದರ ಆಕಾರ ಮತ್ತು ರುಚಿ ಹೆಚ್ಚಿಸುತ್ತದೆ.

    MORE
    GALLERIES

  • 38

    Morning Breakfast: ರುಚಿ ರುಚಿಯಾದ ಕ್ರಿಸ್ಪಿಯಾಗಿ ಖಾಲಿ ದೋಸೆ ಮಾಡೋದು ಹೀಗೆ ನೋಡಿ

    ವಿವಿಧ ದೋಸೆ ತಿನ್ನುವುದು ಆನಂದ. ನೀವು ಹಲವು ದೋಸೆ ಸವಿದಿರಬಹುದು. ದೋಸೆ ಮತ್ತು ಇಡ್ಲಿ ಕಾಮನ್. ದಕ್ಷಿಣ ಭಾರತೀಯರು ವಿವಿಧ ದೋಸೆ ತಯಾರಿಸಿ ಸವಿಯುತ್ತಾರೆ. ಈ ದೋಸೆಗಳು ನಿಮ್ಮನ್ನು ತೃಪ್ತಿ ಪಡಿಸುತ್ತವೆ.

    MORE
    GALLERIES

  • 48

    Morning Breakfast: ರುಚಿ ರುಚಿಯಾದ ಕ್ರಿಸ್ಪಿಯಾಗಿ ಖಾಲಿ ದೋಸೆ ಮಾಡೋದು ಹೀಗೆ ನೋಡಿ

    ವೆರೈಟಿ ದೋಸೆಗಳಿವೆ. ಅದರಲ್ಲಿ ತುಪ್ಪಾ ದೋಸೆ, ಓಟ್ಸ್ ದೋಸೆ, ರವಾ ದೋಸೆ, ಮೈಸೂರು ಮಸಾಲೆ ದೋಸೆ, ನೀರ್ ದೋಸೆ, ಸ್ಯಾಂಡ್‌ವಿಚ್ ದೋಸೆ ಇತ್ಯಾದಿ ವೆರೈಟಿಗಳು ದೋಸೆಯ ರುಚಿ ಮತ್ತೆ ಮತ್ತೆ ಹೆಚ್ಚಿಸುತ್ತವೆ.

    MORE
    GALLERIES

  • 58

    Morning Breakfast: ರುಚಿ ರುಚಿಯಾದ ಕ್ರಿಸ್ಪಿಯಾಗಿ ಖಾಲಿ ದೋಸೆ ಮಾಡೋದು ಹೀಗೆ ನೋಡಿ

    ಸರಳ ದೋಸೆಗಳು ಆರೋಗ್ಯಕರ ಮತ್ತು ಸಂಪೂರ್ಣ ಉಪಹಾರವಾಗಿದೆ. ನೀವು ಇದನ್ನು ಆರಾಮವಾಗಿ ಬೇಯಿಸಿ, ಸವಿಯಬಹುದು. ಖಾಲಿ ದೋಸೆಯು ವೆಜ್ ಸಾಗು ಮತ್ತು ಚಟ್ನಿ ಹಾಗೂ ಆಲೂ ಪಲ್ಯದ ಜೊತೆ ಉತ್ತಮ ಕಾಂಬೀನೇಷನ್.

    MORE
    GALLERIES

  • 68

    Morning Breakfast: ರುಚಿ ರುಚಿಯಾದ ಕ್ರಿಸ್ಪಿಯಾಗಿ ಖಾಲಿ ದೋಸೆ ಮಾಡೋದು ಹೀಗೆ ನೋಡಿ

    ಖಾಲಿ ದೋಸೆ ತಯಾರಿಸಲು ಬೇಕಾಗುವ ಪದಾರ್ಥಗಳು ಹೀಗಿವೆ. ಒಂದು ಕಪ್ ಉದ್ದಿನ ಬೇಳೆ, ಮೂರು ಕಪ್ ಸೋನಾ ಮಸೂರಿ ಅಕ್ಕಿ, ½ ಟೀಸ್ಪೂನ್ ಮೆಂತ್ಯ ಬೀಜಗಳು, 1 ಕಪ್ ಪೇಪರ್ ಅವಲಕ್ಕಿ, ದೋಸೆಯನ್ನು ಹುರಿಯಲು ಎಣ್ಣೆ, ರುಚಿಗೆ ಉಪ್ಪು ಬೇಕು.

    MORE
    GALLERIES

  • 78

    Morning Breakfast: ರುಚಿ ರುಚಿಯಾದ ಕ್ರಿಸ್ಪಿಯಾಗಿ ಖಾಲಿ ದೋಸೆ ಮಾಡೋದು ಹೀಗೆ ನೋಡಿ

    ಖಾಲಿ ದೋಸೆ ತಯಾರಿಸುವ ವಿಧಾನ ಹೀಗಿದೆ. ಮೊದಲು ಉದ್ದಿನಬೇಳೆ ಮತ್ತು ಅಕ್ಕಿ, ಮೆಂತ್ಯವನ್ನು ಪ್ರತ್ಯೇಕ ಬಟ್ಟಲಿನಲ್ಲಿ ನೆನೆಸಿಡಿ. ಸಾಕಷ್ಟು ನೀರು ಸೇರಿಸಿ. ನಯವಾದ ಪೇಸ್ಟ್ ಮಾಡಲು ಅಗತ್ಯವಿದ್ದಷ್ಟು ನೀರನ್ನು ಸೇರಿಸಿ. ನಂತರ ಎಲ್ಲಾ ಪದಾರ್ಥಗಳನ್ನು ಮಿಕ್ಸ್ ಮಾಡಿ. ಚೆನ್ನಾಗಿ ರುಬ್ಬಿರಿ.

    MORE
    GALLERIES

  • 88

    Morning Breakfast: ರುಚಿ ರುಚಿಯಾದ ಕ್ರಿಸ್ಪಿಯಾಗಿ ಖಾಲಿ ದೋಸೆ ಮಾಡೋದು ಹೀಗೆ ನೋಡಿ

    ಈ ಹಿಟ್ಟನ್ನು ಪಾತ್ರೆಯಲ್ಲಿ ಸಂಗ್ರಹಿಸಿ. ರಾತ್ರಿಯಿಡೀ ಹುದುಗಿಸಿ, ಬೆಳಗ್ಗೆ ಒಲೆ ಮೇಲೆ ತವೆ ಇಟ್ಟು, ಬಿಸಿ ಮಾಡಿ. ಸ್ವಲ್ಪ ಎಣ್ಣೆ ಗ್ರೀಸ್ ಮಾಡಿ. ಹಿಟ್ಟಿಗೆ ಸ್ವಲ್ಪ ಉಪ್ಪು ಹಾಕಿ ಮಿಕ್ಸ್ ಮಾಡಿ, ದೋಸೆ ಎರೆದು ಎರಡೂ ಬದಿ ಬೇಯಿಸಿ ನಿಮ್ಮಿಷ್ಟದ ಚಟ್ನಿ ಜೊತೆ ಸವಿಯಿರಿ.

    MORE
    GALLERIES