ನಂತರ ಬೆಣ್ಣೆ ಜೊತೆ ಒಣ ಹಣ್ಣುಗಳನ್ನು ಮಿಕ್ಸ್ ಮಾಡಿ. ಇದಕ್ಕೆ ಹಸಿರು ಮೆಣಸಿನಕಾಯಿ, ಈರುಳ್ಳಿ, ಟೊಮ್ಯಾಟೊ, ಚಿಟಿಕೆ ಕರಿಮೆಣಸು ಮತ್ತು ಚಿಟಿಕೆ ಉಪ್ಪು ಸೇರಿಸಿ ಮಿಕ್ಸ್ ಮಾಡಿ ಸವಿಯಿರಿ. ಪಾಲಕ್ ಮಖಾನಾ ರೆಸಿಪಿ. ಬೇಕಾಗುವ ಪದಾರ್ಥಗಳು ಹೀಗಿವೆ. ಪಾಲಕ 250 ಗ್ರಾಂ, ಟೊಮೆಟೊ ಪ್ಯೂರಿ ಎರಡು ಟೀಸ್ಪೂನ್, ಕತ್ತರಿಸಿದ ಈರುಳ್ಳಿ 3 ಕಪ್, ಮಖಾನಾ 1 ಕಪ್, ಶುಂಠಿ ಪೇಸ್ಟ್ 1 ಟೀಸ್ಪೂನ್,
ಬೆಳ್ಳುಳ್ಳಿ ಪೇಸ್ಟ್ 1 ಟೀಸ್ಪೂನ್, ಹಾಲು 1/2 ಕಪ್, ಅರಿಶಿನ ಪುಡಿ, ಕೆಂಪು ಮೆಣಸಿನಕಾಯಿ ಒಂದು ಟೀಚಮಚ, ಗರಂ ಮಸಾಲಾ, ಉಪ್ಪು ಬೇಕು., ತಯಾರಿಸುವ ವಿಧಾನ. ಪಾಲಕ್ ಜೊತೆಗೆ ಒಂದು ಕಪ್ ನೀರನ್ನು ಹಾಕಿ, ಬೆಳ್ಳುಳ್ಳಿ ಮತ್ತು ಶುಂಠಿ ಪೇಸ್ಟ್ ಸೇರಿಸಿ, ಬೇಯಿಸಿ. ನಂತರ ಬಾಣಲೆಗೆ ಚಮಚ ಎಣ್ಣೆ ಸೇರಿಸಿ. ಬೆಳ್ಳುಳ್ಳಿ ಮತ್ತು ಶುಂಠಿ ಪೇಸ್ಟ್ ಹಾಕಿ ಫ್ರೈ ಮಾಡಿ. ಈರುಳ್ಳಿ ಹಾಕಿ ಫ್ರೈ ಮಾಡಿ.