Morning Breakfast: ಬೆಳಗ್ಗೆ ತಿಂಡಿ ಬದಲು ಸೇವಿಸಿ ನುಗ್ಗೆಕಾಯಿ ಸೂಪ್; ನಿಯಂತ್ರಣಕ್ಕೆ ಬರುತ್ತೆ ಕೊಲೆಸ್ಟ್ರಾಲ್

ನುಗ್ಗೆಕಾಯಿ ಮತ್ತು ನುಗ್ಗೆಸೊಪ್ಪನ್ನು ಹೆಚ್ಚಾಗಿ ಮಧ್ಯಾಹ್ನದ ಊಟಕ್ಕೆ ಬಳಕೆ ಮಾಡಲಾಗುತ್ತದೆ. ನುಗ್ಗೆಕಾಯಿ ಮತ್ತು ನುಗ್ಗೆಸೊಪ್ಪನ್ನು ವಿವಿಧ ಖಾದ್ಯಗಳ ರೂಪದಲ್ಲಿ ನೀವು ಬೆಳಗಿನ ತಿಂಡಿಯಾಗಿ ಸಹ ಬಳಕೆ ಮಾಡಬಹುದು. ಬೆಳಗ್ಗೆ ತಿಂಡಿಗೆ ನುಗ್ಗೆಕಾಯಿ ಮತ್ತು ನುಗ್ಗೆಸೊಪ್ಪನ್ನು ನೀವು ಸೂಪ್ ಮಾಡಿ ಸೇವಿಸಿದರೆ ಇದು ಸಾಕಷ್ಟು ಆರೋಗ್ಯ ಪ್ರಯೋಜನ ನೀಡುತ್ತದೆ.

First published:

  • 18

    Morning Breakfast: ಬೆಳಗ್ಗೆ ತಿಂಡಿ ಬದಲು ಸೇವಿಸಿ ನುಗ್ಗೆಕಾಯಿ ಸೂಪ್; ನಿಯಂತ್ರಣಕ್ಕೆ ಬರುತ್ತೆ ಕೊಲೆಸ್ಟ್ರಾಲ್

    ನುಗ್ಗೆಕಾಯಿ ಮತ್ತು ನುಗ್ಗೆಸೊಪ್ಪನ್ನು ಆಯುರ್ವೇದದಲ್ಲಿ ಹಲವು ವರ್ಷಗಳಿಂದ ಔಷಧವಾಗಿ ಬಳಸುತ್ತಿದ್ದಾರೆ. ಇದು ಅನೇಕ ಪ್ರಮುಖ ಪೋಷಕಾಂಶ ಹೊಂದಿದೆ. ಸಂಧಿವಾತ, ತೂಕ ನಷ್ಟ, ಬೊಜ್ಜು, ಅಧಿಕ ಕೊಲೆಸ್ಟ್ರಾಲ್, ಮಧುಮೇಹ, ಅಧಿಕ ರಕ್ತದೊತ್ತಡ, ದೃಷ್ಟಿ ಸಂಬಂಧಿತ ಸಮಸ್ಯೆಗಳು ಮತ್ತು ರಕ್ತಹೀನತೆ ನಿವಾರಿಸಲು ಸಹಕಾರಿ.

    MORE
    GALLERIES

  • 28

    Morning Breakfast: ಬೆಳಗ್ಗೆ ತಿಂಡಿ ಬದಲು ಸೇವಿಸಿ ನುಗ್ಗೆಕಾಯಿ ಸೂಪ್; ನಿಯಂತ್ರಣಕ್ಕೆ ಬರುತ್ತೆ ಕೊಲೆಸ್ಟ್ರಾಲ್

    ನುಗ್ಗೆಕಾಯಿ ಮತ್ತು ನುಗ್ಗೆಸೊಪ್ಪ ಪೋಷಕಾಂಶಗಳ ಸರಿಯಾದ ಪ್ರಯೋಜನ ಪಡೆಯಲು, ಸಾಮಾನ್ಯ ತರಕಾರಿಗಳು ಮತ್ತು ಬೇಳೆಕಾಳು ಜೊತೆ ಬೇಯಿಸಿ ಸೇವಿಸಬಹುದು. ಬೇರು, ಎಲೆ ಮತ್ತು ಕಾಂಡ ಕೂಡ ಆರೋಗ್ಯ ಪ್ರಯೋಜನ ನೀಡುತ್ತದೆ. ಹಲವು ಪ್ರಮುಖ ಪೋಷಕಾಂಶಗಳು ಇದರಲ್ಲಿದೆ.

    MORE
    GALLERIES

  • 38

    Morning Breakfast: ಬೆಳಗ್ಗೆ ತಿಂಡಿ ಬದಲು ಸೇವಿಸಿ ನುಗ್ಗೆಕಾಯಿ ಸೂಪ್; ನಿಯಂತ್ರಣಕ್ಕೆ ಬರುತ್ತೆ ಕೊಲೆಸ್ಟ್ರಾಲ್

    ನುಗ್ಗೆಕಾಯಿ ಮತ್ತು ನುಗ್ಗೆಸೊಪ್ಪ ಕೆಲವು ಪ್ರಮುಖ ಆರೋಗ್ಯ ಪ್ರಯೋಜನ ಪಡೆಯಲು ನೀವು ಅದನ್ನು ಸೂಪ್ ರೀತಿಯಲ್ಲಿ ಸೇವನೆ ಮಾಡಿ. ಅನೇಕ ಪ್ರಮುಖ ಪೋಷಕಾಂಶಗಳು ಇದರಲ್ಲಿವೆ. ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಶಕ್ತಿ, ಪ್ರೋಟೀನ್, ಕಾರ್ಬೋಹೈಡ್ರೇಟ್‌, ವಿಟಮಿನ್ ಬಿ 3, ವಿಟಮಿನ್ ಸಿ, ಆಹಾರದ ಫೈಬರ್ ನೀಡುತ್ತದೆ.

    MORE
    GALLERIES

  • 48

    Morning Breakfast: ಬೆಳಗ್ಗೆ ತಿಂಡಿ ಬದಲು ಸೇವಿಸಿ ನುಗ್ಗೆಕಾಯಿ ಸೂಪ್; ನಿಯಂತ್ರಣಕ್ಕೆ ಬರುತ್ತೆ ಕೊಲೆಸ್ಟ್ರಾಲ್

    ನುಗ್ಗೆಕಾಯಿ ಮತ್ತು ನುಗ್ಗೆಸೊಪ್ಪ ಕೊಲೆಸ್ಟ್ರಾಲ್ ಮಟ್ಟ ಸಮತೋಲನಗೊಳಿಸುತ್ತದೆ. ಕೆಟ್ಟ ಕೊಲೆಸ್ಟ್ರಾಲ್ ಪ್ರಮಾಣವು ಹೃದಯ ಸಂಬಂಧಿ ಕಾಯಿಲೆಗಳಿಗೆ ಕಾರಣ. ನುಗ್ಗೆಕಾಯಿ ಮತ್ತು ನುಗ್ಗೆಸೊಪ್ಪ ಸೇವನೆ ಮಾಡಿದರೆ ಇದು ಕೆಟ್ಟ ಕೊಲೆಸ್ಟ್ರಾಲ್ ನಿಯಂತ್ರಿಸುತ್ತದೆ.

    MORE
    GALLERIES

  • 58

    Morning Breakfast: ಬೆಳಗ್ಗೆ ತಿಂಡಿ ಬದಲು ಸೇವಿಸಿ ನುಗ್ಗೆಕಾಯಿ ಸೂಪ್; ನಿಯಂತ್ರಣಕ್ಕೆ ಬರುತ್ತೆ ಕೊಲೆಸ್ಟ್ರಾಲ್

    ನುಗ್ಗೆಕಾಯಿ ಸೂಪ್ ರೆಸಿಪಿಗೆ ಬೇಕಾಗುವ ಪದಾರ್ಥಗಳೆಂದರೆ ನುಗ್ಗೆಕಾಯಿ 4 ರಿಂದ 5, ಕೊತ್ತಂಬರಿ ಪುಡಿ - 1/2 ಟೀಸ್ಪೂನ್, ಉಪ್ಪು (ರುಚಿಗೆ), ಕರಿಮೆಣಸು ಪುಡಿ - 1/4 ಟೀಸ್ಪೂನ್, ಜೀರಿಗೆ ಪುಡಿ - 1/4 ಟೀಸ್ಪೂನ್ ಬೇಕು. ಸೂಪ್ ತಯಾರಿಸಲು ಮೊದಲು ನುಗ್ಗೆಕಾಯಿ ಮತ್ತು ಸೊಪ್ಪನ್ನು 4 ರಿಂದ 5 ತುಂಡುಗಳಾಗಿ ಕತ್ತರಿಸಿ.

    MORE
    GALLERIES

  • 68

    Morning Breakfast: ಬೆಳಗ್ಗೆ ತಿಂಡಿ ಬದಲು ಸೇವಿಸಿ ನುಗ್ಗೆಕಾಯಿ ಸೂಪ್; ನಿಯಂತ್ರಣಕ್ಕೆ ಬರುತ್ತೆ ಕೊಲೆಸ್ಟ್ರಾಲ್

    ಒಂದು ಪಾತ್ರೆಗೆ 2 ಕಪ್ ನೀರು ತೆಗೆದುಕೊಂಡು ನುಗ್ಗೆಕಾಯಿ ಮತ್ತು ಸೊಪ್ಪು ಹಾಕಿರಿ. ಉಪ್ಪು ಮತ್ತು ಕೊತ್ತಂಬರಿ ಪುಡಿ ಸೇರಿಸಿ ಮತ್ತು ಒಟ್ಟಿಗೆ ಮಿಶ್ರಣ ಮಾಡಿ. ಈಗ ನೀರನ್ನು ಮಧ್ಯಮ ಉರಿಯಲ್ಲಿ ಬಿಸಿ ಮಾಡಿ. 8 ರಿಂದ 10 ನಿಮಿಷಗಳ ಕಾಲ ಕುದಿಸಿ. ಗ್ಯಾಸ್ ಆಫ್ ಮಾಡಿ. ಚಮಚದ ಸಹಾಯದಿಂದ ನುಗ್ಗೆಕಾಯಿಯನ್ನು ಮ್ಯಾಶ್ ಮಾಡಿ.

    MORE
    GALLERIES

  • 78

    Morning Breakfast: ಬೆಳಗ್ಗೆ ತಿಂಡಿ ಬದಲು ಸೇವಿಸಿ ನುಗ್ಗೆಕಾಯಿ ಸೂಪ್; ನಿಯಂತ್ರಣಕ್ಕೆ ಬರುತ್ತೆ ಕೊಲೆಸ್ಟ್ರಾಲ್

    ನಂತರ ಜರಡಿಯಿಂದ ನೀರನ್ನು ಫಿಲ್ಟರ್ ಮಾಡಿ. ಅದನ್ನು ಪ್ರತ್ಯೇಕ ಪಾತ್ರೆಗೆ ಹಾಕಿರಿ. ಈಗ ಅದಕ್ಕೆ ಕರಿಮೆಣಸು ಮತ್ತು ಸೇರಿಸಿ ಮಿಶ್ರಣ ಮಾಡಿ. ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ ಮತ್ತು ಬಿಸಿಯಾಗಿ ಬಡಿಸಿ.

    MORE
    GALLERIES

  • 88

    Morning Breakfast: ಬೆಳಗ್ಗೆ ತಿಂಡಿ ಬದಲು ಸೇವಿಸಿ ನುಗ್ಗೆಕಾಯಿ ಸೂಪ್; ನಿಯಂತ್ರಣಕ್ಕೆ ಬರುತ್ತೆ ಕೊಲೆಸ್ಟ್ರಾಲ್

    ಈ ಸೂಪ್ ರಕ್ತದ ಸಕ್ಕರೆ ಸಮತೋಲನಗೊಳಿಸುತ್ತದೆ. ಡ್ರಮ್ ಸ್ಟಿಕ್‌ನಲ್ಲಿರುವ ಸಂಯುಕ್ತ ವಸ್ತುವು ರಕ್ತದ ಗ್ಲೂಕೋಸ್ ಮಟ್ಟ ಕಾಪಾಡುತ್ತದೆ. ಅದರ ಎಲೆಗಳು ಸಹ ಮಧುಮೇಹ ಸಮಸ್ಯೆ ಕಡಿಮೆ ಮಾಡಲು ಪ್ರಯೋಜನಕಾರಿ.

    MORE
    GALLERIES