Morning Breakfast: ಬೆಳಗ್ಗೆ ನಿಮಗೆ ಸಿಗುವ ಬಿಡುವಿನ ಸಮಯದಲ್ಲಿ ತಯಾರಿಸಿ ಎಗ್ ಮಸಾಲಾ ಫ್ರೆಂಚ್ ಟೋಸ್ಟ್

ಆರೋಗ್ಯ ಮತ್ತು ಶಕ್ತಿ ಪಡೆಯಲು ಆಹಾರ ತುಂಬಾ ಮುಖ್ಯ. ಅದರಲ್ಲೂ ಬೆಳಗ್ಗಿನ ಉಪಹಾರ ಸಾಕಷ್ಟು ಉತ್ತಮ ಪೋಷಕಾಂಶಗಳಿಂದ ತುಂಬಿರಬೇಕು. ಯಾಕಂದ್ರೆ ಬೆಳಗಿನ ತಿಂಡಿ ದಿನದ ಮೊದಲ ಮತ್ತು ಮುಖ್ಯವಾದ ಊಟವಾಗಿದೆ. ಹಾಗಾಗಿ ಬೆಳಗಿನ ತಿಂಡಿಯು ಸಾಕಷ್ಟು ಪ್ರಾಮುಖ್ಯತೆ ಪಡೆಯುತ್ತದೆ.

First published:

  • 18

    MORE
    GALLERIES

  • 28

    Morning Breakfast: ಬೆಳಗ್ಗೆ ನಿಮಗೆ ಸಿಗುವ ಬಿಡುವಿನ ಸಮಯದಲ್ಲಿ ತಯಾರಿಸಿ ಎಗ್ ಮಸಾಲಾ ಫ್ರೆಂಚ್ ಟೋಸ್ಟ್

    ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಮನೆಯಿಂದ ಹೊರಗೆ ಹೋಗಬಾರದು ಅಂತಾ ವೈದ್ಯರು ಕೂಡ ಸಲಹೆ ನೀಡುತ್ತಾರೆ. ಬೆಳಗಿನ ಉಪಹಾರ ತಿಂದ ನಂತರ ನಿಮ್ಮ ಮನಸ್ಸು ಮತ್ತು ಹೊಟ್ಟೆ ಎರಡೂ ತುಂಬುವಂತಿರಬೇಕು. ಇಂದಿನ ದಿನಗಳಲ್ಲಿ ಬಿಡುವಿಲ್ಲದ ಜೀವನಶೈಲಿಯಿಂದಾಗಿ ಜನರು ಬೆಳಗಿನ ಉಪಹಾರ ಮಾಡಿ ಸೇವಿಸಲು ಸಾಧ್ಯವಾಗಲ್ಲ.

    MORE
    GALLERIES

  • 38

    Morning Breakfast: ಬೆಳಗ್ಗೆ ನಿಮಗೆ ಸಿಗುವ ಬಿಡುವಿನ ಸಮಯದಲ್ಲಿ ತಯಾರಿಸಿ ಎಗ್ ಮಸಾಲಾ ಫ್ರೆಂಚ್ ಟೋಸ್ಟ್

    ಹೀಗಾಗಿ ತುಂಬಾ ಜನರು ಧಾವಂತದಲ್ಲಿ ಬೆಳಗಿನ ತಿಂಡಿ ತಿನ್ನದೆಯೇ ಆಫೀಸ್, ಕೆಲಸಕ್ಕೆ ಹೋಗ್ತಾರೆ. ಆದ್ರೆ ಹೀಗೆ ಬೆಳಗಿನ ತಿಂಡಿ ತಿನ್ನದೆಯೇ ಕೆಲಸಕ್ಕೆ ಹೋಗುವುದು ಹೊಟ್ಟೆಯ ಅಸ್ವಸ್ಥತೆ ಸಮಸ್ಯೆ ಹುಟ್ಟು ಹಾಕುತ್ತದೆ. ಹಾಗಾಗಿ ನಿಮಗೆ ಸಿಗುವ ಸಮಯದಲ್ಲಿ ಬೇಗ ರೆಡಿ ಮಾಡಬಹುದಾದ ರೆಸಿಪಿ ಮಾಡಿ ಸೇವಿಸಿ.

    MORE
    GALLERIES

  • 48

    Morning Breakfast: ಬೆಳಗ್ಗೆ ನಿಮಗೆ ಸಿಗುವ ಬಿಡುವಿನ ಸಮಯದಲ್ಲಿ ತಯಾರಿಸಿ ಎಗ್ ಮಸಾಲಾ ಫ್ರೆಂಚ್ ಟೋಸ್ಟ್

    ದಿನವೂ ಒಂದೇ ತರಹದ ತಿಂಡಿ ತಿನ್ನುವುದರಿಂದ ಬೇಸರವಾಗುತ್ತದೆ. ತುಂಬಾ ಜನರು ಮೊಟ್ಟೆ ಮತ್ತು ಬ್ರೆಡ್ ತಿನ್ನೋಕೆ ಇಷ್ಟ ಪಡ್ತಾರೆ. ಬೆಳಗಿನ ತಿಂಡಿಗೆ ಮೊಟ್ಟೆ ಉತ್ತಮ ಆಯ್ಕೆ ಆಗಿದೆ. ಮೊಟ್ಟೆ ಖಾದ್ಯಗಳನ್ನು ನೀವು ಕೇವಲ 10 ನಿಮಿಷಗಳಲ್ಲಿ ತಯಾರಿಸಬಹುದು.

    MORE
    GALLERIES

  • 58

    Morning Breakfast: ಬೆಳಗ್ಗೆ ನಿಮಗೆ ಸಿಗುವ ಬಿಡುವಿನ ಸಮಯದಲ್ಲಿ ತಯಾರಿಸಿ ಎಗ್ ಮಸಾಲಾ ಫ್ರೆಂಚ್ ಟೋಸ್ಟ್

    ಹಾಗಾಗಿ ಇಂದು ನಾವು ತ್ವರಿತವಾಗಿ ತಯಾರಿಸಬಹುದಾದ ಮೊಟ್ಟೆ ಮಸಾಲೆಯುಕ್ತ ಫ್ರೆಂಚ್ ಟೋಸ್ಟ್ ಖಾದ್ಯ ಹೇಗೆ ಮಾಡುವುದು ಅಂತಾ ತಿಳಿಯೋಣ. ಇದು ತಿನ್ನಲು ತುಂಬಾ ರುಚಿಯಾಗಿರುತ್ತದೆ. ನಿಮಗೆ ಇಷ್ಟವಾದಂತೆ ಗರಿಗರಿಯಾಗಿ ಮಾಡಬಹುದು. ಕೆಚಪ್ ಮತ್ತು ಪುದೀನಾ ಚಟ್ನಿ ಜೊತೆ ತಿನ್ನಬಹುದು.

    MORE
    GALLERIES

  • 68

    Morning Breakfast: ಬೆಳಗ್ಗೆ ನಿಮಗೆ ಸಿಗುವ ಬಿಡುವಿನ ಸಮಯದಲ್ಲಿ ತಯಾರಿಸಿ ಎಗ್ ಮಸಾಲಾ ಫ್ರೆಂಚ್ ಟೋಸ್ಟ್

    ಮಸಾಲೆಯುಕ್ತ ಫ್ರೆಂಚ್ ಟೋಸ್ಟ್ ಮಾಡಲು ಬೇಕಾಗುವ ಸಾಮಗ್ರಿಗಳು ಹೀಗಿವೆ. ಬ್ರೆಡ್ ಪೀಸ್ 4, 2 ಮೊಟ್ಟೆ, 6 ಟೀಸ್ಪೂನ್ ಹಾಲು, 1/2 ಟೀಸ್ಪೂನ್ ಉಪ್ಪು, 1 ಸಣ್ಣ ಟೊಮೆಟೊ, 1 ಸಣ್ಣ ಈರುಳ್ಳಿ, 2-3 ಹಸಿರು ಮೆಣಸಿನಕಾಯಿ, ಹುರಿಯಲು ಎಣ್ಣೆ / ಬೆಣ್ಣೆ, 1/2 ಟೀಸ್ಪೂನ್ ಕೆಂಪು ಮೆಣಸಿನ ಪುಡಿ, 1/4 ಟೀಸ್ಪೂನ್ ಕರಿಮೆಣಸು ಪುಡಿ ಬೇಕು.

    MORE
    GALLERIES

  • 78

    Morning Breakfast: ಬೆಳಗ್ಗೆ ನಿಮಗೆ ಸಿಗುವ ಬಿಡುವಿನ ಸಮಯದಲ್ಲಿ ತಯಾರಿಸಿ ಎಗ್ ಮಸಾಲಾ ಫ್ರೆಂಚ್ ಟೋಸ್ಟ್

    ಮೊದಲು ಹಸಿರು ಮೆಣಸಿನಕಾಯಿ ಮತ್ತು ಟೊಮೆಟೊ, ಈರುಳ್ಳಿಯನ್ನು ನುಣ್ಣಗೆ ಕತ್ತರಿಸಿ. ನಂತರ ಬ್ರೆಡ್ ಅನ್ನು ಎರಡು ಭಾಗಗಳಾಗಿ ಕತ್ತರಿಸಿ. ಪಾತ್ರೆಯಲ್ಲಿ ಮೊಟ್ಟೆ ಒಡೆದು ಹಾಕಿ. ಅದಕ್ಕೆ ಕೆಂಪು ಮೆಣಸಿನಕಾಯಿ, ಉಪ್ಪು, ಹಾಲು ಮತ್ತು ಕರಿಮೆಣಸು ಸೇರಿಸಿ, ಮಿಶ್ರಣ ಮಾಡಿ.

    MORE
    GALLERIES

  • 88

    Morning Breakfast: ಬೆಳಗ್ಗೆ ನಿಮಗೆ ಸಿಗುವ ಬಿಡುವಿನ ಸಮಯದಲ್ಲಿ ತಯಾರಿಸಿ ಎಗ್ ಮಸಾಲಾ ಫ್ರೆಂಚ್ ಟೋಸ್ಟ್

    ಬಾಣಲೆ ಬಿಸಿ ಮಾಡಿ. ಈಗ ಬ್ರೆಡ್ ಪೀಸ್ ಗಳನ್ನು ಮೊಟ್ಟೆಯಲ್ಲಿ ಅದ್ದಿ ಪ್ಯಾನ್ ಗೆ ಎಣ್ಣೆ ಹಾಕಿ ಬಿಸಿ ಆದ ಕೂಡಲೇ ಅದ್ದಿದ ಬ್ರೆಡ್ ಪೀಸ್ ಗಳನ್ನು ಪ್ಯಾನ್ ಗೆ ಹಾಕಿ ಬೇಯಿಸಿ. ಎರಡೂ ಬದಿ ಚೆನ್ನಾಗಿ ಬೇಯಿಸಿ, ನಂತರ ಸರ್ವ್ ಮಾಡಿ.

    MORE
    GALLERIES