Morning Breakfast: ಬೆಳಗಿನ ಉಪಹಾರಕ್ಕೆ ರಕ್ತದ ಸಕ್ಕರೆ ಮಟ್ಟ ನಿಯಂತ್ರಿಸುವ ಪಾಲಕ್ ದಾಲ್ ಖಿಚಡಿ

ನೀವು ಹಲವು ಬಾರಿ ಪಾಲಕ್ ಖಾದ್ಯಗಳನ್ನು ತಿಂದಿರಬಹುದು. ಪಾಲಕ್ ಆರೋಗ್ಯಕರ ಪೋಷಕಾಂಶಗಳಿಂದ ಸಮೃದ್ಧವಾಗಿರುವ ಸೊಪ್ಪು. ಪಾಲಕ್ ಒಟ್ಟಾರೆ ಆರೋಗ್ಯ ಸುಧಾರಿಸುವಲ್ಲಿ ಸಾಕಷ್ಟು ಪ್ರಯೋಜನಕಾರಿ ಆಗಿದೆ. ಇಂದು ಪಾಲಕ್ ಸೊಪ್ಪಿನ ದಾಲ್ ಖಿಚಡಿ ಖಾದ್ಯ ತಯಾರಿಕೆಯ ಬಗ್ಗೆ ನೋಡೋಣ.

First published:

  • 18

    Morning Breakfast: ಬೆಳಗಿನ ಉಪಹಾರಕ್ಕೆ ರಕ್ತದ ಸಕ್ಕರೆ ಮಟ್ಟ ನಿಯಂತ್ರಿಸುವ ಪಾಲಕ್ ದಾಲ್ ಖಿಚಡಿ

    ಬೆಳಗಿನ ತಿಂಡಿಗೆ ನೀವು ಪಾಲಕ್ ದಾಲ್ ಖಿಚಡಿ ಮಾಡಿ ಎಂದಾದರೂ ತಿಂದಿದ್ದೀರಾ? ಪಾಲಕ್ ದಾಲ್ ಖಿಚಡಿ ಆರೋಗ್ಯಕರ ಪದಾರ್ಥವಾಗಿದೆ. ವಾರದಲ್ಲಿ ಒಮ್ಮೆ ಬೆಳಗಿನ ತಿಂಡಿಗೆ ಪಾಲಕ್ ದಾಲ್ ಖಿಚಡಿ ಮಾಡಿ ತಿನ್ನಿರಿ.

    MORE
    GALLERIES

  • 28

    Morning Breakfast: ಬೆಳಗಿನ ಉಪಹಾರಕ್ಕೆ ರಕ್ತದ ಸಕ್ಕರೆ ಮಟ್ಟ ನಿಯಂತ್ರಿಸುವ ಪಾಲಕ್ ದಾಲ್ ಖಿಚಡಿ

    ಪಾಲಕ್ ದಾಲ್ ಖಿಚಡಿ ರೆಸಿಪಿಯು ಮಧುಮೇಹ ರೋಗಿಗಳಿಗೆ ಸಾಕಷ್ಟು ಲಾಭಕಾರಿ ಆಗಿದೆ. ಮಧುಮೇಹಿಗಳು ಸಾಮಾನ್ಯವಾಗಿ ತಮ್ಮ ಆಹಾರದ ಬಗ್ಗೆ ತುಂಬಾ ಕಾಳಜಿ ವಹಿಸುತ್ತಾರೆ. ಮಧುಮೇಹ ಕಾಯಿಲೆ ನಿಯಂತ್ರಿಸಲು ಮೊದಲು ಆಹಾರ ಕ್ರಮ ನಿಯಂತ್ರಿಸುವುದು ಬಹಳ ಮುಖ್ಯ.

    MORE
    GALLERIES

  • 38

    Morning Breakfast: ಬೆಳಗಿನ ಉಪಹಾರಕ್ಕೆ ರಕ್ತದ ಸಕ್ಕರೆ ಮಟ್ಟ ನಿಯಂತ್ರಿಸುವ ಪಾಲಕ್ ದಾಲ್ ಖಿಚಡಿ

    ಆಹಾರ ಕ್ರಮದಲ್ಲಿ ಮಾಡುವ ಸಣ್ಣ ತಪ್ಪು ಸಹ ರಕ್ತದ ಸಕ್ಕರೆ ಮಟ್ಟ ತ್ವರಿತವಾಗಿ ಹೆಚ್ಚಿಸುತ್ತದೆ. ದೇಹದ ರಕ್ತದ ಸಕ್ಕರೆ ಹೆಚ್ಚಳವು ವಿವಿಧ ಸಮಸ್ಯೆ ಉಂಟು ಮಾಡುತ್ತದೆ. ನಿಯಮಿತ ಆಹಾರದಲ್ಲಿ ಕೆಲವು ಸೂಕ್ತವಾದ ಬದಲಾವಣೆ ಮಾಡಿ, ರಕ್ತದ ಸಕ್ಕರೆ ಮಟ್ಟ ನಿಯಂತ್ರಿಸಬಹುದು.

    MORE
    GALLERIES

  • 48

    Morning Breakfast: ಬೆಳಗಿನ ಉಪಹಾರಕ್ಕೆ ರಕ್ತದ ಸಕ್ಕರೆ ಮಟ್ಟ ನಿಯಂತ್ರಿಸುವ ಪಾಲಕ್ ದಾಲ್ ಖಿಚಡಿ

    ಇಂದು ನಾವು ಮಧುಮೇಹ ರೋಗಿಗಳಿಗೆ ಸಹಾಯಕವಾಗುವ ರುಚಿಕರ ಮತ್ತು ಪೌಷ್ಟಿಕಾಂಶ ಸಮೃದ್ಧ ಪಾಲಕ್ ದಾಲ್ ಖಿಚಡಿಯ ಪಾಕವಿಧಾನದ ಬಗ್ಗೆ ನೋಡೋಣ. ಪಾಲಕ್ ದಾಲ್ ಖಿಚಡಿಗೆ ಬಳಸುವ ಪದಾರ್ಥಗಳು ಮಧುಮೇಹ ನಿಯಂತ್ರಣಕ್ಕೆ ಪರಿಣಾಮಕಾರಿ.

    MORE
    GALLERIES

  • 58

    Morning Breakfast: ಬೆಳಗಿನ ಉಪಹಾರಕ್ಕೆ ರಕ್ತದ ಸಕ್ಕರೆ ಮಟ್ಟ ನಿಯಂತ್ರಿಸುವ ಪಾಲಕ್ ದಾಲ್ ಖಿಚಡಿ

    ಪಾಲಕ್ ದಾಲ್ ಖಿಚಡಿಯು ದೇಹಕ್ಕೆ ಶಕ್ತಿ ಒದಗಿಸುತ್ತದೆ. ಒಟ್ಟಾರೆ ಆರೋಗ್ಯ ಕಾಪಾಡುತ್ತದೆ. ಬೇಕಾಗುವ ಪದಾರ್ಥಗಳು ಮೂಂಗ್ ದಾಲ್ - 1 ಕಪ್, ಪಾಲಕ - 2 ಕಪ್, ನೆನೆಸಿದ ಅಕ್ಕಿ - ಬಿಳಿ ಅಥವಾ ಕಂದು - ½ ಕಪ್, ಅರಿಶಿನ - ¼ ಟೀಸ್ಪೂನ್, ದಾಲ್ಚಿನ್ನಿ, ಜೀರಿಗೆ - ¼ ಟೀಸ್ಪೂನ್, ಸಣ್ಣದಾಗಿ ಕೊಚ್ಚಿದ ಹಸಿರು ಮೆಣಸಿನಕಾಯಿ – 2,

    MORE
    GALLERIES

  • 68

    Morning Breakfast: ಬೆಳಗಿನ ಉಪಹಾರಕ್ಕೆ ರಕ್ತದ ಸಕ್ಕರೆ ಮಟ್ಟ ನಿಯಂತ್ರಿಸುವ ಪಾಲಕ್ ದಾಲ್ ಖಿಚಡಿ

    ಲವಂಗದ ಎಲೆ, ಸಣ್ಣದಾಗಿ ಕೊಚ್ಚಿದ ಈರುಳ್ಳಿ – 1, ಬೆಳ್ಳುಳ್ಳಿ – 5, 7 ಲವಂಗ, ಸಣ್ಣದಾಗಿ ಕೊಚ್ಚಿದ ಟೊಮೆಟೊ, ಗರಂ ಮಸಾಲಾ - ¼ ಟೀಸ್ಪೂನ್, ಇಂಗು, ಉಪ್ಪು ರುಚಿಗೆ ತಕ್ಕಷ್ಟು, ತುಪ್ಪ ಬೇಕು. ಮೊದಲು ಪ್ರೆಶರ್ ಕುಕ್ಕರ್‌ನಲ್ಲಿ ಹೆಸರು ಬೇಳೆ, ಅಕ್ಕಿ, ಉಪ್ಪು, ಅರಿಶಿನ ಮತ್ತು ನೀರನ್ನು ಹಾಕಿ 3 ಸೀಟಿ ಕೂಗಿಸಿ.

    MORE
    GALLERIES

  • 78

    Morning Breakfast: ಬೆಳಗಿನ ಉಪಹಾರಕ್ಕೆ ರಕ್ತದ ಸಕ್ಕರೆ ಮಟ್ಟ ನಿಯಂತ್ರಿಸುವ ಪಾಲಕ್ ದಾಲ್ ಖಿಚಡಿ

    ಪಾಲಕ ಎಲೆಗಳನ್ನು ಕತ್ತರಿಸಿ. ಪ್ಯಾನ್ ಗೆ ತುಪ್ಪ ಹಾಕಿ ಬಿಸಿ ಮಾಡಿ. ಅದಕ್ಕೆ ದಾಲ್ಚಿನ್ನಿ, ಜೀರಿಗೆ, ಹಸಿರು ಮೆಣಸಿನಕಾಯಿ, ಬೇ ಎಲೆ, ಇಂಗು ಮತ್ತು ಬೆಳ್ಳುಳ್ಳಿ ಹಾಕಿ. ಫ್ರೈ ಮಾಡಿ. ನಂತರ ಗರಂ ಮಸಾಲಾ, ಉಪ್ಪು, ಟೊಮೆಟೊ ಮತ್ತು ಪಾಲಕ್ ಚೆನ್ನಾಗಿ ಫ್ರೈ ಮಾಡಿ. ನಂತರ ಪಾಲಕ್ ಮಿಶ್ರಣವನ್ನು ತಯಾರಿಸಿದ ಅಕ್ಕಿ ಮತ್ತು ದಾಲ್ ಖಿಚಡಿಗೆ ಸೇರಿಸಿ.

    MORE
    GALLERIES

  • 88

    Morning Breakfast: ಬೆಳಗಿನ ಉಪಹಾರಕ್ಕೆ ರಕ್ತದ ಸಕ್ಕರೆ ಮಟ್ಟ ನಿಯಂತ್ರಿಸುವ ಪಾಲಕ್ ದಾಲ್ ಖಿಚಡಿ

    ನಂತರ ಸರಿಯಾಗಿ ಮಿಶ್ರಣ ಮಾಡಿ. ಸ್ವಲ್ಪ ಬೇಯಿಸಿ. ಕೊನೆಗೆ ತುಪ್ಪ ಹಾಕಿ. ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ. ಬಿಸಿಯಾಗಿ ಸರ್ವ್ ಮಾಡಿ. ಪಾಲಕ್ ದಾಲ್ ಖಿಚಡಿಯು ರಕ್ತದ ಸಕ್ಕರೆ ಮಟ್ಟ ಕಾಪಾಡುತ್ತದೆ. ವಾರದಲ್ಲೊಮ್ಮೆ ಪಾಲಕ್ ದಾಲ್ ಖಿಚಡಿ ಸೇವಿಸಿ.

    MORE
    GALLERIES