ಯಾವುದೇ ದೈಹಿಕ ಅಥವಾ ಮಾನಸಿಕ ಕಾರಣದಿಂದ ನಮ್ಮ ಮೂಡ್ ಆಫ್ ಆಗಿರಬಹುದು. ನಗುತ್ತಾ ಇದ್ದವರ ಮೂಡ್ ಒಮ್ಮೊಮ್ಮೆ ಇದ್ದಕ್ಕಿದ್ದಂತೆ ಆಫ್ ಆಗಬಹುದು. ಮೂಡ್ ಆಫ್ನಿಂದ ಕೆಲವೊಮ್ಮೆ ನಮ್ಮ ಮನಸ್ಥಿತಿಗೆ ತೊಂದರೆಯಾಗಬಹುದು. ಆದರೆ ಅದೇ ಸ್ವಭಾವವಾಗಿ ಬಿಟ್ಟರೆ, ಮುಂದೊಂದು ದಿನ ಸಮಸ್ಯೆ ಆಗಿ ಪರಿಣಮಿಸಬಹುದು. ಇದಕ್ಕೆ ನೀವು ಮನೋವೈದ್ಯರ ಸಹಾಯವನ್ನು ತೆಗೆದುಕೊಳ್ಳಬಹುದು. ಹಾಗೆಯೇ ಕೆಲವು ಸಲಹೆಗಳನ್ನು ಅನುಸರಿಸಿ. ಮೂಡ್ ಆಫ್ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು.