ಮಾನ್ಸೂನ್ ಕಾಲದಲ್ಲಿ ಮೂಸಂಬಿ ಹಣ್ಣುಗಳು ಹೆಚ್ಚಾಗಿ ಸಿಗುತ್ತದೆ. ವಿಟಮಿನ್ ಎ ಮತ್ತು ಬಿ ಕಾಂಪ್ಲೆಕ್ಸ್, ಫ್ಲಾವೊನೈಡ್, ಅಮೈನೋ ಆ್ಯಸಿಡ್, ಕ್ಯಾಲ್ಸಿಯಂ, ಅಯೋಡಿನ್, ಫಾಸ್ಪರಸ್, ಸೋಡಿಯಂ, ಮ್ಯಾಂಗನೀಸ್ ಮೊದಲಾದ ಅಂಶಗಳು ಮೂಸಂಬಿಯಲ್ಲಿ ಹೇರಳವಾಗಿದೆ. ಅಂಟಿ-ಆ್ಯಕ್ಸಿಡೆಂಟ್ ಅಂಶಗಳು ಇದರಲ್ಲಿ ಹೇರಳವಾಗಿರುವುದರಿಂದ ಮಳೆಗಾಲದ ಉಪಯುಕ್ತ ಹಣ್ಣುಗಳಲ್ಲಿ ಮೂಸಂಬಿಗೆ ಮೊದಲ ಸ್ಥಾನವಿದೆ.