ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ಸದ್ಯ ಸ್ಯಾಂಡಲ್ವುಡ್ನಲ್ಲಿ ನಾಯಕಿಯಾಗಿ ಎಂಟ್ರಿ ಕೊಡಲಿದ್ದಾರೆ ಅನ್ನೋ ಸುದ್ದಿ ಹರಿದಾಡುತ್ತಿದೆ. ಆದರೆ ಲಾಕ್ಡೌನ್ನಿಂದಾಗಿ ತಮನ್ನಾ ಮನೆಯಲ್ಲೇ ಕಾಲ ಕಳೆಯುತ್ತಿದ್ದಾರೆ. ಮನೆಯಲ್ಲಿ ಫಿಟ್ನೆಸ್ಗಾಗಿ ಏನೆಲ್ಲ ಸಾಧ್ಯವೋ ಅದನ್ನೆಲ್ಲ ಮಾಡುತ್ತಿದ್ದಾರೆ. ಆದರೆ ಅವರ ಲೆಟೆಸ್ಟ್ ಫೋಟೋ ಒಂದು ಸದ್ಯ ನೆಟ್ಟಿಗರಿಗೆ ಸಖತ್ ಇಷ್ಟವಾಗಿದೆ. (ಚಿತ್ರಗಳು ಕೃಪೆ: ತಮನ್ನಾ ಭಾಟಿಯಾ ಇನ್ಸ್ಟಾಗ್ರಾಂ ಖಾತೆ)
News18 Kannada | July 25, 2020, 3:55 PM IST
1/ 11
ಮಿಲ್ಕಿ ಬ್ಯೂಟಿ ಎಂದೇ ಖ್ಯಾತರಾಗಿರುವ ತಮನ್ನಾ, ಫಿಟ್ನೆಸ್ ಫ್ರೀಕ್ ಕೂಡ ಹೌದು.
2/ 11
ನಿತ್ಯ ಯೋಗ ಹಾಗೂ ವ್ಯಾಯಾಮ ಅಂತ ಗಂಟೆಗಟ್ಟಲೆ ಬೆವರು ಸುರಿಸುತ್ತಾರೆ ನಟಿ ತಮನ್ನಾ.
3/ 11
ಮಳೆ ಇರಲಿ... ಗಾಳಿ ಇರಲಿ... ಅವರು ನಿತ್ಯ ವ್ಯಾಯಾಮ ಮಾಡೋದನ್ನು ಮಾತ್ರ ನಿಲ್ಲಿಸುವುದಿಲ್ಲ. ಈ ಫೋಟೋದಲ್ಲಿ ತಮನ್ನಾ ಮಳೆಯಲ್ಲೇ ವರ್ಕೌಟ್ ಮಾಡುತ್ತಿದ್ದಾರೆ.
4/ 11
ಮುಂಗಾರು ಮಳೆ, ಅದರಲ್ಲೂ ಮುಂಬೈನಲ್ಲಿದ್ದಾಗ ಮಳೆ ಬಂದರಂತೂ ಅವರ ಖುಷಿಗೇ ಪಾರವೇ ಇಲ್ಲದಂತಾಗುತ್ತದೆಯಂತೆ. ಅದಕ್ಕೆ ಅವರು ಮಳೆಯಲ್ಲೂ ವ್ಯಾಯಾಮ ಮಾಡೋಕೆ ನಿಂತು ಬಿಡುತ್ತಾರಂತೆ.
5/ 11
ಮನೆಯಂಗಳದಲ್ಲಿ ನಿತ್ಯ ಬೆಳಿಗ್ಗೆ ವ್ಯಾಯಾಮ ಮಾಡುವುದಕ್ಕಿಂತ ಖುಷಿಯಾದ ಕೆಲಸ ಮತ್ತೊಂದಿಲ್ಲ ಎನ್ನುತ್ತಾರೆ.
6/ 11
ಅವರಿಗಿರುವ ಫಿಟ್ನೆಸ್ ಕಾಳಜಿಗೆ ಕಾರಣ ಅವರ ಪೋಷಕರಂತೆ.
7/ 11
ಹೀಗೆಂದು, ಇನ್ಸ್ಟಾಗ್ರಾಂನಲ್ಲಿ ಇತ್ತೀಚೆಗೆ ಅಭಿಮಾನಿಯೊಬ್ಬರು ಕೇಳಿದ್ದ ಪ್ರಶ್ನೆಗೆ ಉತ್ತರಿಸಿದ್ದರು.
8/ 11
ಮನೆಯಲ್ಲಿ ಯೋಗಾಸನದ ಅಭ್ಯಾಸ ಮಾಡುತ್ತಿರುವ ತಮನ್ನಾ
9/ 11
ಹೆಚ್ಚಿನ ಸಮಯವನ್ನು ಯೋಗಾಸನಕ್ಕೆ ಮೀಸಲಿಡುತ್ತಾರಂತೆ ಮಿಲ್ಕಿ ಬ್ಯೂಟಿ.
10/ 11
ಮನೆಯಲ್ಲಿ ಯೋಗಾಸನದ ಅಭ್ಯಾಸ ಮಾಡುತ್ತಿರುವ ತಮನ್ನಾ
11/ 11
ತಮನ್ನಾ ಕೇವಲ ವರ್ಕೌಟ್ ಅಲ್ಲದೆ, ಆಗಾಗ ಚಾರಣ ಅಂತ ಕಾಡು ಸುತ್ತೋಕೆ ಹೋಗುತ್ತಿರುತ್ತಾರೆ.