Migraine Problem: ಮೈಗ್ರೇನ್ ಸಮಸ್ಯೆ ಕಡಿಮೆ ಮಾಡಲು ಈ ಆಹಾರ ಪದಾರ್ಥ ತಿನ್ನಲು ಆರಂಭಿಸಿ!

ಎಲ್ಲರೂ ಒಂದಲ್ಲ ಒಂದು ದಿನ ತಲೆನೋವು ಸಮಸ್ಯೆ ಎದುರಿಸುತ್ತಾರೆ. ಆದರೆ ಮೈಗ್ರೇನ್‌ನಿಂದ ಬಳಲುತ್ತಿರುವ ವ್ಯಕ್ತಿಯು ಈ ನೋವಿಗೆ ಹೆಚ್ಚು ತುತ್ತಾಗುತ್ತಾರೆ. ಮೈಗ್ರೇನ್‌ನಲ್ಲಿ ನಿಮ್ಮ ಆಹಾರಕ್ರಮವು ಬಹಳ ಮುಖ್ಯ ಪಾತ್ರ ವಹಿಸುತ್ತದೆ ಎಂದು ಹಲವು ಅಧ್ಯಯನಗಳು ಹೇಳಿವೆ. ಈ ಮೈಗ್ರೇನ್ ಸಮಸ್ಯೆ ಕಡಿಮೆ ಮಾಡುವ ಆಹಾರಗಳ ಬಗ್ಗೆ ನೋಡೋಣ.

First published:

  • 16

    Migraine Problem: ಮೈಗ್ರೇನ್ ಸಮಸ್ಯೆ ಕಡಿಮೆ ಮಾಡಲು ಈ ಆಹಾರ ಪದಾರ್ಥ ತಿನ್ನಲು ಆರಂಭಿಸಿ!

    ಕೆಲವು ಆಹಾರಗಳು ಮೈಗ್ರೇನ್ ಸಮಸ್ಯೆ ಉಂಟು ಮಾಡುವ ಸಾಧ್ಯತೆ ಹೆಚ್ಚು. ಮೈಗ್ರೇನ್ ಸಮಸ್ಯೆ ತಡೆಗೆ ಆಹಾರದಲ್ಲಿ ಉತ್ತಮ ಬದಲಾವಣೆ ಮಾಡುವುದು ಅತ್ಯಂತ ಮುಖ್ಯ. ಔಷಧ ಸೇವನೆ ಮಾಡದೆ, ಕೇವಲ ಉತ್ತಮ ಆಹಾರ ಪದ್ಧತಿ ಫಾಲೋ ಮಾಡುವ ಮೂಲಕ ಮೈಗ್ರೇನ್ ಸಮಸ್ಯೆ ನಿಯಂತ್ರಿಸಬಹುದು. ಅದರ ಬಗ್ಗೆ ತಿಳಿಯೋಣ.

    MORE
    GALLERIES

  • 26

    Migraine Problem: ಮೈಗ್ರೇನ್ ಸಮಸ್ಯೆ ಕಡಿಮೆ ಮಾಡಲು ಈ ಆಹಾರ ಪದಾರ್ಥ ತಿನ್ನಲು ಆರಂಭಿಸಿ!

    ಮೆಗ್ನೀಸಿಯಮ್, ಒಮೆಗಾ-3 ಕೊಬ್ಬಿನಾಮ್ಲ, ಕೀಟೋ ಸ್ನೇಹಿ ಆಹಾರ ಮತ್ತು ಕೆಫೀನ್ ಮೈಗ್ರೇನ್ ತಡೆಯಲು ಸಹಾಯ ಮಾಡುತ್ತದೆ. ನಿಮ್ಮ ಆಹಾರದಲ್ಲಿ ಹಸಿರು ಎಲೆ, ಆವಕಾಡೊ ಮತ್ತು ಮೀನಿನಂತಹ ಆಹಾರ ಸೇರಿಸಿ.

    MORE
    GALLERIES

  • 36

    Migraine Problem: ಮೈಗ್ರೇನ್ ಸಮಸ್ಯೆ ಕಡಿಮೆ ಮಾಡಲು ಈ ಆಹಾರ ಪದಾರ್ಥ ತಿನ್ನಲು ಆರಂಭಿಸಿ!

    ಮೈಗ್ರೇನ್ ಸಮಸ್ಯೆ ಕಡಿಮೆ ಮಾಡಲು ಶುಂಠಿ ಬಳಕೆ ಸಹಕಾರಿ. ಶುಂಠಿಯಲ್ಲಿ ಉರಿಯೂತ ಶಮನಕಾರಿ ಗುಣವಿದೆ. ಇದು ಮೈಗ್ರೇನ್ ನೋವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದನ್ನು ಶುಂಠಿ ಚಹಾ, ಶುಂಠಿ ಎಣ್ಣೆ ಅಥವಾ ಶುಂಠಿ ಪೂರಕ ಸೇರಿ ಹಲವು ರೂಪಗಳಲ್ಲಿ ಬಳಸಬಹುದು.

    MORE
    GALLERIES

  • 46

    Migraine Problem: ಮೈಗ್ರೇನ್ ಸಮಸ್ಯೆ ಕಡಿಮೆ ಮಾಡಲು ಈ ಆಹಾರ ಪದಾರ್ಥ ತಿನ್ನಲು ಆರಂಭಿಸಿ!

    ಸೊಪ್ಪು, ಪಾಲಕ್ ಸೊಪ್ಪು ಸಹ ಸಾಕಷ್ಟು ಪೋಷಕಾಂಶ ಹೊಂದಿದೆ. ಮೆಗ್ನೀಸಿಯಮ್ ಮತ್ತು ಇತರೆ ಪ್ರಮುಖ ಪೋಷಕಾಂಶ ಹೊಂದಿದೆ. ಇದು ಮೈಗ್ರೇನ್ ಅನ್ನು ತಡೆಯಲು ಸಹಾಯ ಮಾಡುತ್ತದೆ. ಸಿಹಿ ಆಲೂಗಡ್ಡೆ ವಿಟಮಿನ್ ಬಿ 6 ನಲ್ಲಿ ಸಮೃದ್ಧವಾಗಿದೆ. ಇದು ಮೈಗ್ರೇನ್‌ನ ಆವರ್ತನ ಮತ್ತು ತೀವ್ರತೆ ಕಡಿಮೆ ಮಾಡುತ್ತದೆ.

    MORE
    GALLERIES

  • 56

    Migraine Problem: ಮೈಗ್ರೇನ್ ಸಮಸ್ಯೆ ಕಡಿಮೆ ಮಾಡಲು ಈ ಆಹಾರ ಪದಾರ್ಥ ತಿನ್ನಲು ಆರಂಭಿಸಿ!

    ಚೆರ್ರಿಗಳು ಉರಿಯೂತ ಗುಣಲಕ್ಷಣ ಹೊಂದಿರುವ ಸಂಯುಕ್ತ ಹೊಂದಿವೆ. ಮತ್ತು ಮೈಗ್ರೇನ್ ನೋವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಚೆರ್ರಿಗಳು ತುಂಬಾ ಟೇಸ್ಟಿ ಹಣ್ಣು, ಇದನ್ನು ನೀವು ಊಟದ ಮಧ್ಯ ಲಘುವಾಗಿ ತಿನ್ನಿ. ಮೆಗ್ನೀಸಿಯಮ್ ಭರಿತ ಆಹಾರಗಳನ್ನು ಉಪಯೋಗಿಸಿ. ಮೆಗ್ನೀಸಿಯಮ್ ಸಮೃದ್ಧ ಬಾದಾಮಿ, ಪಾಲಕ, ಆವಕಾಡೊ ಮತ್ತು ಡಾರ್ಕ್ ಚಾಕೊಲೇಟ್ ತಿನ್ನಿ.

    MORE
    GALLERIES

  • 66

    Migraine Problem: ಮೈಗ್ರೇನ್ ಸಮಸ್ಯೆ ಕಡಿಮೆ ಮಾಡಲು ಈ ಆಹಾರ ಪದಾರ್ಥ ತಿನ್ನಲು ಆರಂಭಿಸಿ!

    ಅರಿಶಿನವು ಔಷಧೀಯ ಮಸಾಲೆ, ಕರ್ಕ್ಯುಮಿನ್, ಉರಿಯೂತದ ಗುಣಲಕ್ಷಣ ಹೊಂದಿರುವ ಸಂಯುಕ್ತ ಹೊಂದಿದೆ. ಇದು ಮೈಗ್ರೇನ್ ನೋವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ನಿಮ್ಮ ದೈನಂದಿನ ಬೇಳೆಕಾಳು ಮತ್ತು ತರಕಾರಿಗಳಲ್ಲಿ ಅರಿಶಿನ ಸೇರಿಸುವ ಮೂಲಕ ನೀವು ಈ ನೋವನ್ನು ನಿವಾರಿಸಬಹುದು.

    MORE
    GALLERIES