Mental Health: ವಾರಕ್ಕೆ ಎರಡು ಬಾರಿಯಾದರೂ ಮೀನು ತಿಂದರೆ ಮಾನಸಿಕ ನೆಮ್ಮದಿ ಸಿಗುತ್ತದೆಯಂತೆ!

Foods For Healthy Brain: ಮೆದುಳು ಆರೋಗ್ಯವಾಗಿರಲು ನಮ್ಮ ಆಹಾರದಲ್ಲಿ ಪೌಷ್ಟಿಕಾಂಶವಿರುವ ಪದಾರ್ಥಗಳನ್ನು ಸೇರಿಸುವುದು ಅಗತ್ಯ. ನಿಮ್ಮ ಮೆದುಳನ್ನು ಹೇಗೆ ಆರೋಗ್ಯವಾಗಿರಿಸಿಕೊಳ್ಳಬಹುದು ಎಂಬುದನ್ನು ನಾವು ಇಲ್ಲಿ ತಿಳಿಸಿದ್ದೇವೆ.

First published:

  • 17

    Mental Health: ವಾರಕ್ಕೆ ಎರಡು ಬಾರಿಯಾದರೂ ಮೀನು ತಿಂದರೆ ಮಾನಸಿಕ ನೆಮ್ಮದಿ ಸಿಗುತ್ತದೆಯಂತೆ!

    ರೋಗಗಳನ್ನು ತಪ್ಪಿಸಲು ನಾವು ನಮ್ಮ ದೇಹವನ್ನು ನೋಡಿಕೊಳ್ಳುತ್ತೇವೆ. ಜೀವನಶೈಲಿ, ವ್ಯಾಯಾಮದ ಜೊತೆಗೆ ಆರೋಗ್ಯಕರ ಆಹಾರವನ್ನು ಸೇವಿಸುತ್ತೇವೆ. ಆದರೆ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಮಾನಸಿಕ ಆರೋಗ್ಯವನ್ನು ಉತ್ತಮವಾಗಿಟ್ಟುಕೊಳ್ಳುವುದು ಬಹಳ ಮುಖ್ಯ. (ಪ್ರಾತಿನಿಧಿಕ ಚಿತ್ರ)

    MORE
    GALLERIES

  • 27

    Mental Health: ವಾರಕ್ಕೆ ಎರಡು ಬಾರಿಯಾದರೂ ಮೀನು ತಿಂದರೆ ಮಾನಸಿಕ ನೆಮ್ಮದಿ ಸಿಗುತ್ತದೆಯಂತೆ!

    ಮೆದುಳು ಚುರುಕಾಗಿ, ಮನಸ್ಸು ಶಾಂತವಾಗಿರಲು ಆಹಾರದಲ್ಲಿ ಇವುಗಳನ್ನು ಸೇರಿಸಿ. ಕೇವಲ 5 ಪದಾರ್ಥಗಳನ್ನು ನಿಮ್ಮ ನಿತ್ಯದ ಆಹಾರದಲ್ಲಿ ಸೇರಿಸಿದರೆ ಜೀವನ ಆರಾಮದಾಯಕ ಎನಿಸುತ್ತದೆ.

    MORE
    GALLERIES

  • 37

    Mental Health: ವಾರಕ್ಕೆ ಎರಡು ಬಾರಿಯಾದರೂ ಮೀನು ತಿಂದರೆ ಮಾನಸಿಕ ನೆಮ್ಮದಿ ಸಿಗುತ್ತದೆಯಂತೆ!

    ಒಮೆಗಾ-3 ಕೊಬ್ಬಿನಾಮ್ಲಗಳು: ಕೊಬ್ಬಿನ ಮೀನುಗಳಲ್ಲಿ ಇದು ಹೇರಳವಾಗಿ ಕಂಡುಬರುತ್ತವೆ, ಇದು ಬೀಟಾ-ಅಮಿಲಾಯ್ಡ್ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ವಾರಕ್ಕೆ ಎರಡು ಬಾರಿಯಾದರೂ ಮೀನು ತಿಂದರೆ ಮಾನಸಿಕ ಆರೋಗ್ಯ ಚೆನ್ನಾಗಿರುತ್ತದೆ. ಅಗಸೆ ಬೀಜಗಳು, ಆವಕಾಡೊ ಮತ್ತು ವಾಲ್ ನಟ್ ತಿನ್ನುವ ಮೂಲಕ ಒಮೆಗಾ -3 ಕೊರತೆಯನ್ನು ಸಹ ನೀವು ಪೂರೈಸಬಹುದು.

    MORE
    GALLERIES

  • 47

    Mental Health: ವಾರಕ್ಕೆ ಎರಡು ಬಾರಿಯಾದರೂ ಮೀನು ತಿಂದರೆ ಮಾನಸಿಕ ನೆಮ್ಮದಿ ಸಿಗುತ್ತದೆಯಂತೆ!

    ಹಸಿರು ತರಹಾರಿ-ಸೊಪ್ಪು: ಹಾರ್ವರ್ಡ್ ಪ್ರಕಾರ, ಹಸಿರು ಎಲೆಗಳ ತರಕಾರಿಗಳು ಮೆದುಳನ್ನು ಆರೋಗ್ಯಕರವಾಗಿ ಮತ್ತು ತೀಕ್ಷ್ಣವಾಗಿಸಲು ಸಹಾಯ ಮಾಡುತ್ತದೆ. ವಿಟಮಿನ್ ಕೆ, ಲುಟೀನ್, ಫೋಲೇಟ್, ಬೀಟಾ ಕ್ಯಾರೋಟಿನ್ ಇವುಗಳಲ್ಲಿ ಹೇರಳವಾಗಿ ಕಂಡುಬರುತ್ತವೆ. ಇದು ಮೆದುಳನ್ನು ಆರೋಗ್ಯವಾಗಿಡಲು ಕೆಲಸ ಮಾಡುತ್ತದೆ. ಇದಕ್ಕಾಗಿ ನೀವು ನಿಮ್ಮ ಆಹಾರದಲ್ಲಿ ಎಲೆಕೋಸು, ಪಾಲಕ್, ಬ್ರೊಕೊಲಿ ಇತ್ಯಾದಿಗಳನ್ನು ಸೇರಿಸಿಕೊಳ್ಳಬಹುದು.

    MORE
    GALLERIES

  • 57

    Mental Health: ವಾರಕ್ಕೆ ಎರಡು ಬಾರಿಯಾದರೂ ಮೀನು ತಿಂದರೆ ಮಾನಸಿಕ ನೆಮ್ಮದಿ ಸಿಗುತ್ತದೆಯಂತೆ!

    ಸ್ಟ್ರಾಬೆರಿಗಳು, ಬ್ಲೂಬೆರ್ರಿಗಳು: ವಿವಿಧ ರೀತಿಯ ಬೆರ್ರಿಗಳಲ್ಲಿ ಉತ್ಕರ್ಷಣ ನಿರೋಧಕಗಳಲ್ಲಿ ಕಂಡುಬರುತ್ತವೆ, ಇದು ಮೆದುಳಿನ ಸ್ಮರಣೆಯನ್ನು ಹೆಚ್ಚಿಸಲು ತುಂಬಾ ಪ್ರಯೋಜನಕಾರಿಯಾಗಿದೆ. ಪ್ರತಿನಿತ್ಯ 2 ರಿಂದ 3 ಸ್ಟ್ರಾಬೆರಿಗಳನ್ನು ಸೇವಿಸುವ ಮಹಿಳೆಯರ ಜ್ಞಾಪಕ ಶಕ್ತಿಯು ದೀರ್ಘಕಾಲ ಉಳಿಯುತ್ತದೆ ಎಂದು ಸಂಶೋಧನೆಯೊಂದರಲ್ಲಿ ಕಂಡುಬಂದಿದೆ.

    MORE
    GALLERIES

  • 67

    Mental Health: ವಾರಕ್ಕೆ ಎರಡು ಬಾರಿಯಾದರೂ ಮೀನು ತಿಂದರೆ ಮಾನಸಿಕ ನೆಮ್ಮದಿ ಸಿಗುತ್ತದೆಯಂತೆ!

    ವಾಲ್ ನಟ್ಸ್: ಇದನ್ನು ಮೆದುಳಿನ ಸೂಪರ್ ಫುಡ್ ಎಂದೂ ಕರೆಯುತ್ತಾರೆ. ಇದು ಮೆದುಳಿನ ಕೋಶಗಳನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ, ಇದು ಜ್ಞಾಪಕಶಕ್ತಿಯನ್ನು ಹೆಚ್ಚಿಸುತ್ತದೆ. ರಕ್ತದೊತ್ತಡವನ್ನು ಉತ್ತಮವಾಗಿ ಇರಿಸುತ್ತದೆ ಮತ್ತು ಅಪಧಮನಿಗಳನ್ನು ಆರೋಗ್ಯಕರವಾಗಿರಿಸುತ್ತದೆ.

    MORE
    GALLERIES

  • 77

    Mental Health: ವಾರಕ್ಕೆ ಎರಡು ಬಾರಿಯಾದರೂ ಮೀನು ತಿಂದರೆ ಮಾನಸಿಕ ನೆಮ್ಮದಿ ಸಿಗುತ್ತದೆಯಂತೆ!

    ಚಹಾ ಅಥವಾ ಕಾಫಿ ಸೇವನೆ: ಇದು ಅಲ್ಪಾವಧಿಯ ಏಕಾಗ್ರತೆಯನ್ನು ಹೆಚ್ಚಿಸುತ್ತದೆಯಾದರೂ, ಅವುಗಳ ಸೇವನೆಯು ಮಾನಸಿಕ ಕಾರ್ಯವನ್ನು ಹೆಚ್ಚಿಸುತ್ತವೆ ಎಂದು ಸಂಶೋಧನೆಗಳಲ್ಲಿ ಕಂಡುಬಂದಿದೆ. ಈ ರೀತಿಯಾಗಿ, ನಿಮ್ಮ ಮಾನಸಿಕ ಆರೋಗ್ಯವನ್ನು ಉತ್ತಮವಾಗಿಡಲು, ನಿಮ್ಮ ಆಹಾರದಲ್ಲಿ ಈ ಸೂಪರ್ ಫುಡ್ಗಳನ್ನು ಸೇರಿಸಿಕೊಳ್ಳಬೇಕು.

    MORE
    GALLERIES