Eggs: ದಿನಕ್ಕೆ ಎಷ್ಟು ಮೊಟ್ಟೆ ಸೇವಿಸುತ್ತೀರಿ?; ಅಯ್ಯೋ ಅತಿಯಾಗಿ ಸೇವಿಸಿದರೆ ಹೀಗಾಗುತ್ತಂತೆ!
ದಿನಕ್ಕೊಂದು ಮೊಟ್ಟೆ ಸೇವಿಸುದರಿಂದ ಆರೋಗ್ಯಕ್ಕೆ ಲಾಭವಿದೆ ಎಂಬುದು ಅನೇಕರಿಗೆ ಗೊತ್ತು. ಮೊಟ್ಟೆಯಲ್ಲೊ ಪೋಷಕಾಂಶಗಳಿವೆ ಹಾಗಾಗಿ ಕೆಲವರು ದಿನಕ್ಕೊಂದು ಮೊಟ್ಟೆಯನ್ನು ಸೇವಿಸುತ್ತಾರೆ. ಇನ್ನು ಕೆಲವರು ದಿನಕ್ಕೆ 5 ಮೊಟ್ಟೆಗಳನ್ನು ಸೇವಿಸುವವರು ಇದ್ದಾರೆ. ಆದರೆ ಅತಿಯಾದರೆ ಅಮೃತವು ವಿಷ ಎಂಬಂತೆ ಹೆಚ್ಚು ಮೊಟ್ಟೆ ಸೇವಿಸದರೆ ಸಮಸ್ಯೆ ಕಟ್ಟಿಟ್ಟ ಬುತ್ತಿ ಎಂಬುದು ಸಾಕಷ್ಟು ಜನಕ್ಕೆ ತಿಳಿದಿಲ್ಲ.
ಉತ್ತರ ಪ್ರದೇಶದ ವ್ಯಕ್ತಿಯೊಬ್ಬರು ಹೆಚ್ಚು ಮೊಟ್ಟೆ ಸೇವಿಸಿ ಮೃತಪಟ್ಟಿದ್ದಾರೆ. ವ್ಯಕ್ತಿ 50 ಮೊಟ್ಟೆಗಳನ್ನು ತಿನ್ನಲು ಮುಂದಾಗುತ್ತಾರೆ . ಕೊನೆಗೆ 42 ಮೊಟ್ಟೆಗಳನ್ನು ಸೇವಿಸುತ್ತಾರೆ. ಆದರೆ ಅತಿಯಾಗಿ ಮೊಟ್ಟೆ ಸೇವಿಸಿ ಅಸ್ವಸ್ಥನಾದ ವ್ಯಕ್ತಿ ಆಸ್ಪತ್ರೆಯಲ್ಲಿ ನಿಧನಹೊಂದಿದ್ದಾರೆ ಎಂದು ತಿಳಿದುಬಂದಿದೆ.
2/ 7
ಮೊಟ್ಟೆ ಸೇವಿಸುವುದರಿಂದ ದೇಹಕ್ಕೆ ಪ್ರೋಟೀನ್ ದೊರಕುತ್ತದೆ ಎಂಬುದು ನಿಜ ಸಂಗತಿ. ಆದರೆ ಅತಿಯಾದರೆ ದೇಹ ಸ್ಪಂದಿಸುವುದಿಲ್ಲ. ದಿನದಲ್ಲಿ 1-2 ಮೊಟ್ಟೆಗಳನ್ನು ಸೇವಿಸಿದರೆ ಆರೋಗ್ಯ ಸರಿಯಾಗಿರುತ್ತದೆ.
3/ 7
ದೇಹದಾಡ್ಯರು ಮೊಟ್ಟೆ ಹೆಚ್ಚು ಸೇವಿಸುತ್ತಾರೆ. ದೇಹವನ್ನು ಮತ್ತಷ್ಟು ಬೆಳೆಸಲು , ಆರೋಗ್ಯವನ್ನು ವೃದ್ಧಿಸಿಕೊಳ್ಳಲು ಮೊಟ್ಟೆ ಸೇವನೆ ಮಾಡುತ್ತಾರೆ. ಆದರೆ ನಾಲ್ಕು ಅಥವಾ ಐದು ಮೊಟ್ಟೆಗಳನ್ನು ಸೇವಿಸುವವುದು ಆರೋಗ್ಯ ದೃಷ್ಠಿಯಲ್ಲಿ ಒಳ್ಳೆಯದು.
4/ 7
ಅತಿಯಾಗಿ ಮೊಟ್ಟೆ ಸೇವಿಸುವುದರಿಂದ ಹೊಟ್ಟೆ ಉಬ್ಬರಿಸುವಿಕೆ, ಆಮ್ಲೀಯತೆ , ಗ್ಯಾಸ್ ಟ್ರಬಲ್ ಮುಂತಾದ ಸಮಸ್ಯೆ ಉಧ್ಬವಿಸುತ್ತದೆ. ಮೂತ್ರಪಿಂಡ ಕೂಡ ಹಾನಿಯಾಗುವ ಸಾಧ್ಯತೆ ಇದೆ ಎಂಬುದು ವೈದ್ಯರ ಮಾತು.
5/ 7
ಹೆಚ್ಚು ಮೊಟ್ಟೆ ಸೇವಿಸಿದರೆ ಜೀರ್ಣಕ್ರಿಯೆ ಮತ್ತು ರಕ್ತಸ್ರಾವದ ಅಪಾಯ ಹೆಚ್ಚಿಸುತ್ತದೆ
6/ 7
ಮೊಟ್ಟೆಯಲ್ಲಿ ಪ್ರೋಟೀನ್ ಅಧಿಕವಾಗಿದೆ. ಮಿಟಮಿನ್ ಎ, ಬಿ 12, ಡಿ, ಇ ಮತ್ತು ಎಮೆಗಾ 3 ಇದರಲ್ಲಿದೆ. ದಿನಕ್ಕೆ ಒಂದು ಅಥವಾ 2 ಮೊಟ್ಟೆ ಸೇವಿಸುವುದು ಆರೋಗ್ಯ ದೃಷ್ಠಿಯಲ್ಲಿ ಒಳ್ಳೆಯದು.
7/ 7
ಬೇಯಿಸಿದ ಮೊಟ್ಟೆ ಸೇವಿಸಿದರೆ ಸ್ನಾಯು ಬಲಪಡಿಸುತ್ತದೆ. ಮೊಟ್ಟೆಯ ಬಿಳಿಯ ಭಾಗವನ್ನು ತಿಂದರೆ ಬಹಳ ಉತ್ತಮ. ತೂಕವನ್ನು ಹೆಚ್ಚಿಸಲು ಬಯಸಿದರೆ ಮೊಟ್ಟೆ ಒಳಗಿನ ಹಳದಿ ಬಣ್ಣವನ್ನು ತಿನ್ನಬೇಕು.