ಮಾವಿನಕಾಯಿ ತಿರಮಿಸು: ಇದು ಒಂದು ರೀತಿಯ ಸಿಹಿ ತಿಂಡಿಯಾಗಿದ್ದು, ಇದನ್ನು ಮಾಡುವುದೇ ಸಂತೋಷದ ವಿಚಾರ. ಮಸ್ಕಾರ್ಪೋನ್ ಚೀಸ್ ಮತ್ತು ಪುಡಿಮಾಡಿದ ಸಕ್ಕರೆಯನ್ನು ಮಿಶ್ರಣ ಮಾಡಿ ಕೆನೆಯಂತೆ ಆಗುವವರೆಗೂ ಬಿಸಿ ಮಾಡಿ. ನಂತರ ಹಾಲಿನ ಮಸ್ಕಾರ್ಪೋನ್ ಮತ್ತು ಲೇಯರ್ನಂತೆ ಮಾವಿನ ಹಣ್ಣನ್ನು ಕತ್ತರಿಸಿ ಮಿಶ್ರಣ ಮಾಡಿದರೆ, ಎಗ್ ಲೆಸ್ ಮ್ಯಾಂಗೋ ತಿರಮಿಸು ಸ್ವೀಟ್ಅನ್ನು ನೀವು ಸವಿಯಬಹುದು.
ಮಾವಿನ ತೆಂಗಿನಕಾಯಿ ಕರಿ: ಕೇರಳದ ಜನರ ಅತ್ಯಂತ ಪ್ರೀತಿಯ ಖಾದ್ಯಗಳಲ್ಲಿ ಮ್ಯಾಂಗೋ ತೆಂಗಿನಕಾಯಿ ಕರಿ ಕೂಡ ಒಂದಾಗಿದೆ. ಇದನ್ನು ಮಾಡಲು ಮಾಗಿದ ಮಾವಿನಹಣ್ಣುಗಳು, ಕೆನೆ, ತೆಂಗಿನ ಹಾಲು ಮತ್ತು ಆರೊಮ್ಯಾಟಿಕ್ ಮಸಾಲೆಗಳನ್ನು ಬಳಸಲಾಗುತ್ತದೆ. ಈ ಖಾದ್ಯವನ್ನು ತಯಾರಿಸಲು, ಮೇಲಿನ ಎಲ್ಲಾ ಪದಾರ್ಥಗಳನ್ನು ಚೆನ್ನಾಗಿ ಮಿಶ್ರಣ ಮಾಡಿ. ತೆಂಗಿನ ಹಾಲು ಮತ್ತು ಮಸಾಲೆಗಳೊಂದಿಗೆ ಮಾವಿನ ಸಿಹಿ ರುಚಿ ಸವಿಯಲು ಅದ್ಭುತವಾಗಿರುತ್ತದೆ. ಅನ್ನದ ಜೊತೆಗೆ ಇದು ಬೆಸ್ಟ್ ಕಾಂಬೀನೇಷನ್ ಅಂತನೇ ಹೇಳಬಹುದು.