Mango for Health: ಮಾವಿನ ಹಣ್ಣನ್ನು ಯಾವಾಗ? ಹೇಗೆ ತಿಂದ್ರೆ ಆರೋಗ್ಯಕ್ಕೆ ಉತ್ತಮ? ಆಯುರ್ವೇದ ಏನ್ ಹೇಳುತ್ತೆ?
ಆಯುರ್ವೇದದ ಪ್ರಕಾರ ಮಾವಿನ ಹಣ್ಣು ಒಳ್ಳೆಯದಾ? ನಮ್ಮ ಆರೋಗ್ಯವನ್ನು ಹೆಚ್ಚಿಸಬೇಕಾದರೆ ಅದನ್ನು ಹೇಗೆ ತಿನ್ನಬೇಕು ಎಂದು ತಿಳಿಯಬೇಕು. ಯಾವ ಸಮಸ್ಯೆ ಇರೋರು ಮಾವಿನ ಹಣ್ಣು ತಿನ್ನಬಾರದು ಎನ್ನುವುದನ್ನು ತಿಳಿದುಕೊಳ್ಳಿ ಜೊತೆಗೆ ಮಾವಿನ ಹಣ್ಣು ತಿಂದ್ರೆ ಏನೆಲ್ಲಾ ಪ್ರಯೋಜನವಿದೆ ಎಂದು ಸಹ ತಿಳಿದುಕೊಳ್ಳಿ
ಮಾವು ಮಕ್ಕಳಿಂದ ಹಿಡಿದು ದೊಡ್ಡವರೆಲ್ಲರಿಗೂ ಇಷ್ಟವಾದ ಹಣ್ಣು. ಬೇಸಿಗೆ ಬಂತೆಂದರೆ, ಮಾವಿನ ಕಾಯಿ ಹಾಗೂ ಮಾವಿನ ಹಣ್ಣು ಯಾವಾಗ ಮಾರುಕಟ್ಟೆಗೆ ಬರುತ್ತೆ ಎಂದು ಎದುರು ನೋಡುವ ಜನ ಇರುತ್ತಾರೆ ಎಂದರೆ ಅತಿಶಯೋಕ್ತಿಯಲ್ಲ. ಆದರೆ ಆಯುರ್ವೇದದ ಪ್ರಕಾರ ಮಾವಿನ ಹಣ್ಣು ನಮ್ಮ ಆರೋಗ್ಯವನ್ನು ಹೆಚ್ಚಿಸಬೇಕಾದರೆ ಅದನ್ನು ಹೇಗೆ ತಿನ್ನಬೇಕು ಎಂದು ತಿಳಿಯಬೇಕು.
2/ 8
ಮಾವಿನ ಹಣ್ಣು ಯಾರಿಗೆ ಇಷ್ಟ ಇಲ್ಲ ಹೇಳಿ, ಹಸಿರು ಬಣ್ಣದ ಈ ಹಣ್ಣು ಬಾಯಲ್ಲಿ ನೀರೂರಿಸುತ್ತದೆ. ಕೆಲವರು ಕತ್ತರಿಸಿದ ಮಾವಿನಹಣ್ಣುಗಳನ್ನು ಇಷ್ಟಪಡುತ್ತಾರೆ. ಇನ್ನು ಕೆಲವರು ತಿರುಳನ್ನು ತೆಗೆದು ಮಾವಿನ ಹಣ್ಣಿನ ಶೇಕ್ ಕುಡಿಯಲು ಇಷ್ಟಪಡುತ್ತಾರೆ. ಮಾವಿ ಖಾದ್ಯ ಮಾಡಿ ಅನೇಕರು ತಿನ್ನುತ್ತಾರೆ. ರುಚಿಯ ಹೊರತಾಗಿ, ಮಾವು ಅತ್ಯಂತ ಆರೋಗ್ಯಕರವೂ ಆಗಿದೆ.
3/ 8
ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಹೃದ್ರೋಗ ಮತ್ತು ಮಧುಮೇಹದಂತಹ ಕಾಯಿಲೆಗಳ ವಿರುದ್ಧ ಹೋರಾಡುತ್ತದೆ ಮತ್ತು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಆದರೆ ನೀವು ಮಾವಿನ ಹಣ್ಣನ್ನು ಸರಿಯಾದ ರೀತಿಯಲ್ಲಿ ತಿನ್ನುತ್ತೀರಾ? ಮಾವಿನ ಹಣ್ಣನ್ನು ಸರಿಯಾಗಿ ತಿನ್ನಲು ಆಯುರ್ವೇದ ತಜ್ಞರು ನೀಡಿರುವ ಕೆಲವು ಸಲಹೆಗಳು ಇಲ್ಲಿವೆ.
4/ 8
ಮಾಗಿದ ಮಾವಿಗೆ ಹಾಲನ್ನು ಸೇರಿಸುವುದರಿಂದ ದೇಹದ ದಣಿವು ಸುಧಾರಿಸುತ್ತದೆ. ಇದಲ್ಲದೆ ದೇಹವನ್ನು ತಂಪಾಗಿಸುತ್ತದೆ. ಇದು ಪೋಷಕಾಂಶಗಳನ್ನು ನೀಡುವುದರ ಜೊತೆಗೆ ರುಚಿಕರವಾದ ಟಾನಿಕ್ ಆಗಿಯೂ ಕಾರ್ಯನಿರ್ವಹಿಸುತ್ತದೆ.
5/ 8
ಊಟದ ನಂತರ ಹಣ್ಣುಗಳನ್ನು ತೆಗೆದುಕೊಳ್ಳಬೇಡಿ ಎಂದು ಆಯುರ್ವೇದ ಎಚ್ಚರಿಸುತ್ತದೆ. ಆದಾಗ್ಯೂ, ಇದನ್ನು ಊಟದೊಂದಿಗೆ ತೆಗೆದುಕೊಳ್ಳಬಹುದು. ಈ ರೀತಿ ತೆಗೆದುಕೊಂಡರೆ ಹೊಟ್ಟೆ ಉಬ್ಬರದ ಸಮಸ್ಯೆ ತಡೆಯಲು ಸಹಾಯ ಮಾಡುತ್ತದೆ.
6/ 8
ತಿನ್ನುವ ಮೊದಲು ಮಾವಿನ ಹಣ್ಣನ್ನು ತಿನ್ನುವ ಮೊದಲು ನೀರಿನಲ್ಲಿ ನೆನೆಸಿಡಬೇಕು. ನಂತರ ಶುದ್ಧ ನೀರಿನ ಬಟ್ಟಲಿನಲ್ಲಿ 25-30 ನಿಮಿಷಗಳ ಕಾಲ ನೆನೆಸಿ. ಇದು ಹೆಚ್ಚುವರಿ ಫೈಟಿಕ್ ಆಮ್ಲವನ್ನು ತೆಗೆದು ಹಾಕಲು ಸಹಾಯ ಮಾಡುತ್ತದೆ.
7/ 8
ಮಾವಿನ ಹಣ್ಣನ್ನು ಹೇಗೆ ತಿನ್ಬೇಕು?: ಮಾವಿನ ಹಣ್ಣನ್ನು ಉಪಹಾರ ಅಥವಾ ಮಧ್ಯಾಹ್ನದ ಊಟಕ್ಕೆ ಅಥವಾ ಸಂಜೆಯ ತಿಂಡಿಯಾಗಿ ಸೇವಿಸಬಹುದು. ಆಯುರ್ವೇದದ ಪ್ರಕಾರ ಹಾಲು ಮತ್ತು ಹಣ್ಣುಗಳನ್ನು ಪ್ರತ್ಯೇಕವಾಗಿ ತೆಗೆದುಕೊಳ್ಳಬೇಕು. ಆದರೆ, ಆವಕಾಡೊದಂತಹ ಹಣ್ಣುಗಳ ಜೊತೆಗೆ ಸೇವಿಸಿದರೆ ದೇಹಕ್ಕೆ ತುಂಬಾ ಒಳ್ಳೆಯದು ಎಂದು ಆಯುರ್ವೇದ ಹೇಳುತ್ತದೆ.
8/ 8
ಮಾಗಿದ ಮಾವಿನ ಹಣ್ಣನ್ನು ಹಾಲಿನೊಂದಿಗೆ ಸೇವಿಸುವುದರಿಂದ ದೇಹ ತಂಪಾಗುತ್ತದೆ. ಇದು ಅತ್ಯಂತ ಪೌಷ್ಟಿಕ, ರುಚಿಕರವಾದ ಟಾನಿಕ್ ಆಗಿ ಹೊರಹೊಮ್ಮುತ್ತದೆ. ಆದಾಗ್ಯೂ, ಜೀರ್ಣಕಾರಿ ಸಮಸ್ಯೆಗಳು, ಆಟೋ ಇಮ್ಯೂನ್ ಅಸ್ವಸ್ಥತೆಗಳು ಅಥವಾ ಚರ್ಮದ ಸಮಸ್ಯೆಗಳಿರುವ ಜನರು ಹಾಲಿನೊಂದಿಗೆ ಮಾವನ್ನು ಸೇವಿಸಬಾರದು.