ಹೀಗೆ ಮಾಡಿದ್ರೆ ನಿಮ್ಮ ಸಂಗಾತಿ ಹೆಚ್ಚು ರೊಮ್ಯಾಂಟಿಕ್ ಆಗಿರುತ್ತಾರಂತೆ..!
News18 Kannada | January 13, 2020, 4:06 PM IST
1/ 12
ಬಂದು ಬಿಡು ನೀನೊಮ್ಮೆ ಪ್ರವಾಹದಂತೆ..ನನ್ನ ಅಷ್ಟೂ ವಿರಹಗಳು ತೊಯ್ದು ಹೋಗಲಿ... ಒಂದೇ ಸಮನೆ..ಒಂದೇ ಸಮನೆ. ಯಾರೋ ಭಗ್ನ ಪ್ರೇಮಿಯೊಬ್ಬರು ಬರೆದ ಈ ಸಾಲು ಸಾಕು ಮುರಿದು ಬಿದ್ದ ಪ್ರೀತಿಯ ಆಳದ ನೋವನ್ನು ತಿಳಿಯಲು. ಹೌದು, ಸಾಮಾನ್ಯವಾಗಿ ಪ್ರೀತಿಗೆ ಕಣ್ಣಿಲ್ಲ ಎಂದೇಳ್ತೀವಿ. ಆದರೆ ಪ್ರೀತಿ ಎಂಬುದು ಕುರುಡಲ್ಲ ಎಂಬುದು ಕೂಡ ಅಷ್ಟೇ ಸತ್ಯ.
2/ 12
ಏಕೆಂದರೆ ನಾವು ಮಾಡುವ ಸಣ್ಣ ಪುಟ್ಟ ತಪ್ಪುಗಳೇ ಸಂಗಾತಿಯಿಂದ ದೂರ ಮಾಡಿಬಿಡುತ್ತದೆ. ಅದು ತುಂಬಾ ಅತೀ ಸಣ್ಣ ತಪ್ಪು ಕೂಡ ಆಗಿರಬಹುದು. ಹೀಗಾಗಿಯೇ ಪ್ರೇಮಲೋಕದಲ್ಲಿ ತೇಲಾಡಿದರೂ ಸಂಗಾತಿಯ ಮನಗೆಲ್ಲುವಲ್ಲಿ ಮಾತ್ರ ಅನೇಕರು ಸೋತು ಬಿಡುತ್ತಾರೆ.
3/ 12
ಯುವ ತಲೆಮಾರಿನ ಖಿನ್ನತೆಗೆ ಒಂದು ಕಾರಣ ಸಿಗದ ಪ್ರೀತಿ ಎಂಬುದನ್ನು ಸಮೀಕ್ಷೆಯಿಂದ ಬಹಿರಂಗವಾಗಿದೆ. ಇಂತಹ ಖಿನ್ನತೆಯನ್ನು ಹೋಗಲಾಡಿಸಲೆಂದೇ ಅಧ್ಯಯನ ತಂಡವೊಂದು ಹೊಸ ಸಮೀಕ್ಷೆಯನ್ನು ನಡೆಸಿದೆ.
4/ 12
ವಾಸ್ತವವಾಗಿ, ಹೆಚ್ಚಿನ ಹುಡುಗರಿಗೆ ಗೆಳತಿಯರನ್ನು ಹೇಗೆ ಸಂತೋಷಪಡಿಸುವುದು ಎಂಬುದು ತಿಳಿದಿಲ್ಲ.
5/ 12
ಅದೇನೇ ಹೇಳಿದರೂ ಅರ್ಥವಾಗುತ್ತಿಲ್ಲ. ಅವಳನ್ನು ಮೆಚ್ಚಿಸಲು ಸಾಧ್ಯವಾಗುತ್ತಿಲ್ಲ ಎಂದು ಅನೇಕ ತರುಣರು ಕೊರಗುತ್ತಿರುತ್ತಾರೆ. ಇಂತಹ ನೋವಿಗೆ ಸಮೀಕ್ಷೆಯಿಂದಾದರೂ ಉತ್ತರ ಸಿಗಲಿ ಎಂಬುದು ಅಧ್ಯಯನ ತಂಡದ ಆಶಯ.
6/ 12
ಫಿಲಡೆಲ್ಫಿಯಾದ ಡ್ರೆಕ್ಸೆಲ್ ವಿಶ್ವವಿದ್ಯಾಲಯ ಮತ್ತು ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದ ಜಂಟಿಯಾಗಿ ರೊಮ್ಯಾಂಟಿಕ್ ನಡೆಯ ಬಗ್ಗೆ ಒಂದು ಅಧ್ಯಯನ ನಡೆಸಿದೆ.
7/ 12
ಈ ಅಧ್ಯಯನದಲ್ಲಿ ಸರಿಯಾಗಿ ಆಹಾರ ಸೇವಿಸುವ ಮಹಿಳೆಯರು ಹಸಿವಿನಿಂದ ಕೂಡಿರುವ ಮಹಿಳೆ/ಹುಡುಗಿಯರಿಗಿಂತ ಹೆಚ್ಚು ರೊಮ್ಯಾಂಟಿಕ್ ಆಗಿರುತ್ತಾರೆ ಎಂಬುದು ಕಂಡು ಬಂದಿದೆ.
8/ 12
ಸಾಮಾನ್ಯ ತೂಕದ ವಿದ್ಯಾರ್ಥಿನಿಗಳನ್ನು ಒಟ್ಟುಗೂಡಿಸಿದ ಅಧ್ಯಯನ ತಂಡ 8 ಗಂಟೆಗಳ ಏನೂ ತಿನ್ನದಂತೆ ಟಾಸ್ಕ್ ತಿಳಿಸಲಾಗಿತ್ತು. ಈ ವೇಳೆ ಹುಡುಗಿಯರಿಗೆ ಹಲವು ರೀತಿಯ ಚಿತ್ರಗಳನ್ನು ತೋರಿಸಿ ಅವರ ಹಾವಭಾವ ಫೋಟೋಗಳನ್ನು ಸೆರೆ ಹಿಡಿಯಲಾಗಿತ್ತು.
9/ 12
ಅಷ್ಟೇ ಅಲ್ಲದೆ ಇವರ ಎಂಆರ್ಐ ಸ್ಯ್ಕ್ಯಾನ್ ಮಾಡಿ ಪರಿಶೀಲಿಸಲಾಯಿತು. ತಮಾಷೆಯ ಸಂಗತಿಯೆಂದರೆ, 8 ಗಂಟೆಗಳ ಕಾಲ ಏನನ್ನೂ ತಿನ್ನದಿದ್ದ ಇವರು ರೋಮ್ಯಾಂಟಿಕ್ ಚಿತ್ರಕ್ಕೂ ( ದಂಪತಿಗಳು ಕೈ ಹಿಡಿದಿರುವ ಚಿತ್ರಗಳು, ಕ್ಯಾಂಡಲ್ ಲೈಟ್ ಡಿನ್ನರ್ ಇತ್ಯಾದಿ) ಹೇಗೆ ಪ್ರತಿಕ್ರಿಯಿಸಿದ್ದರೋ ಅದೇ ರೀತಿಯಾಗಿ ನಿರ್ಜೀವ ಚಿತ್ರಗಳಿಗೆ (ಸ್ಟೇಪಲ್ಸ್, ಮರಗಳು, ಬೌಲಿಂಗ್ ಬಾಲ್) ಪ್ರತಿಕ್ರಿಯೆ ನೀಡಿದ್ದರು.
10/ 12
ಆದರೆ ಆಹಾರ ಸೇವಿಸಿದ ಬಳಿಕ ಇವರ ಪ್ರತಿಕ್ರಿಯೆಯಲ್ಲಿ ಬದಲಾವಣೆ ಕಂಡು ಬಂದಿದ್ದವು. ಹಸಿವು ನೀಗುತ್ತಿದ್ದಂತೆ ಹೆಚ್ಚು ರೊಮ್ಯಾಂಟಿಕ್ ಆಗಿದ್ದರು. ದಂಪತಿಗಳು ಕೈ ಹಿಡಿದಿರುವ ಚಿತ್ರಗಳು, ಕ್ಯಾಂಡಲ್ ಲೈಟ್ ಡಿನ್ನರ್ ಇತ್ಯಾದಿಗಳ ಫೋಟೋವನ್ನು ನೋಡಿದಾಗ ಹಾವಭಾವ ಬದಲಾಗಿತ್ತು.
11/ 12
ಈ ಪ್ರಕ್ರಿಯೆ ಮೇಲೆ ನಡೆಸಿದ ವಿಶ್ಲೇಷನೆಯಲ್ಲಿ ಸಂಶೋಧಕರು ಮಹಿಳೆಯರು/ಹುಡುಗಿಯರು ಆಹಾರ ಸೇವಿಸಿದಾಗ ಹೆಚ್ಚು ಖುಷಿಯಾಗಿರುತ್ತಾರೆ. ಹಸಿದ ಹುಡುಗಿಯರ ಮೊದಲ ಗಮನ ಆಹಾರ ಎಂದು ಫಿಲಡೆಲ್ಫಿಯಾದ ಡ್ರೆಕ್ಸೆಲ್ ವಿಶ್ವವಿದ್ಯಾಲಯ ಮತ್ತು ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದ ಅಧ್ಯಯನ ತಂಡ ಅಭಿಪ್ರಾಯಪಟ್ಟಿದೆ.
12/ 12
ಹೀಗಾಗಿ ನಿಮ್ಮ ಸಂಗಾತಿಯನ್ನು ಮೆಚ್ಚಿಸಲು ಅವರ ಇಷ್ಟದ ಆಹಾರದತ್ತ ಹೆಚ್ಚು ಗಮನ ಹರಿಸುವುದು ಉತ್ತಮ ಎಂದು ತಿಳಿಸಿದೆ. ಏಕೆಂದರೆ ನಿಮ್ಮ ಪಾರ್ಟನರ್ ಬಯಸುವ ಆಹಾರ ಸಿಕ್ಕರೆ ಮತ್ತಷ್ಟು ರೊಮ್ಯಾಂಟಿಕ್ ಆಗಿರುತ್ತಾರೆ ಎಂಬುದು ಅಧ್ಯಯನ ತಂಡದ ಅಭಿಪ್ರಾಯ.