ಆದರೆ ಇಷ್ಟು ಪ್ರಮುಖವಾಗಿರುವ ಮೇಕಪ್ ಬ್ರಷ್ ಸ್ವಚ್ಛಗೊಳಿಸಲು ನಾವು ಸಾಮಾನ್ಯವಾಗಿ ನಿರ್ಲಕ್ಷಿಸುತ್ತೇವೆ. ಆದರೆ ಕೊಳಕು ಮೇಕಪ್ ಬ್ರಷ್ಗಳು ಎಣ್ಣೆಯುಕ್ತ ಮೇಕಪ್ ಅವಶೇಷಗಳು, ಸತ್ತ ಚರ್ಮದ ಕೋಶಗಳು ಮತ್ತು ಚರ್ಮದ ಸೋಂಕುಗಳು ಮತ್ತು ಅಲರ್ಜಿಗಳಿಗೆ ಕಾರಣವಾಗುವ ಬ್ಯಾಕ್ಟೀರಿಯಾಗಳನ್ನು ಹೊಂದಿರುತ್ತವೆ ಎಂದು ತಿಳಿದುಬಂದಿದೆ. ಆದ್ದರಿಂದ ನಮ್ಮ ಮೇಕಪ್ ಬ್ರಷ್ ಗಳನ್ನು ಸ್ವಚ್ಛಗೊಳಿಸುವಾಗ ಕೆಲವು ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು.
ಮೇಕಪ್ ಬ್ರಷ್ ಅನ್ನು ಕಾಳಜಿ ವಹಿಸುವುದು ನಮ್ಮ ಕಂಪ್ಲೀಟ್ ಮೇಕಪ್ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಚರ್ಮಕ್ಕಾಗಿ ಬಹಳ ಮುಖ್ಯ ಎಂದು ನೆನಪಿನಲ್ಲಿಟ್ಟುಕೊಳ್ಳಬೇಕು. ನಮಗೆ ಮೇಕಪ್ ಮಾಡಲು ಬಳಸುವ ಫೇಮಸ್ ಮೇಕಪ್ ಉತ್ಪನ್ನಗಳು ಉತ್ತಮವಾಗಿರುವುದರ ಜೊತೆಗೆ ಸ್ವಚ್ಛವಾಗಿದ್ದರೆ, ಮಾತ್ರ ಅವು ನಮ್ಮ ಚರ್ಮವನ್ನು ಹೊಳೆಯುವಂತೆ ಮಾಡುತ್ತದೆ. ಆದ್ದರಿಂದ ಉತ್ತಮ ಗುಣಮಟ್ಟದ ಮೇಕಪ್ ಬ್ರಷ್ಗಳು ಮತ್ತು ಮೇಕಪ್ ಸ್ಪಾಂಜ್ಗಳ ಬಗ್ಗೆ ಕಾಳಜಿ ವಹಿಸಬೇಕು.