Lungs Health: ಶ್ವಾಸಕೋಶ, ಉಸಿರಾಟ ಸಮಸ್ಯೆ ನಿವಾರಣೆಗೆ ಈ ಮೂಲಿಕೆಗಳು ರಾಮಬಾಣ!

ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ವಾಯು ಮಾಲಿನ್ಯ ಮತ್ತು ಪರಿಸರ ಮಾಲಿನ್ಯದಿಂದಾಗಿ ತುಂಬಾ ಜನರು ಶ್ವಾಸಕೋಶ ಸಂಬಂಧಿ ಕಾಯಿಲೆಗಳು ಮತ್ತು ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅದರಲ್ಲೂ ಮುಖ್ಯ ಬೃಹತ್ ನಗರಗಳಲ್ಲಿನ ಜನರು ಹೆಚ್ಚು ಶ್ವಾಸಕೋಶ ಕ್ಯಾನ್ಸರ್ ಗೂ ತುತ್ತಾಗುತ್ತಿದ್ದಾರೆ. ಇಲ್ಲಿ ನಾವು ಉಸಿರಾಟ ಸಮಸ್ಯೆ ಕಡಿಮೆ ಮಾಡುವ ಪದಾರ್ಥಗಳ ಬಗ್ಗೆ ತಿಳಿಯೋಣ.

First published:

  • 18

    Lungs Health: ಶ್ವಾಸಕೋಶ, ಉಸಿರಾಟ ಸಮಸ್ಯೆ ನಿವಾರಣೆಗೆ ಈ ಮೂಲಿಕೆಗಳು ರಾಮಬಾಣ!

    ಕೊರೊನಾ ನಂತರದ ದಿನಗಳಲ್ಲಿ ಹೆಚ್ಚಿನ ಜನರು ಶ್ವಾಸಕೋಶ ಸಂಬಂಧಿ ಕಾಯಿಲೆಗೆ ಹೆಚ್ಚು ತುತ್ತಾಗುತ್ತಿದ್ದಾರೆ. ಕೊರೋನಾ ವೈರಸ್, ಅಸ್ತಮಾ, ಕೆಮ್ಮು, ಮತ್ತು ಹೆಚ್ಚುತ್ತಿರುವ ಮಾಲಿನ್ಯ ಶ್ವಾಸಕೋಶದ ಕೆಲಸದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ಇದರಿಂದ ಶ್ವಾಸಕೋಶ ಸಮಸ್ಯೆ ಹೆಚ್ಚಿದ್ದು, ಉಸಿರಾಟ ದುಸ್ತರವಾಗಿದೆ.

    MORE
    GALLERIES

  • 28

    Lungs Health: ಶ್ವಾಸಕೋಶ, ಉಸಿರಾಟ ಸಮಸ್ಯೆ ನಿವಾರಣೆಗೆ ಈ ಮೂಲಿಕೆಗಳು ರಾಮಬಾಣ!

    ಶ್ವಾಸಕೋಶ ಸಂಬಂಧಿ ಕಾಯಿಲೆ ಉಂಟಾಗಲು ಕೇವಲ ಬಾಹ್ಯ ಅಂಶಗಳು ಮಾತ್ರ ಕಾರಣವಲ್ಲ. ಅದರ ಜೊತೆಗೆ ನೀವು ತಿನ್ನುವ ಆಹಾರ ಮತ್ತು ಪಾನೀಯವೂ ಸಹ ಕಾರಣವಾಗಿದೆ. ಕರಿದ ಹಾಗೂ ಹೆಚ್ಚು ಸಕ್ಕರೆ ಪದಾರ್ಥ ಸೇವನೆ ಕಾಯಿಲೆಗೆ ಕಾರಣವಾಗುತ್ತದೆ. ಇದು ಶ್ವಾಸಕೋಶ ಸಂಬಂಧಿ ಸಮಸ್ಯೆ ಉಂಟು ಮಾಡುತ್ತದೆ. ಶ್ವಾಸಕೋಶದಲ್ಲಿ ಕೊಳಕು ಶೇಖರಣೆ ಉಸಿರಾಟ ತೊಂದರೆ ಉಂಟು ಮಾಡುತ್ತದೆ.

    MORE
    GALLERIES

  • 38

    Lungs Health: ಶ್ವಾಸಕೋಶ, ಉಸಿರಾಟ ಸಮಸ್ಯೆ ನಿವಾರಣೆಗೆ ಈ ಮೂಲಿಕೆಗಳು ರಾಮಬಾಣ!

    ಉಸಿರಾಟದ ತೊಂದರೆ, ಉಸಿರಾಡುವಾಗ ಎದೆಯಲ್ಲಿ ಭಾರವಾದ ಭಾವನೆ ಬರುವುದು, ಉಸಿರಾಟದ ವೇಗ, ಹಾಗೂ ಎದೆಯಲ್ಲಿ ಏನೋ ಸಿಲುಕಿದಂತಹ ಭಾವನೆಯು ಶ್ವಾಸಕೋಶ ಸಮಸ್ಯೆಯ ಮುಖ್ಯ ಲಕ್ಷಣಗಳಾಗಿವೆ. ಉತ್ತಮ ಉಸಿರಾಟವಿರದೇ ಹೋದರೆ ಇತರೆ ಅಂಗಗಳಿಗೆ ಹಾನಿ ಆಗುತ್ತದೆ.

    MORE
    GALLERIES

  • 48

    Lungs Health: ಶ್ವಾಸಕೋಶ, ಉಸಿರಾಟ ಸಮಸ್ಯೆ ನಿವಾರಣೆಗೆ ಈ ಮೂಲಿಕೆಗಳು ರಾಮಬಾಣ!

    ಉಸಿರಾಟದ ವ್ಯವಸ್ಥೆ ಚೆನ್ನಾಗಿಡಲು ಹಸಿರು ತುಳಸಿ ಎಲೆಗಳು ಸಹಕಾರಿ. ಇದು ಶ್ವಾಸಕೋಶಕ್ಕೆ ಸಂಬಂಧಿಸಿದ ಕಾಯಿಲೆ ಕಡಿಮೆ ಮಾಡಲು ಸಹಕಾರಿ. ಶ್ವಾಸಕೋಶದ ಕಾರ್ಯ ನಿರ್ವಹಣೆಯ ಮೇಲೆ ಕೆಟ್ಟ ಪರಿಣಾಮ ಬೀರುವ ಅಂಶಗಳಿಂದ ಶ್ವಾಸಕೋಶವನ್ನು ಕಾಪಾಡುತ್ತದೆ. ಸೋಂಕು, ಕೆಮ್ಮು, ಕಫ ಕಡಿಮೆ ಮಾಡುತ್ತದೆ. ಉಸಿರಾಟದ ತೊಂದರೆ ಸಮಸ್ಯೆ ಕಡಿಮೆ ಮಾಡುತ್ತದೆ.

    MORE
    GALLERIES

  • 58

    Lungs Health: ಶ್ವಾಸಕೋಶ, ಉಸಿರಾಟ ಸಮಸ್ಯೆ ನಿವಾರಣೆಗೆ ಈ ಮೂಲಿಕೆಗಳು ರಾಮಬಾಣ!

    ಲೈಕೋರೈಸ್ ರೂಟ್ ತಿನ್ನುವುದರಿಂದ ಶ್ವಾಸಕೋಶ ಸಮಸ್ಯೆ, ಉಸಿರಾಟ ಸಮಸ್ಯೆ ನಿವಾರಿಸುತ್ತದೆ. ನೋಯುತ್ತಿರುವ ಗಂಟಲು ಮತ್ತು ಕೆಮ್ಮಿನಿಂದ ಪರಿಹಾರ ನೀಡುತ್ತದೆ ಲೈಕೋರೈಸ್ ರೂಟ್. ಇದನ್ನು ಬಾಯಲ್ಲಿ ಹಾಕಿ ಜಗಿದು ತಿನ್ನಬೇಕು. ಗ್ಲೈಸಿರೈಜಿನ್ ಎಂಬ ಟ್ಯಾನಿನ್ ಅಂಶ ಶ್ವಾಸಕೋಶ ದೀರ್ಘಕಾಲದ ಕಾಯಿಲೆ ಕಡಿಮೆ ಮಾಡುತ್ತದೆ.

    MORE
    GALLERIES

  • 68

    Lungs Health: ಶ್ವಾಸಕೋಶ, ಉಸಿರಾಟ ಸಮಸ್ಯೆ ನಿವಾರಣೆಗೆ ಈ ಮೂಲಿಕೆಗಳು ರಾಮಬಾಣ!

    ಪಿಪ್ಪಿಲಿ ತಿಂದರೆ ಶೀತ ಮತ್ತು ಕೆಮ್ಮು ಸಮಸ್ಯೆ ನಿವಾರಣೆಗೆ ಪರಿಣಾಮಕಾರಿ ಮೂಲಿಕೆ. ಆಯುರ್ವೇದದ ಪ್ರಕಾರ ಇದು ಉಸಿರಾಟದ ವ್ಯವಸ್ಥೆ ಸುಧಾರಿಸಲು ಉತ್ತಮ ಮೂಲಿಕೆ ಎನ್ನಲಾಗಿದೆ. ಇದರ ಸಕ್ರಿಯ ಘಟಕ ಪೈಪರಿನ್ ಶ್ವಾಸಕೋಶದ ಕಾರ್ಯ ಹೆಚ್ಚಿಸುತ್ತದೆ. ಜೊತೆಗೆ ಕಫ ತೆಗೆದು ಹಾಕುತ್ತದೆ. ಸೋಂಕಿನಿಂದ ರಕ್ಷಿಸುತ್ತದೆ.

    MORE
    GALLERIES

  • 78

    Lungs Health: ಶ್ವಾಸಕೋಶ, ಉಸಿರಾಟ ಸಮಸ್ಯೆ ನಿವಾರಣೆಗೆ ಈ ಮೂಲಿಕೆಗಳು ರಾಮಬಾಣ!

    ಕಲ್ಮೇಘ ಮೂಲಿಕೆಯ ಬೇರು ಮತ್ತು ಎಲೆಗಳು ನಿವಾರಣೆಗೆ ಸಹಕಾರಿ. ಇದು ಪ್ರಬಲ ಉರಿಯೂತ ವಿರೋಧಿ, ಆಂಟಿವೈರಲ್, ಬ್ಯಾಕ್ಟೀರಿಯಾ ವಿರೋಧಿ ಮತ್ತು ಉತ್ಕರ್ಷಣ ನಿರೋಧಕ ಗುಣಲಕ್ಷಣ ಹೊಂದಿದೆ. ಸೋಂಕು, ಜ್ವರ, ನೆಗಡಿ, ಕೆಮ್ಮು, ಜ್ವರ ಮತ್ತು ಇತರ ಉಸಿರಾಟ ಸಮಸ್ಯೆ ನಿವಾರಿಸುತ್ತದೆ. ಗಳಿಗೆ ಚಿಕಿತ್ಸೆ ನೀಡಲು ಸಹಾಯಕವಾಗಿವೆ.

    MORE
    GALLERIES

  • 88

    Lungs Health: ಶ್ವಾಸಕೋಶ, ಉಸಿರಾಟ ಸಮಸ್ಯೆ ನಿವಾರಣೆಗೆ ಈ ಮೂಲಿಕೆಗಳು ರಾಮಬಾಣ!

    ವಾಸಕ ಮೂಲಿಕೆಯು ಮಲಬಾರ್ ಅಡಿಕೆ ಎಂದೇ ಪ್ರಸಿದ್ಧವಾಗಿದೆ. ಇದು ಉಸಿರಾಟದ ಕಾಯಿಲೆ ನಿವಾರಣೆಗೆ ಸಹಕಾರಿ. ಉಸಿರಾಟದ ವ್ಯವಸ್ಥೆ ಬಲಪಡಿಸುತ್ತದೆ. ಶ್ವಾಸಕೋಶ ಶುದ್ಧೀಕರಿಸುತ್ತದೆ. ಶ್ವಾಸಕೋಶದ ಕಾಯಿಲೆ ನಿವಾರಿಸುತ್ತದೆ. ಇದರ ಎಲೆಗಳ ಪಾನೀಯ ಲಾಭಕಾರಿ.

    MORE
    GALLERIES