ಕೆಲವರು ಪ್ರೀತಿ ಮಾಡುತ್ತಾರೆ, ಆದರೆ ತಮ್ಮ ಲವ್ ವಿಷ್ಯ ಬೇರೆಯವರಿಗೆ ಗೊತ್ತಾಗಬಾರ್ದು ಅಂತ ಇಚ್ಛಿಸುತ್ತಾರೆ. ಹೊರಗಿನ ಪ್ರಪಂಚಕ್ಕೆ ನಮ್ಮ ಪ್ರೀತಿಯ ವಿಷಯ ತಿಳಿಯಬಾರದು, ಗುಟ್ಟಾಗಿ ಇರಬೇಕು ಅಂತ ಬಯಸ್ತಾರೆ. ಯಾಕೆಂದರೆ ಒಂದು ವೇಳೆ ವಿಷಯ ಗೊತ್ತಾದರೆ, ಜನರು ಇಲ್ಲಸಲ್ಲದ ಮಾತುಗಳನ್ನು ಆಡುತ್ತಾರೆ, ಟೀಕೆ-ಟಿಪ್ಪಟಿಗಳು ಸೃಷ್ಟಿಯಾಗುತ್ತವೆ. ನಮ್ಮ ಬಗ್ಗೆ ಗಾಸಿಪ್ಗಳು ಸೃಷ್ಟಿಯಾಗುತ್ತವೆ ಎಂಬ ಉದ್ದೇಶದಿಂದ ಈ ರೀತಿ ಗೌಪ್ಯವಾಗಿ ಇಡುತ್ತಾರೆ.
ಅನೇಕರು ತಮ್ಮ ಪ್ರೀತಿಯ ವಿಷ್ಯವನ್ನು ತಮ್ಮ ಸ್ನೇಹಿತರು ಮತ್ತು ಕುಟುಂಬ ಸದಸ್ಯರಿಂದ ಮುಚ್ಚಿಡಲು ಪ್ರಯತ್ನಿಸುತ್ತಾರೆ. ಬೇರೆಯವರಿಗೆ ವಿಷಯ ತಿಳಿದರೆ ಅವರು ನಮ್ಮ ಪ್ರೀತಿ ವಿಷಯವನ್ನು ತಮ್ಮ ತಂದೆ-ತಾಯಿ ಜೊತೆ ಬಹಿರಂಗವಾಗಿ ಹೇಳಿಬಿಡುತ್ತಾರೆ ಎಂಬ ಭಯದಿಂದಲೂ ಲವ್ ಮ್ಯಾಟರ್ನ್ನು ರಹಸ್ಯವಾಗಿ ಇಡುತ್ತಾರೆ. ಮದುವೆ ಮಾತುಕತೆ ಬಂದಾಗ ಈ ವಿಷಯ ಹೇಳಿದ್ರಾಯ್ತು ಅಂತ ಅಲ್ಲಿವರೆಗೆ, ತಮ್ಮ ಪ್ರೀತಿ ವಿಷಯದ ಬಗ್ಗೆ ಯಾರೊಂದಿಗೂ ಬಾಯಿ ಬಿಟ್ಟಿರಲ್ಲ. ಹೀಗೆ ತಮ್ಮ ಪ್ರೀತಿಯನ್ನು ರಹಸ್ಯವಾಗಿ ಇಡಲು ಬಯಸುವವರಿಗೆ ಕೆಲವು ಸಖತ್ ಟಿಪ್ಸ್ ಇಲ್ಲಿವೆ.
ಸೋಷಿಯಲ್ ಮೀಡಿಯಾ ಪೋಸ್ಟ್: ಸೋಷಿಯಲ್ ಮೀಡಿಯಾದಲ್ಲಿ ನಿಮ್ಮ ಸಂಗಾತಿಯೊಂದಿಗಿನ ಫೋಟೋ ಹಂಚಿಕೊಳ್ಳಲು ಕೇವಲ ಒಂದು ಸೆಕೆಂಡ್ ಸಾಕು. ಆದರೆ ಆ ಫೋಟೋಗಳನ್ನು ಬೇರೆಯವರು ಸುಲಭವಾಗಿ ಡೌನ್ಲೋಡ್ ಮಾಡಬಹುದು ಅಥವಾ ಸ್ಕ್ರೀನ್ಶಾಟ್ ತೆಗೆದುಕೊಳ್ಳಬಹುದು. ಬಳಿಕ ನಿಮ್ಮ ಫ್ಯಾಮಿಲಿಯವರಿಗೂ ವಿಷಯ ತಿಳಿಯಬಹುದು. ಹೀಗಾಗಿ ನಿಮ್ಮ ಪ್ರೇಮ ಸಂಬಂಧ ಯಾರಿಗೂ ತಿಳಿಯಬಾರದು ಎಂಬ ಉದ್ದೇಶವಿದ್ದರೆ, ಸಂಗಾತಿಯೊಂದಿಗಿನ ಫೋಟೋಗಳನ್ನು ಸೋಷಿಯಲ್ ಮೀಡಿಯಾಗಳಾದ ಫೇಸ್ಬುಕ್, ವಾಟ್ಸಾಪ್, ಇನ್ಸ್ಟಾಗ್ರಾಂಗಳಲ್ಲಿ ಹಾಕಬೇಡಿ.