Weight Loss in Summer: ಬೇಸಿಗೆಯಲ್ಲಿ ಈ ಹಣ್ಣುಗಳ ಮೂಲಕ ಸುಲಭವಾಗಿ ದೇಹದ ತೂಕ ಇಳಿಸಬಹುದು

Summer Foods: ಬೇಸಿಗೆ ಕಾಲ ಬಂದೇ ಬಿಡ್ತು. ಸೂರ್ಯನ ಶಾಖದಿಂದ ಹಿಂಸೆ ಅನುಭವಿಸುವವರಿಗೆ ಜಿಮ್ ಗೆ ಹೋಗಿ ಬೆವರಿಳಿಸೋದು ನಿಜಕ್ಕೂ ಸವಾಲಿನ ಕೆಲಸ. ಹಾಗಾಂತ ನಿಮ್ಮ ತೂಕ ಇಳಿಕೆ ಗುರಿಯನ್ನು ಕೈಬಿಡಬೇಕು ಅಂತೇನು ಇಲ್ಲ. ಬೇಸಿಗೆ ಕಾಲದಲ್ಲಿ ಯತೇಚ್ಛವಾಗಿ ಸಿಗುವ ಆಹಾರ ಪದಾರ್ಥಗಳ ಮೂಲಕ ಬೇಗನೇ ದೇಹದ ತೂಕ ಇಳಿಸಬಹುದು.

First published:

  • 17

    Weight Loss in Summer: ಬೇಸಿಗೆಯಲ್ಲಿ ಈ ಹಣ್ಣುಗಳ ಮೂಲಕ ಸುಲಭವಾಗಿ ದೇಹದ ತೂಕ ಇಳಿಸಬಹುದು

    ಈ ಋತುವಿನಲ್ಲಿ ಅನೇಕ ಆರೋಗ್ಯಕರ ಆಹಾರಗಳು ಲಭ್ಯವಿವೆ. ಇವು ತೂಕವನ್ನು ಕಳೆದುಕೊಳ್ಳುವಲ್ಲಿ ತುಂಬಾ ಸಹಾಯಕಾರಿಯಾಗಿವೆ. ಅಂತಹ 6 ಆಹಾರಗಳ ಬಗ್ಗೆ ಇಲ್ಲಿ ತಿಳಿಸಲಾಗಿದೆ. ಇವುಗಳನ್ನು ಹೆಚ್ಚಾಗಿ ತಿಂದರೆ ನಿಮ್ಮ ತೂಕ ಬೇಗನೇ ಕಡಿಮೆಯಾಗುತ್ತದೆ.

    MORE
    GALLERIES

  • 27

    Weight Loss in Summer: ಬೇಸಿಗೆಯಲ್ಲಿ ಈ ಹಣ್ಣುಗಳ ಮೂಲಕ ಸುಲಭವಾಗಿ ದೇಹದ ತೂಕ ಇಳಿಸಬಹುದು

    ಕಲ್ಲಂಗಡಿ: ಈ ಕಣ್ಣಿನಲ್ಲಿ ನೀರು ಸಮೃದ್ಧವಾಗಿರುವ ಕಾರಣ ಬೇಸಿಗೆಯಲ್ಲಿ ಹೆಚ್ಚು ಸೇವಿಸಬಹುದಾಗಿದೆ. ಈ ಹಣ್ಣು ಹೆಚ್ಚಿನ ಕ್ಯಾಲೋರಿಗಳನ್ನು ಸುಡುವಲ್ಲಿ ಸಹಾಯ ಮಾಡುತ್ತದೆ. ಸ್ನ್ಯಾಕ್ಸ್ ಆಗಿ ಕಟ್ ಮಾಡಿದ ಹಣ್ಣು, ಫ್ರೂಟ್ ಸಲಾಡ್, ಜ್ಯೂಸ್ ರೂಪದಲ್ಲಿ ತಿಂದರೆ ಬೇಗನೇ ಸಣ್ಣಗೆ ಆಗುತ್ತೀರ.

    MORE
    GALLERIES

  • 37

    Weight Loss in Summer: ಬೇಸಿಗೆಯಲ್ಲಿ ಈ ಹಣ್ಣುಗಳ ಮೂಲಕ ಸುಲಭವಾಗಿ ದೇಹದ ತೂಕ ಇಳಿಸಬಹುದು

    ಪೇರಳೆ: ಬೇಸಿಗೆಯಲ್ಲೂ ಪೇರಳೆ ಹಣ್ಣನ್ನೂ ತಿನ್ನಬಹುದು. ಈ ಹಣ್ಣಿನಲ್ಲಿ ಉತ್ತಮ ಪ್ರಮಾಣದ ಪೆಕ್ಟಿನ್ ಇದೆ, ಇದು ತೂಕ ನಷ್ಟವನ್ನು ಉತ್ತೇಜಿಸುತ್ತದೆ. ರಸಭರಿತವಾದ ಪೇರಳೆ ಹಣ್ಣು ಸೇಬಿಗಿಂತ ಶೇ.30ರಷ್ಟು ಹೆಚ್ಚು ಪೊಟ್ಯಾಸಿಯಮ್ ಅನ್ನು ಹೊಂದಿರುತ್ತದೆ.

    MORE
    GALLERIES

  • 47

    Weight Loss in Summer: ಬೇಸಿಗೆಯಲ್ಲಿ ಈ ಹಣ್ಣುಗಳ ಮೂಲಕ ಸುಲಭವಾಗಿ ದೇಹದ ತೂಕ ಇಳಿಸಬಹುದು

    ಕರಬೂಜ ಹಣ್ಣು: ಇದನ್ನು ತಿಂದರೆ ಹೆಚ್ಚು ಹೊತ್ತು ಹಸಿವಾಗುವುದಿಲ್ಲ. ಅರ್ಧ ಕಪ್ ಕರಬೂಜ ತಿಂದ ನಂತರ ಸುಮಾರು ಎರಡು ಗಂಟೆಗಳ ಕಾಲ ಬೇರೆ ಏನನ್ನೂ ತಿನ್ನಬೇಕು ಅನಿಸುವುದಿಲ್ಲ. ವಿಟಮಿನ್ ಎ ನಿಂದ ಸಮೃದ್ಧವಾಗಿರುವ ಈ ಹಣ್ಣು ಅಪಧಮನಿಗಳಲ್ಲಿ ಪ್ಲೇಕ್ ರಚನೆಯನ್ನು ತಡೆಯುತ್ತದೆ.

    MORE
    GALLERIES

  • 57

    Weight Loss in Summer: ಬೇಸಿಗೆಯಲ್ಲಿ ಈ ಹಣ್ಣುಗಳ ಮೂಲಕ ಸುಲಭವಾಗಿ ದೇಹದ ತೂಕ ಇಳಿಸಬಹುದು

    ಬೆರ್ರಿಗಳನ್ನು ತಿನ್ನುವ ಮೂಲಕ ತೂಕವನ್ನ ಕಳೆದುಕೊಳ್ಳಬಹುದು. ಇದು ಹೊಟ್ಟೆಯ ಆರೋಗ್ಯವನ್ನು ಕಾಪಾಡುತ್ತದೆ. ಅದರಲ್ಲೂ ಬ್ಲ್ಯಾಕ್ ಬೆರ್ರಿ ಹೊಟ್ಟೆಗೆ ಆರೋಗ್ಯಕರ. ಫೈಬರ್ ಹೆಚ್ಚಾಗಿದ್ದು ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ. ಬೆಳಗಿನ ಉಪಾಹಾರದಲ್ಲಿ ಈ ಹಣ್ಣುಗಳನ್ನು ಸೇವಿಸಿ. ಇದನ್ನು ಓಟ್ ಮೀಲ್ ಗೆ ಕೂಡ ಸೇರಿಸಬಹುದು.

    MORE
    GALLERIES

  • 67

    Weight Loss in Summer: ಬೇಸಿಗೆಯಲ್ಲಿ ಈ ಹಣ್ಣುಗಳ ಮೂಲಕ ಸುಲಭವಾಗಿ ದೇಹದ ತೂಕ ಇಳಿಸಬಹುದು

    ಐಸ್ಡ್ ಗ್ರೀನ್ ಟೀ ಕುಡಿಯಿರಿ. ಬೇಸಿಗೆಯಲ್ಲಿ ಬಿಸಿಯಾದ ಟೀ-ಕಾಫಿ ಬದಲು ಐಸ್ಡ್ ಗ್ರೀನ್ ಟೀ ಕುಡಿಯಬೇಕು. ಹೆಚ್ಚು ಸಕ್ಕರೆಯಿರುವ ಕೋಲ್ಡ್ ಕಾಫಿ ಅಥವಾ ಐಸ್ ಟೀ ಕುಡಿಯಬೇಡಿ. ಹಸಿರು ಚಹಾದಲ್ಲಿರುವ ಕ್ಯಾಟೆಚಿನ್ ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ. ಕೆಫೀನ್ ನಿಮ್ಮ ಜೀರ್ಣಶಕ್ತಿಯನ್ನು ಹೆಚ್ಚಿಸುತ್ತವೆ.

    MORE
    GALLERIES

  • 77

    Weight Loss in Summer: ಬೇಸಿಗೆಯಲ್ಲಿ ಈ ಹಣ್ಣುಗಳ ಮೂಲಕ ಸುಲಭವಾಗಿ ದೇಹದ ತೂಕ ಇಳಿಸಬಹುದು

    ಸೌತೆಕಾಯಿಯು ದೇಹವನ್ನು ಒಳಗಿನಿಂದ ತಂಪಾಗಿಸುವ ಉತ್ತಮವಾದ ಜಲಸಂಚಯನ ತರಕಾರಿಯಾಗಿದೆ. ನೀವು ಇದನ್ನು ಸಲಾಡ್ಗಳು, ಸ್ಯಾಂಡ್ ವಿಚ್ಗಳಲ್ಲಿ ತಿನ್ನಬಹುದು. ಬೇಸಿಗೆಯಲ್ಲಿ ಸೌತೆಕಾಯಿ ರಸವನ್ನು ಸೇವಿಸುವುದು ಒಳ್ಳೆಯದು. ಇದು ಚಯಾಪಚಯವನ್ನು ಸುಧಾರಿಸುವ ಮೂಲಕ ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ.

    MORE
    GALLERIES