ಜನವರಿ 1 ಭಾನುವಾರ ರಜಾದಿನ, ಜೊತೆಗೆ ಹೊಸ ವರ್ಷಾರಂಭ. ಹಿಂದಿನ ದಿನ ಶನಿವಾರವಾದ್ದರಿಂದ, ಆವತ್ತು ರಜೆ ಇರುವವರು, ಶುಕ್ರವಾರ ಮತ್ತು ಸೋಮವಾರ ರಜೆ ಹಾಕಿಕೊಂಡು ಈ ಲಾಂಗ್ ವೀಕೆಂಡ್ಗೆ ಟ್ರಿಪ್ ಹೋಗಬಹುದು. ಜೊತೆಗೆ ಹೊಸ ವರ್ಷ ಆಚರಣೆ ಮಾಡಬಹುದು. ಜನವರಿ 14 ಶನಿವಾರ ಮಕರ ಸಂಕ್ರಾಂತಿ, ಜನವರಿ 15 ಭಾನುವಾರ ರಜಾದಿನವಾಗಿದೆ. ಇಲ್ಲೂ ಸಹ ಶುಕ್ರವಾರ ಮತ್ತು ಸೋಮವಾರ ರಜಾ ತೆಗೆದುಕೊಂಡರೆ 4 ದಿನಗಳ ಕಾಲ ದೀರ್ಘ ವಾರಾಂತ್ಯ ಟ್ರಿಪ್ ಹೋಗಿ ಬರಬಹುದು. ಜನವರಿ 26 ಗುರುವಾರ ಗಣರಾಜ್ಯೋತ್ಸವ- ರಜಾದಿನ. 27ಕ್ಕೆ ರಜೆ ತೆಗೆದುಕೊಂಡರೆ, ಶನಿವಾರ ಮತ್ತು ಭಾನುವಾರ ರಜಾ ಇರೋದ್ರಿಂದ 4 ದಿನಗಳ ರಜೆಯನ್ನು ಎಂಜಾಯ್ ಮಾಡಬಹುದು.
ಆಗಸ್ಟ್- ಆಗಸ್ಟ್ 12 ಶನಿವಾರ. ಆಗಸ್ಟ್ 13 ಭಾನುವಾರ. ಆಗಸ್ಟ್ 15 ಸ್ವಾತಂತ್ರ್ಯ ದಿನಾಚರಣೆಯಂದು ರಜಾದಿನವಾಗಿದೆ. ಆಗಸ್ಟ್ 14 ರಂದು ರಜೆ ತೆಗೆದರೆ ಸತತ ನಾಲ್ಕು ದಿನ ರಜೆ ಸಿಗುತ್ತೆ. ಆಗಸ್ಟ್ 26 ಶನಿವಾರ ಮತ್ತು ಆಗಸ್ಟ್ 27 ಭಾನುವಾರ. ಆಗಸ್ಟ್ 30 ರಂದು ರಾಖಿ ಹುಣ್ಣಿಮೆ ಇದೆ, ನೀವು ಆಗಸ್ಟ್ 28 ಮತ್ತು 29 ರಂದು ರಜೆ ತೆಗೆದುಕೊಂಡರೆ, ರಾಖಿ ಹುಣ್ಣಿಮೆಯ ಸಂದರ್ಭದಲ್ಲಿ ನಿಮ್ಮ ಸಹೋದರಿಯರೊಂದಿಗೆ ರಜೆಯನ್ನು ಆನಂದಿಸಬಹುದು.
ಸೆಪ್ಟೆಂಬರ್- ಸೆಪ್ಟೆಂಬರ್ 7 ಗುರುವಾರ ಕೃಷ್ಣಾಷ್ಟಮಿ ರಜಾದಿನವಾಗಿದೆ. ಸೆಪ್ಟೆಂಬರ್ 9 ಶನಿವಾರ, ಸೆಪ್ಟೆಂಬರ್ 10 ಭಾನುವಾರ ರಜೆ. ಸೋಮವಾರ, ಸೆಪ್ಟೆಂಬರ್ 8 ಕ್ಕೆ ರಜೆ ತೆಗೆದಕೊಂಡರೆ ದೀರ್ಘ ವಾರಾಂತ್ಯವನ್ನು ಪ್ಲ್ಯಾನ್ ಮಾಡಬಹುದು. ಸೆಪ್ಟೆಂಬರ್ 16 ಶನಿವಾರ ಮತ್ತು ಸೆಪ್ಟೆಂಬರ್ 17 ಭಾನುವಾರ. ವಿನಾಯಕ ಚೌತಿಯಂದು ಸೆಪ್ಟೆಂಬರ್ 19 ರಂದು ರಜೆ. ಸೆಪ್ಟಂಬರ್ 18 ಸೋಮವಾರ ರಜೆ ತೆಗೆದುಕೊಂಡರೆ ಸತತ ನಾಲ್ಕು ದಿನಗಳ ಕಾಲ ರಜೆಯನ್ನು ಆನಂದಿಸಬಹುದು.