Sitting Disease: ದೀರ್ಘಕಾಲ ಕುಳಿತೇ ಇರುತ್ತೀರಾ? ಅಪಾಯಕಾರಿ ಸಿಟ್ಟಿಂಗ್ ಡಿಸೀಸ್​ಗೆ ಬಲಿಯಾಗಬಹುದು ಎಚ್ಚರ!

ಸಿಟ್ಟಿಂಗ್ ಡಿಸೀಸ್ ಎಂಬುದರ ಬಗ್ಗೆ ನೀವು ಎಂದಾದ್ರೂ ಕೇಳಿದ್ದೀರಾ? ಇತ್ತೀಚಿನ ದಿನಗಳಲ್ಲಿ ಕಚೇರಿಯಲ್ಲಿ ಕುಳಿತು ಗಂಟೆಗಟ್ಟಲೆ ಕೆಲಸ ಮಾಡುವವರ ಸಂಖ್ಯೆ ಹೆಚ್ಚಿದೆ. ಹೀಗೆ ದೀರ್ಘಕಾಲ ಕುಳಿತು ಕೆಲಸ ಮಾಡುವವರಲ್ಲಿ ಸಿಟ್ಟಿಂಗ್ ಡಿಸೀಸ್ ಹೆಚ್ಚಿದೆ. ಅದರ ಬಗ್ಗೆ ಇಲ್ಲಿ ನೋಡೋಣ.

First published:

  • 17

    Sitting Disease: ದೀರ್ಘಕಾಲ ಕುಳಿತೇ ಇರುತ್ತೀರಾ? ಅಪಾಯಕಾರಿ ಸಿಟ್ಟಿಂಗ್ ಡಿಸೀಸ್​ಗೆ ಬಲಿಯಾಗಬಹುದು ಎಚ್ಚರ!

    ಸಿಟ್ಟಿಂಗ್ ಕಾಯಿಲೆ ಹೆಚ್ಚಾಗಿ ದೀರ್ಘಕಾಲ ಕುಳಿತು ಕೆಲಸ ಮಾಡುವವರಲ್ಲಿ ಕಂಡು ಬರುತ್ತದೆ. ಇದರಿಂದಾಗಿ ಧೂಮಪಾನ ಮಾಡದವರಲ್ಲಿಯೂ ಹೃದಯರಕ್ತನಾಳದ ಕಾಯಿಲೆ ಅಪಾಯ ಹೆಚ್ಚುತ್ತದೆ. ಇದು ಹಲವು ಗಂಭೀರ ಕಾಯಿಲೆಗಳಿಗೆ ಕಾರಣವಾಗುತ್ತಿದೆ.

    MORE
    GALLERIES

  • 27

    Sitting Disease: ದೀರ್ಘಕಾಲ ಕುಳಿತೇ ಇರುತ್ತೀರಾ? ಅಪಾಯಕಾರಿ ಸಿಟ್ಟಿಂಗ್ ಡಿಸೀಸ್​ಗೆ ಬಲಿಯಾಗಬಹುದು ಎಚ್ಚರ!

    ದೀರ್ಘಕಾಲ ಕುಳಿತು ಕೆಲಸ ಮಾಡುವುದರಿಂದ ಬೊಜ್ಜು, ಮಧುಮೇಹ ಮತ್ತು ಅಧಿಕ ರಕ್ತದೊತ್ತಡ ಸಮಸ್ಯೆಗಳ ಅಪಾಯ ಹೆಚ್ಚುತ್ತಿದೆ. ಈ ಸಿಟ್ಟಿಂಗ್ ಡಿಸೀಸ್ ಧೂಮಪಾನಕ್ಕಿಂತ ಹೆಚ್ಚು ಹಾನಿಕರವಾಗಿದೆ.

    MORE
    GALLERIES

  • 37

    Sitting Disease: ದೀರ್ಘಕಾಲ ಕುಳಿತೇ ಇರುತ್ತೀರಾ? ಅಪಾಯಕಾರಿ ಸಿಟ್ಟಿಂಗ್ ಡಿಸೀಸ್​ಗೆ ಬಲಿಯಾಗಬಹುದು ಎಚ್ಚರ!

    ಧೂಮಪಾನ ಮಾಡದೇ ಇದ್ದರೂ ಸಹ ಸಿಟ್ಟಿಂಗ್ ಡಿಸೀಸ್ ಹೃದಯ ಕಾಯಿಲೆ ಹೆಚ್ಚಿಸುತ್ತದೆ. ಧೂಮಪಾನ ಆರೋಗ್ಯಕ್ಕೆ ತುಂಬಾ ಅಪಾಯಕಾರಿ. ಯಾವುದೇ ರೀತಿಯ ಚಟುವಟಿಕೆಯಿಲ್ಲದೆ ದೀರ್ಘಕಾಲ ಕುಳಿತುಕೊಳ್ಳುವುದು ಧೂಮಪಾನಕ್ಕೆ ಸಮಾನವಾದ ಹಾನಿ ಉಂಟು ಮಾಡುತ್ತದೆ ಎಂದು ಹೇಳಲಾಗಿದೆ.

    MORE
    GALLERIES

  • 47

    Sitting Disease: ದೀರ್ಘಕಾಲ ಕುಳಿತೇ ಇರುತ್ತೀರಾ? ಅಪಾಯಕಾರಿ ಸಿಟ್ಟಿಂಗ್ ಡಿಸೀಸ್​ಗೆ ಬಲಿಯಾಗಬಹುದು ಎಚ್ಚರ!

    ನಿರಂತರವಾಗಿ ಕುಳಿತುಕೊಳ್ಳದೇ ಮಧ್ಯಂತರದಲ್ಲಿ ಎದ್ದು ನಡೆದಾಡಬೇಕು. 30 ನಿಮಿಷಗಳ ಮಧ್ಯಂತರದಲ್ಲಿ ಸ್ವಲ್ಪ ನಡೆದಾಡಿ, ಓಡಾಡಿ. ಇದು ಚಯಾಪಚಯ ದರವನ್ನು ಸಕ್ರಿಯಗೊಳಿಸುತ್ತದೆ. ಕೊಂಚ ವ್ಯಾಯಾಮ ಮಾಡಿ. ಇದು ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡುತ್ತದೆ.

    MORE
    GALLERIES

  • 57

    Sitting Disease: ದೀರ್ಘಕಾಲ ಕುಳಿತೇ ಇರುತ್ತೀರಾ? ಅಪಾಯಕಾರಿ ಸಿಟ್ಟಿಂಗ್ ಡಿಸೀಸ್​ಗೆ ಬಲಿಯಾಗಬಹುದು ಎಚ್ಚರ!

    ಸಿಟ್ಟಿಂಗ್ ಡಿಸೀಸ್ ಆರೋಗ್ಯ ಅಪಾಯ ಹೆಚ್ಚಿಸುತ್ತದೆ. ದೀರ್ಘಕಾಲ ಕುಳಿತುಕೊಳ್ಳುವುದು ಅನೇಕ ಆರೋಗ್ಯ ಸಮಸ್ಯೆ ಹೆಚ್ಚಿಸುತ್ತದೆ ಎಂದು ಹಲವಾರು ಸಂಶೋಧನೆಗಳು ಹೇಳುತ್ತವೆ. ಕಚೇರಿಯಲ್ಲಿ ಕೆಲಸ ಮಾಡುವವರಿಗೆ ಕುಳಿತುಕೊಳ್ಳುವ ಕಾಯಿಲೆಗೆ ಸಂಬಂಧಿಸಿದ ಎಲ್ಲಾ ಸಮಸ್ಯೆ ಕಾಡುತ್ತದೆ.

    MORE
    GALLERIES

  • 67

    Sitting Disease: ದೀರ್ಘಕಾಲ ಕುಳಿತೇ ಇರುತ್ತೀರಾ? ಅಪಾಯಕಾರಿ ಸಿಟ್ಟಿಂಗ್ ಡಿಸೀಸ್​ಗೆ ಬಲಿಯಾಗಬಹುದು ಎಚ್ಚರ!

    ಸ್ಥೂಲಕಾಯತೆ, ಅಧಿಕ ರಕ್ತದೊತ್ತಡ, ಅಧಿಕ ಸಕ್ಕರೆ, ಸೊಂಟದ ಸುತ್ತ ಒಳಾಂಗಗಳ ಕೊಬ್ಬು, ಮಲಬದ್ಧತೆ ಮತ್ತು ಅನಾರೋಗ್ಯಕರ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಳ, ಮೆಟಾಬಾಲಿಕ್ ಸಿಂಡ್ರೋಮ್ ಸಮಸ್ಯೆ ಹೆಚ್ಚಿಸುತ್ತದೆ. ರೋಗ ಕಡಿಮೆ ಮಾಡಲು ಸಕ್ರಿಯ ಜೀವನಶೈಲಿ ಮುಖ್ಯವಾಗಿದೆ ಅಂತಾರೆ ತಜ್ಞರು.

    MORE
    GALLERIES

  • 77

    Sitting Disease: ದೀರ್ಘಕಾಲ ಕುಳಿತೇ ಇರುತ್ತೀರಾ? ಅಪಾಯಕಾರಿ ಸಿಟ್ಟಿಂಗ್ ಡಿಸೀಸ್​ಗೆ ಬಲಿಯಾಗಬಹುದು ಎಚ್ಚರ!

    ಸಿಟ್ಟಿಂಗ್ ಡಿಸೀಸ್ ಮೆಟಬಾಲಿಕ್ ಸಿಂಡ್ರೋಮ್ ಮತ್ತು ಅತಿಯಾದ ಜಡ ಜೀವನಶೈಲಿಯ ಅಡ್ಡಪರಿಣಾಮ ಉಂಟು ಮಾಡುತ್ತದೆ. ಹಾಗಾಗಿ ದೈಹಿಕ ಚಟುವಟಿಕೆ ಹೆಚ್ಚಿಸಬೇಕು. ಅತಿಯಾಗಿ ಕುಳಿತುಕೊಳ್ಳದಂತೆ ಎಚ್ಚರಿಕೆ ವಹಿಸಿ. ಇದು ವಯಸ್ಸಾಗುವಿಕೆ ಸಂಕೇತಕ್ಕೂ ಕಾರಣವಾಗುತ್ತದೆ. ಸ್ಟ್ಯಾಂಡಿಂಗ್ ಮೋರ್ ಇದನ್ನು ಕಡಿಮೆ ಮಾಡಲು ಸಹಕಾರಿ.

    MORE
    GALLERIES