ಬೆಳಗಿನ ಉಪಾಹಾರವನ್ನು ರಾಜನಂತೆ, ಮಧ್ಯಾಹ್ನದ ಊಟವನ್ನು ರಾಜಕುಮಾರನಂತೆ ಮತ್ತು ರಾತ್ರಿಯ ಊಟವನ್ನು ಸಾಮಾನ್ಯರಂತೆ ಸೇವಿಸಿ ಎಂಬ ಗಾದೆ ಇದೆ. ಅಂದರೆ ನೀವು ಬೆಳಗ್ಗೆ ಅದ್ದೂರಿ ಉಪಹಾರವನ್ನು ಸೇವಿಸಬೇಕು ಎಂದು ಇದರ ಅರ್ಥವಲ್ಲ, ಬದಲಿಗೆ ಕೆಲವು ಪೌಷ್ಟಿಕ ಆಹಾರವನ್ನು ಸೇವಿಸುವ ಮೂಲಕ ದಿನವನ್ನು ಪ್ರಾರಂಭಿಸಿ. ಬೆಳಗಿನ ಉಪಾಹಾರದಲ್ಲಿ ಪೂರ್ಣ ಪ್ರಮಾಣದ ಊಟವನ್ನು ತಿನ್ನುವ ಅಗತ್ಯವಿಲ್ಲ, ಇದು ಹೊಟ್ಟೆಯಲ್ಲೇ ದೀರ್ಘಕಾಲ ಉಳಿಯುತ್ತದೆ.
ಒಂದು ಜಾರ್ನಲ್ಲಿ ಸ್ವಲ್ಪ ಹಾಲು, ಚಿಯಾ ಬೀಜಗಳು, ಮೇಪಲ್ ಸಿರಪ್ ಮತ್ತು ಉಪ್ಪನ್ನು ಮಿಶ್ರಣ ಮಾಡಿ ಮಿಶ್ರಣವನ್ನು 30 ನಿಮಿಷಗಳ ಕಾಲ ಬಿಡಿ ನಂತರ ಮಿಶ್ರಣವನ್ನು ರಾತ್ರಿಯಿಡೀ ಫ್ರಿಜ್ನಲ್ಲಿ ಇರಿಸಿ. ನಂತರ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿ. (ಈ ವರದಿಯು ಸಾಮಾನ್ಯ ಮಾಹಿತಿಗಾಗಿ ಮಾತ್ರ, ಆದ್ದರಿಂದ ಹೆಚ್ಚಿನ ವಿವರಗಳಿಗಾಗಿ ಯಾವುದಾದರೂ ತಜ್ಞರ ಸಲಹೆಯನ್ನು ಪಡೆಯಿರಿ)