Cardamom Benefits: ಏಲಕ್ಕಿ ಅಡುಗೆ ರುಚಿ ಮಾತ್ರ ಹೆಚ್ಚಿಸಲ್ಲ; ಹಲವಾರು ಸಮಸ್ಯೆಗಳಿಗೂ ಇದು ಮದ್ದು

ಏಲಕ್ಕಿ, ಭಾರತದ ವಿಶಿಷ್ಟ ಸಾಂಬಾರ ಪದಾರ್ಥವಾಗಿದ್ದು ಅಡುಗೆಯ ರುಚಿಯನ್ನು ಹೆಚ್ಚಿಸಲು ಬಳಸಲಾಗುತ್ತದೆ. ಏಲಕ್ಕಿ ಉಪಬೆಳೆಯಾಗಿದ್ದು ಭಾರತದಲ್ಲಿ, ಅದರಲ್ಲೂ ದಕ್ಷಿಣ ಭಾರತದಲ್ಲಿ ಅಡಿಕೆ, ತೆಂಗು, ಬಾಳೆ ಮೊದಲಾದ ತೋಟಗಳ ನಡುವೆ ನೆರಳಿನಲ್ಲಿ ಹೆಚ್ಚಾಗಿ ಬೆಳೆಯಲಾಗುತ್ತದೆ.

First published:

  • 17

    Cardamom Benefits: ಏಲಕ್ಕಿ ಅಡುಗೆ ರುಚಿ ಮಾತ್ರ ಹೆಚ್ಚಿಸಲ್ಲ; ಹಲವಾರು ಸಮಸ್ಯೆಗಳಿಗೂ ಇದು ಮದ್ದು

    ಏಲಕ್ಕಿ ಕೇವಲ ಆಹಾರದ ಸುಗಂಧಕಾರಕ ಮಾತ್ರವಲ್ಲ, ಆರೋಗ್ಯಕ್ಕೂ ಒಳ್ಳೆಯದು. ಆಹಾರದ ರುಚಿಯನ್ನು ಹೆಚ್ಚಿಸುವಲ್ಲಿ ಏಲಕ್ಕಿಗೆ ಸರಿಸಾಟಿ ಇಲ್ಲ. ಆದರೆ ಅದರ ಕೆಲವು ಅದ್ಭುತ ಗುಣಗಳ ಬಗ್ಗೆ ಅನೇಕ ಮಂದಿಗೆ ತಿಳಿದಿಲ್ಲ. ಕೇಸರಿ ಮತ್ತು ವೆನಿಲ್ಲಾ ನಂತರ ಹಸಿರು ಏಲಕ್ಕಿ ವಿಶ್ವದ ಅತ್ಯಂತ ದುಬಾರಿ ಮಸಾಲೆಗಳಲ್ಲಿ ಒಂದಾಗಿದೆ.

    MORE
    GALLERIES

  • 27

    Cardamom Benefits: ಏಲಕ್ಕಿ ಅಡುಗೆ ರುಚಿ ಮಾತ್ರ ಹೆಚ್ಚಿಸಲ್ಲ; ಹಲವಾರು ಸಮಸ್ಯೆಗಳಿಗೂ ಇದು ಮದ್ದು

    ಏಲಕ್ಕಿ, ಭಾರತದ ವಿಶಿಷ್ಟ ಸಾಂಬಾರ ಪದಾರ್ಥವಾಗಿದ್ದು ಅಡುಗೆಯ ರುಚಿಯನ್ನು ಹೆಚ್ಚಿಸಲು ಬಳಸಲಾಗುತ್ತದೆ. ಏಲಕ್ಕಿ ಉಪಬೆಳೆಯಾಗಿದ್ದು ಭಾರತದಲ್ಲಿ, ಅದರಲ್ಲೂ ದಕ್ಷಿಣ ಭಾರತದಲ್ಲಿ ಅಡಿಕೆ, ತೆಂಗು, ಬಾಳೆ ಮೊದಲಾದ ತೋಟಗಳ ನಡುವೆ ನೆರಳಿನಲ್ಲಿ ಹೆಚ್ಚಾಗಿ ಬೆಳೆಯಲಾಗುತ್ತದೆ.

    MORE
    GALLERIES

  • 37

    Cardamom Benefits: ಏಲಕ್ಕಿ ಅಡುಗೆ ರುಚಿ ಮಾತ್ರ ಹೆಚ್ಚಿಸಲ್ಲ; ಹಲವಾರು ಸಮಸ್ಯೆಗಳಿಗೂ ಇದು ಮದ್ದು

    ಜಗತ್ತಿನಲ್ಲಿ ಅತ್ಯಂತ ಉತ್ತಮ ಗುಣಮಟ್ಟದ ಏಲಕ್ಕಿ ಬೆಳೆಯುವ ದೇಶ ಗ್ವಾಟೆಮಾಲಾ. ಈ ಏಲಕ್ಕಿಗಳು ಹಸಿರಾಗಿದ್ದು ದೊಡ್ಡದಾಗಿದ್ದರೆ ಇದರ ಬಳಿಕದ ಸ್ಥಾನ ಪಡೆಯುವ ಭಾರತ ಮತ್ತು ಶ್ರೀಲಂಕಾದ ಏಲಕ್ಕಿಗಳು ಬಿಳಿ ಬಣ್ಣದಲ್ಲಿರುತ್ತವೆ. ಆದರೆ ಸ್ವಾದ ಮತ್ತು ಗುಣದಲ್ಲಿ ಇದು ಪರಿಪೂರ್ಣವಾಗಿ ಭಿನ್ನವಾಗಿದೆ.

    MORE
    GALLERIES

  • 47

    Cardamom Benefits: ಏಲಕ್ಕಿ ಅಡುಗೆ ರುಚಿ ಮಾತ್ರ ಹೆಚ್ಚಿಸಲ್ಲ; ಹಲವಾರು ಸಮಸ್ಯೆಗಳಿಗೂ ಇದು ಮದ್ದು

    ಕೌಟಿಲ್ಯನ 'ಅರ್ಥಶಾಸ್ತ್ರ'ದಲ್ಲಿ ಹಸಿರು ಏಲಕ್ಕಿಯನ್ನು 'ನೈಋತ್ಯ ಪರ್ವತಗಳಲ್ಲಿ ಪೆರಿಯಾರ್ ನದಿಯ ದಡದಲ್ಲಿ ಕಂಡುಬರುವ ಹಸಿರು ಮುತ್ತು' ಎಂದು ಉಲ್ಲೇಖಿಸಲಾಗಿದೆ. ಏಲಕ್ಕಿಯನ್ನು ಆಯುರ್ವೇದ ಗ್ರಂಥಗಳಲ್ಲಿ ಮಾತ್ರ ರುಚಿಕರವೆಂದು ಪರಿಗಣಿಸಲಾಗಿಲ್ಲ. ಇದು ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹ ಸಹಕಾರಿಯಾಗಿದೆ. ಇದರ ಬಳಕೆಯಿಂದ ಉಸಿರಾಟದ ತೊಂದರೆ, ಕ್ಷಯ, ಹೊಟ್ಟೆಯಲ್ಲಿ ಕಲ್ಲು, ತುರಿಕೆ ಮತ್ತು ಹೃದಯ ಸಂಬಂಧಿ ಕಾಯಿಲೆಗಳು ನಿವಾರಣೆಯಾಗುತ್ತವೆ.

    MORE
    GALLERIES

  • 57

    Cardamom Benefits: ಏಲಕ್ಕಿ ಅಡುಗೆ ರುಚಿ ಮಾತ್ರ ಹೆಚ್ಚಿಸಲ್ಲ; ಹಲವಾರು ಸಮಸ್ಯೆಗಳಿಗೂ ಇದು ಮದ್ದು

    ಆಯುರ್ವೇದ ಔಷಧಿಗಳ ತಯಾರಿಕೆಯಲ್ಲಿ ಹಸಿರು ಏಲಕ್ಕಿಯನ್ನು ಬಳಸಲಾಗುತ್ತದೆ. ಏಲಕ್ಕಿ ಶ್ವಾಸಕೋಶದಲ್ಲಿ ರಕ್ತ ಪರಿಚಲನೆ ಸುಧಾರಿಸುವ ಮೂಲಕ ಸೋಂಕಿನಿಂದ ರಕ್ಷಿಸುತ್ತದೆ. ಹಸಿರು ಏಲಕ್ಕಿಯಲ್ಲಿ ಫೈಟೊಕೆಮಿಕಲ್ಸ್ ಸಮೃದ್ಧವಾಗಿದೆ. ಹಲ್ಲು ಮತ್ತು ವಸಡು ಸೋಂಕನ್ನು ಗುಣಪಡಿಸುತ್ತದೆ.

    MORE
    GALLERIES

  • 67

    Cardamom Benefits: ಏಲಕ್ಕಿ ಅಡುಗೆ ರುಚಿ ಮಾತ್ರ ಹೆಚ್ಚಿಸಲ್ಲ; ಹಲವಾರು ಸಮಸ್ಯೆಗಳಿಗೂ ಇದು ಮದ್ದು

    ವಾಯು, ಅಜೀರ್ಣ, ಹೊಟ್ಟೆ ನೋವಿನಂತಹ ಸಮಸ್ಯೆಗಳಿಗೂ ಹಸಿರು ಏಲಕ್ಕಿ ತಿನ್ನುವುದು ಪ್ರಯೋಜನಕಾರಿ. ಏಲಕ್ಕಿಯು ಶಕ್ತಿಯುತವಾದ ನಂಜುನಿರೋಧಕ ಮತ್ತು ದುರ್ವಾಸನೆಯ ಬ್ಯಾಕ್ಟೀರಿಯಾವನ್ನು ಕೊಲ್ಲುತ್ತದೆ. ಏಲಕ್ಕಿಯಲ್ಲಿರುವ ಬ್ಯಾಕ್ಟೀರಿಯಾ ನಿವಾರಕ ಗುಣ ಬಾಯಿಯಲ್ಲಿ ದುರ್ವಾಸನೆಗೆ ಕಾರಣವಾಗಿರುವ ಬ್ಯಾಕ್ಟೀರಿಯಾಗಳನ್ನು ಕೊಂದು ಈ ಭಾಗದಲ್ಲಿ ವಾಸನೆಯುಂಟಾಗುವುದನ್ನು ತಡೆಯುತ್ತದೆ.

    MORE
    GALLERIES

  • 77

    Cardamom Benefits: ಏಲಕ್ಕಿ ಅಡುಗೆ ರುಚಿ ಮಾತ್ರ ಹೆಚ್ಚಿಸಲ್ಲ; ಹಲವಾರು ಸಮಸ್ಯೆಗಳಿಗೂ ಇದು ಮದ್ದು

    ಹಲ್ಲುಗಳ ನಡುವೆ ಬ್ಯಾಕ್ಟೀರಿಯಾಗಳು ಆಹಾರಕಣಗಳನ್ನು ಕೊಳೆಸಿ ಈ ಭಾಗವನ್ನು ಆಮ್ಲೀಯವಾಗಿಸಿದ್ದರೆ ಏಲಕ್ಕಿ ಕರಗಿದ ಲಾಲಾರಸ ಈ ಆಮ್ಲೀಯತೆಯನ್ನು ಸಂತುಲಿತಗೊಳಿಸಿ ನಿವಾರಿಸಲು ನೆರವಾಗುತ್ತದೆ. (Disclaimer:ಈ ಲೇಖನವು ಸಾರ್ವಜನಿಕ ನಂಬಿಕೆ ಮತ್ತು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ . ನ್ಯೂಸ್ 18 ಇದಕ್ಕೆ ಜವಾಬ್ದಾರಿಯಲ್ಲ)

    MORE
    GALLERIES