Makeup: ಸರಳವಾಗಿ ಸುಂದರವಾಗಿ ಕಾಣಲು ಮೇಕಪ್ ಮಾಡಿಕೊಳ್ಳುವ ಸುಲಭದ ವಿಧಾನಗಳು ನಿಮಗಾಗಿ
News18 Kannada | November 30, 2020, 7:46 PM IST
1/ 6
ಇಗಂತೂ ಮೇಕಪ್ ಅನ್ನೋದು ಮಹಿಳೆಯರ ಜೀವನದ ಒಂದು ಭಾಗವೇ ಆಗಿ ಹೋಗಿದೆ. ಹಾಗೆಮದು ನಿತ್ಯ ಭಾರಿ ಮೇಕಪ್ ಮಾಡಿಕೊಳ್ಳುವುದರಿಂದ ಯಾವಾಗಲು ಸುಂದರವಾಗಿ ಕಾಣಲು ಸಾಧ್ಯವಿಲ್ಲ. ಅದಕ್ಕಾಗಿಯೇ ಮನೆಯಲ್ಲೇ ಸರಳವಾಗಿ ಮಾಡಿಕೊಳ್ಳುವ ನ್ಯೂಡ್ ಮೇಕಪ್ ಬಗ್ಗೆ ಈಗ ಮಾಹಿತಿ ನೀಡಲಿದ್ದೇವೆ.
2/ 6
ಮೇಕಪ್ ಮಾಡಿಕೊಳ್ಳುವಾಗ ಸದಾ ಪ್ರೈಮರ್ ಬಳಕೆಯಿಂದಲೇ ಆರಂಭ ಮಾಡಬೇಕು.
3/ 6
ನಿಮ್ಮ ತ್ವಚೆಯ ಬಣ್ಣಕ್ಕೆ ತಕ್ಕಂತೆ ಪ್ರೈಮರ್ ಶೇಡ್ಗಳ ಆಯ್ಕೆ ಬಹಳ ಮುಖ್ಯ. ಶ್ವೇತ ವರ್ಣದವರು ಪೀಚ್, ಗೋಧಿ ಬಣ್ಣದವರು ಗುಲಾಬಿ ಬಣ್ಣದ ಶೇಡ್ ಆಯ್ಕೆ ಮಾಡಿಕೊಳ್ಳಬಹುದು. ಆಕರ್ಷಕ ಬಣ್ಣಕ್ಕಾಗಿ ಕ್ಯಾರಮೆಲ್ ಶೇಡ್ ಅನ್ನು ಬಳಸಿದರೆ ಉತ್ತಮ ಫಲಿತಾಂಶ ಕಾಣಬಹುದು.
4/ 6
ನಿಮ್ಮ ತ್ವಚೆಯ ಬಣ್ಣಕ್ಕೆ ತಕ್ಕಂತೆ ಫೌಂಡೇಷನ್ ಶೇಡ್ಗಳ ಆಯ್ಕೆ ಬಹಳ ಮುಖ್ಯ. ಆದಷ್ಟು ನಿಮ್ಮ ತ್ವಚೆಯ ಬಣ್ಣಕ್ಕಿಂತ ತಿಳಿಯಾದ ಶೇಡ್ ಅನ್ನು ಬಳಸುವುದು ಉತ್ತಮ ಆಯ್ಕೆ. ಇದನ್ನು ಹಣೆ, ಕೆನ್ನೆ, ಮೂಗು ಹಾಗೂ ಕುತ್ತಿಗೆಗೆ ಹಚ್ಚಿಕೊಳ್ಳಬೇಕು.
5/ 6
ಕಣ್ಣುಬ್ಬುಗಳ ಅಂದಕ್ಕೆ ಮತ್ತಷ್ಟು ಸೌಂದರ್ಯವನ್ನು ತುಂಬಲು ಐಬ್ರೊ ಪೆನ್ಸಿಲ್ ಬದಲಾಗಿ ಐಬ್ರೊ ಜೆಲ್ ಬಳಸಿ.
6/ 6
ತುಟಿಗಳ ಅಂದಕ್ಕೆ ಮೆಟ್ಯಾಲಿಕ್ ಅಥವಾ ಗ್ಲಾಸ್ ಲಿಪ್ಸ್ಟಿಕ್ ಅನ್ನು ಬಳಸಿ