ನೋವನ್ನು ವ್ಯಕ್ತಪಡಿಸಿ- ಕೆಲವರು ತಮ್ಮ ನೋವನ್ನು ಮನಸ್ಸಿನ ಒಳಗೆ ಇಟ್ಟುಕೊಳ್ಳುತ್ತಾರೆ. ಎಲ್ಲರ ಮುಂದೆ ನಗುನಗುತ್ತಾ ಇರುವಂತೆ ನಟಿಸಿ. ತಾವು ಚೆನ್ನಾಗಿದ್ದೇವೆ ಎಂಬ ಭ್ರಮೆಯನ್ನು ಮೂಡಿಸುತ್ತಾರೆ. ಕೆಲವರು ಒಳಗೆ ಎಷ್ಟೇ ಭಾವುಕರಾಗಿದ್ದರೂ ಅದನ್ನು ಹೊರಗೆ ತೋರಿಸಿಕೊಳ್ಳುವುದಿಲ್ಲ. ಆದರೆ ಪ್ರಾಮಾಣಿಕವಾಗಿ ಹಾಗಾಗಬಾರದು. ನೀವು ನೋವಿನಲ್ಲಿದ್ದಾಗ ಅಳಲು ಬಯಸಿದರೆ, ಅಳಬೇಕು. ಆದರೆ ಒಳಗೊಳಗೇ ಕುಗ್ಗಿ ಹೋಗಿರುವದರಿಂದ ನನಗೆ ಸಂತೋಷವಿಲ್ಲ ಎಂಬ ಭಾವನೆ, ನಾವು ನಗುತ್ತಿರುವಾಗಲೆಲ್ಲ ಅನಿಸುತ್ತದೆ. ಆದ್ದರಿಂದಲೇ ಭಾವನೆಗಳನ್ನು ಹತ್ತಿಕ್ಕಬಾರದು ಎನ್ನುತ್ತಾರೆ ಮನೋವಿಜ್ಞಾನಿಗಳು.
ಒಂಟಿಯಾಗಿರುವುದರಿಂದ ಮನಸ್ಸಿನ ನೋವು ದೂರವಾಗುತ್ತದೆ ಎಂದು ಹಲವಾರು ಜನರು ನಂಬುತ್ತಾರೆ. ಒತ್ತಡವನ್ನು ನಿಭಾಯಿಸಬಹುದು ಎಂದು ಅವರು ಭಾವಿಸುತ್ತಾರೆ. ಆದಾಗ್ಯೂ, ಈ ಪ್ರಕ್ರಿಯೆಯಲ್ಲಿ ಕೆಲವರು ಏಕಾಂಗಿಯಾಗಿ ಬದುಕಲು ಒಗ್ಗಿಕೊಳ್ಳುತ್ತಾರೆ. ತಮ್ಮ ಸಾಮಾಜಿಕ ಜಾಲತಾಣಗಳಿಂದ ದೂರ ಬರುತ್ತಾರೆ. ಆದರೆ ನೀವು ಇನ್ನೊಬ್ಬರಲ್ಲಿ ನೋವು ಹೇಳಿಕೊಂಡರೆ ಸೂಕ್ತ. ಇಲ್ಲದಿದ್ದಲ್ಲೆ ಧ್ಯಾನ ಮಾಡುವುದು ಸೂಕ್ತ ಎಂದು ತಜ್ಞರು ಹೇಳುತ್ತಾರೆ.
ಪ್ರೀತಿಪಾತ್ರರು ಅಗಲಿದಾಗ ಅವರು ಮಾಡಿದ ಕೆಲಸಗಳು ಮತ್ತೆ ಮತ್ತೆ ನೆನಪಿನ ರೂಪದಲ್ಲಿ ನೆನಪಿಗೆ ಬಂದು ನೋವನ್ನು ಇಮ್ಮಡಿಗೊಳಿಸುತ್ತವೆ. ಆದ್ದರಿಂದ ಜೀವನದಲ್ಲಿ ಕೆಲವು ಹೊಸ ಆಲೋಚನೆಗಳನ್ನು ಪ್ರಾರಂಭಿಸಿ. ಕೆಲವು ದಿನಗಳವರೆಗೆ ಸಾಮಾನ್ಯ ದಿನಚರಿಯನ್ನು ಬದಿಗಿರಿಸಿ ಮತ್ತು ಹೊಸ ಕೆಲಸಗಳನ್ನು ಮಾಡಿ. ಬೇಡ ಎಂದು ತೊರೆದವರನ್ನು ಮರೆಯಲು ಪ್ರಯತ್ನ ಮಾಡಿ. ಎಂಜಾಯ್ ಮಾಡಿ. ಚೆನ್ನಾಗಿ ಆಹಾರವನ್ನು ಸೇವನೆ ಮಾಡಿ.