Morning Health: ಖಾಲಿ ಹೊಟ್ಟೆಯಲ್ಲಿ ನಿಂಬೆ ಸಿಪ್ಪೆ ತಿಂದರೆ ಹತ್ತಾರು ಸಮಸ್ಯೆಗೆ ಪರಿಹಾರ ಸಿಗುತ್ತೆ
Lemon Peel Benefits: ಯಾವುದೇ ಸಮಯದಲ್ಲಿ ನಿಂಬೆ ಜ್ಯೂಸ್ ಕುಡಿಯುವುದು ಆರಾಮದಾಯಕ ಅನಿಸುತ್ತದೆ. ಇದರಲ್ಲಿ ಆ್ಯಂಟಿ ಆಕ್ಸಿಡೆಂಟ್, ವಿಟಮಿನ್ ಸಿ, ಎ, ಪೊಟ್ಯಾಶಿಯಂ, ಕ್ಯಾಲ್ಸಿಯಂ ನಮ್ಮ ಆರೋಗ್ಯವನ್ನು ಕಾಪಾಡಲು ಸಹಾಯ ಮಾಡುತ್ತದೆ. ನಿಂಬೆಯ ಪ್ರಯೋಜನಗಳನ್ನು ನಾವು ಹೆಚ್ಚಾಗಿ ಹೇಳಬೇಕಿಲ್ಲ. ಆದರೆ ಅದರ ಸಿಪ್ಪೆಯ ಬಗ್ಗೆ ಹೆಚ್ಚಿನ ಜನರಿಗೆ ಗೊತ್ತಿಲ್ಲ. ಈ ನಿಂಬೆ ಸಿಪ್ಪೆಯ ಪ್ರಯೋಜನಗಳ ಬಗ್ಗೆ ಮಾಹಿತಿ ಇಲ್ಲಿದೆ.
ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ನಿಂಬೆ ರಸದಲ್ಲಿರುವ ಖನಿಜಾಂಶಗಳಿಂದಾಗಿ ಜೀರ್ಣಕ್ರಿಯೆಯು ಉತ್ತಮವಾಗಿರುತ್ತದೆ. ಇದರಿಂದ ತಿಂದ ಆಹಾರ ಚೆನ್ನಾಗಿ ಜೀರ್ಣವಾಗುತ್ತದೆ. ಈ ನಿಂಬೆಸಿಪ್ಪೆಯನ್ನು ನೀರಿನಲ್ಲಿ ಕುದಿಸಿ ಕುಡಿಯಿರಿ. ಅದಕ್ಕೆ ಉಪ್ಪು ಸೇರಿಸುವುದು ಉತ್ತಮ.
2/ 9
ತೂಕ ಇಳಿಕೆಗೆ ಪ್ರಯೋಜನಕಾರಿ ನಿಂಬೆ ಸಿಪ್ಪೆಯಲ್ಲಿ ಪೆಕ್ಟಿನ್ ಎಂಬ ವಸ್ತುವಿದೆ. ಇದರಿಂದಾಗಿ ದೇಹದಲ್ಲಿ ಹೆಚ್ಚುವರಿ ಕೊಬ್ಬು ಸಂಗ್ರಹವಾಗುವುದಿಲ್ಲ. ನೀವು ತೂಕ ಇಳಿಸಿಕೊಳ್ಳಲು ಬಯಸಿದರೆ, ನಿಂಬೆ ಸಿಪ್ಪೆಯನ್ನು ಬಳಸುವುದು ಸಹಾಯ ಮಾಡುತ್ತದೆ.
3/ 9
ಆಕ್ಸಿಡೇಟಿವ್ ಒತ್ತಡವನ್ನು ನಿವಾರಿಸುತ್ತದೆ ನಿಂಬೆ ಸಿಪ್ಪೆಯಲ್ಲಿ ಫ್ಲೇವನಾಯ್ಡ್ಗಳು ಸಮೃದ್ಧವಾಗಿವೆ. ಇದು ಆಕ್ಸಿಡೇಟಿವ್ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ನಿಂಬೆಸಿಪ್ಪೆಯನ್ನು ಫ್ರೈ ಮಾಡಿಕೊಂಡು ಅಥವಾ ಉಪ್ಪಿನ ನೀರಿನಲ್ಲಿ ನೆನೆಸಿ ತಿನ್ನುವುದು ಪ್ರಯೋಜನ ನೀಡುತ್ತದೆ.
4/ 9
ಕೊಲೆಸ್ಟ್ರಾಲ್ ನಿಯಂತ್ರಣ ದೇಹದಲ್ಲಿ ಹೆಚ್ಚಿನ ಪ್ರಮಾಣದ ಕೊಲೆಸ್ಟ್ರಾಲ್ ಹೃದಯದ ಆರೋಗ್ಯಕ್ಕೆ ಅಪಾಯಕಾರಿ. ನಿಂಬೆಯಲ್ಲಿರುವ ಪಾಲಿಫಿನಾಲ್ಗಳು ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ ಮತ್ತು ನಮ್ಮ ಹೃದಯವನ್ನು ಆರೋಗ್ಯವಾಗಿರಿಸುತ್ತದೆ.
5/ 9
ಹೃದಯದ ಆರೋಗ್ಯ ಕಾಪಾಡುತ್ತದೆ ನಿಂಬೆ ಸಿಪ್ಪೆಯಲ್ಲಿ ಪೊಟ್ಯಾಸಿಯಮ್ ಇರುತ್ತದೆ. ಇದು ಹೃದಯಾಘಾತದ ಅಪಾಯವನ್ನು ಕಡಿಮೆ ಮಾಡುತ್ತದೆ. ಹಾಗಾಗಿ ನಮ್ಮ ದೇಹದಲ್ಲಿ ರಕ್ತದ ಹರಿವು ನಿಯಂತ್ರಣದಲ್ಲಿ ಇಡುತ್ತದೆ. ಮಧುಮೇಹವನ್ನು ನಿಯಂತ್ರಿಸಲು ನಿಂಬೆ ಸಿಪ್ಪೆ ಉಪಯುಕ್ತ.
6/ 9
ಚರ್ಮಕ್ಕೆ ಪ್ರಯೋಜನಕಾರಿ ನಿಂಬೆ ಸಿಪ್ಪೆಯು ಆ್ಯಂಟಿ ಆಕ್ಸಿಡೆಂಟ್ಗಳನ್ನು ಹೊಂದಿರುತ್ತದೆ. ಇದು ನಿಮ್ಮ ಚರ್ಮವನ್ನು ನಿರ್ವಿಷಗೊಳಿಸುತ್ತದೆ. ಈ ಕಾರಣದಿಂದಾಗಿ, ಮುಖದ ಸುಕ್ಕುಗಳು, ಮೊಡವೆಗಳು, ಪಿಗ್ಮೆಂಟೇಶನ್ ಅಥವಾ ಕಲೆಗಳನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ.
7/ 9
ಹಲ್ಲು ಮತ್ತು ಒಸಡುಗಳಿಗೆ ನಿಂಬೆ ಸಿಪ್ಪೆಯಲ್ಲಿ ಸಿಟ್ರಿಕ್ ಆಮ್ಲ ಸಮೃದ್ಧವಾಗಿದೆ. ವಿಟಮಿನ್ ಸಿ ಕೊರತೆಯಿಂದ ಉಂಟಾಗುವ ಹಾನಿಯನ್ನು ತಡೆಗಟ್ಟಲು, ನಿಂಬೆ ಸಿಪ್ಪೆಯನ್ನು ಬಳಸಿ. ಇದರಿಂದ ಹಲ್ಲಿನ ಜೊತೆಗೆ ವಸಡು ಸಂಬಂಧಿ ಕಾಯಿಲೆಗಳೂ ಕಡಿಮೆಯಾಗುತ್ತವೆ.
8/ 9
ಮೂಳೆಗಳು ಬಲಗೊಳ್ಳುತ್ತವೆ ನಿಂಬೆ ಸಿಪ್ಪೆಯಲ್ಲಿ ಕ್ಯಾಲ್ಸಿಯಂ ಮತ್ತು ವಿಟಮಿನ್ ಸಿ ಸಮೃದ್ಧವಾಗಿದೆ. ಇದು ನಮ್ಮ ಮೂಳೆಗಳು ಮತ್ತು ಹಲ್ಲುಗಳನ್ನು ಬಲಗೊಳಿಸುತ್ತದೆ. ಇದಲ್ಲದೆ, ಮೂಳೆ ಸಂಬಂಧಿ ಕಾಯಿಲೆಗಳಾದ ಆಸ್ಟಿಯೊಪೊರೋಸಿಸ್ ಮತ್ತು ಪಾಲಿಆರ್ಥ್ರೈಟಿಸ್ ಅನ್ನು ತಡೆಯುತ್ತದೆ.
9/ 9
ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ನಿಂಬೆ ಸಿಪ್ಪೆಯು ನಿಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದರಲ್ಲಿರುವ ಆ್ಯಂಟಿ ಆಕ್ಸಿಡೆಂಟ್ ಗಳು ಚರ್ಮದ ಕ್ಯಾನ್ಸರ್ ಬರದಂತೆ ತಡೆಯುತ್ತದೆ.