Legs Tingling Problem: ನಿಮ್ಮ ಕೈ, ಕಾಲುಗಳು ಜುಮ್ಮೆನ್ನುತ್ತಾ? ಹಾಗಾದ್ರೆ ಈ ಸಮಸ್ಯೆಗೆ ಮುಖ್ಯ ಕಾರಣಗಳಿವು!

ಪಾದಗಳು ಜುಮ್ಮೆನ್ನುವುದು, ಪಾದಗಳ ಮರಗಟ್ಟುವಿಕೆ ಸಮಸ್ಯೆಯು ಮಧುಮೇಹ ಹೊರತುಪಡಿಸಿ ಅನೇಕ ಕಾರಣಗಳಿಂದಲೂ ಸಂಭವಿಸುತ್ತದೆ. ಅಂತಾರೆ ಆರೋಗ್ಯ ತರಬೇತುದಾರ ಮತ್ತು ನರವಿಜ್ಞಾನಿ ಡಾ.ಪ್ರಿಯಾಂಕಾ ಶೆರಾವತ್. ಪಾದಗಳಲ್ಲಿ ಈ ರೀತಿಯ ಸಮಸ್ಯೆಯನ್ನು ಪ್ಯಾರೆಸ್ಟೇಷಿಯಾ ಎಂದು ಕರೆಯುತ್ತಾರೆ. ನರಗಳಿಗೆ ಹಾನಿಯಾದಾಗ ಈ ಸಮಸ್ಯೆ ಉಂಟಾಗುತ್ತದೆ.

First published:

  • 18

    Legs Tingling Problem: ನಿಮ್ಮ ಕೈ, ಕಾಲುಗಳು ಜುಮ್ಮೆನ್ನುತ್ತಾ? ಹಾಗಾದ್ರೆ ಈ ಸಮಸ್ಯೆಗೆ ಮುಖ್ಯ ಕಾರಣಗಳಿವು!

    ಪಾದಗಳು ಜುಮ್ಮೆನ್ನುವುದು, ಪಾದಗಳ ಮರಗಟ್ಟುವಿಕೆ ಸಮಸ್ಯೆಯು ಕೆಲವೊಮ್ಮೆ ಸಾಮಾನ್ಯವಾಗಿರುತ್ತದೆ. ಆದರೆ ನಿರಂತರವಾಗಿ ಪಾದಗಳಲ್ಲಿ ಜುಮ್ಮೆನಿಸುವಿಕೆ ಹಾಗೂ ಮರಗಟ್ಟುವಿಕೆ ಸಮಸ್ಯೆಯು ಬೇರೆ ಸಮಸ್ಯೆಯಿಂದಲೂ ಉಂಟಾಗಿರಬಹುದು. ಅದಾಗ್ಯೂ ಇದು ಸಾಮಾನ್ಯವಾಗಿ ಮಧುಮೇಹ ರೋಗಲಕ್ಷಣವನ್ನೂ ತೋರಿಸುತ್ತದೆ ಎನ್ನಲಾಗುತ್ತದೆ.

    MORE
    GALLERIES

  • 28

    Legs Tingling Problem: ನಿಮ್ಮ ಕೈ, ಕಾಲುಗಳು ಜುಮ್ಮೆನ್ನುತ್ತಾ? ಹಾಗಾದ್ರೆ ಈ ಸಮಸ್ಯೆಗೆ ಮುಖ್ಯ ಕಾರಣಗಳಿವು!

    ಪಾದಗಳು ಜುಮ್ಮೆನ್ನುವುದು, ಪಾದಗಳ ಮರಗಟ್ಟುವಿಕೆ ಸಮಸ್ಯೆಯು ಕೇವಲ ಮಧುಮೇಹದಿಂದ ಮಾತ್ರ ಉಂಟಾಗುವುದಿಲ್ಲ. ಇದು ಇತರೆ ಕಾರಣಗಳಿಂದಲೂ ಉಂಟಾಗುತ್ತದೆ. ಇದನ್ನು ಸಾಮಾನ್ಯ ಭಾಷೆಯಲ್ಲಿ ಇರುವೆ ಓಡಾಡುತ್ತದೆ ಎಂದು ಹೇಳಲಾಗುತ್ತದೆ. ಅಂದರೆ ಪಾದಗಳಲ್ಲಿ ಸೆನ್ಸೇಷನ್ ಇರುತ್ತದೆ.

    MORE
    GALLERIES

  • 38

    Legs Tingling Problem: ನಿಮ್ಮ ಕೈ, ಕಾಲುಗಳು ಜುಮ್ಮೆನ್ನುತ್ತಾ? ಹಾಗಾದ್ರೆ ಈ ಸಮಸ್ಯೆಗೆ ಮುಖ್ಯ ಕಾರಣಗಳಿವು!

    ಪಾದಗಳು ಜುಮ್ಮೆನ್ನುವುದು, ಪಾದಗಳ ಮರಗಟ್ಟುವಿಕೆ ಸಮಸ್ಯೆಯು ಮಧುಮೇಹ ಹೊರತುಪಡಿಸಿ ಅನೇಕ ಕಾರಣಗಳಿಂದಲೂ ಸಂಭವಿಸುತ್ತದೆ. ಅಂತಾರೆ ಆರೋಗ್ಯ ತರಬೇತುದಾರ ಮತ್ತು ನರವಿಜ್ಞಾನಿ ಡಾ.ಪ್ರಿಯಾಂಕಾ ಶೆರಾವತ್. ಪಾದಗಳಲ್ಲಿ ಈ ರೀತಿಯ ಸಮಸ್ಯೆಯನ್ನು ಪ್ಯಾರೆಸ್ಟೇಷಿಯಾ ಎಂದು ಕರೆಯುತ್ತಾರೆ. ನರಗಳಿಗೆ ಹಾನಿಯಾದಾಗ ಈ ಸಮಸ್ಯೆ ಉಂಟಾಗುತ್ತದೆ.

    MORE
    GALLERIES

  • 48

    Legs Tingling Problem: ನಿಮ್ಮ ಕೈ, ಕಾಲುಗಳು ಜುಮ್ಮೆನ್ನುತ್ತಾ? ಹಾಗಾದ್ರೆ ಈ ಸಮಸ್ಯೆಗೆ ಮುಖ್ಯ ಕಾರಣಗಳಿವು!

    ಮಧುಮೇಹದ ಜೊತೆಗೆ ಈ ಸಮಸ್ಯೆಯು ಮೂತ್ರಪಿಂಡದ ಕಾಯಿಲೆಯ ಲಕ್ಷಣವೂ ಆಗಿರುವ ಸಾಧ್ಯತೆ ಹೆಚ್ಚು. ಪಾದಗಳು ಜುಮ್ಮೆನ್ನುವುದು, ಪಾದಗಳ ಮರಗಟ್ಟುವಿಕೆ ಸಮಸ್ಯೆಗೆ ಮುಖ್ಯ ಕಾರಣಗಳು ಯಾವವು ಎಂಬುದನ್ನು ನೀವು ತಿಳಿದಿರಬೇಕು. ಇಲ್ಲದಿದ್ದರೆ ಸಮಸ್ಯೆ ಹೆಚ್ಚುತ್ತಾ ಹೋಗುತ್ತದೆ. ಇದು ನರಗಳಿಗೆ ಹಾನಿ ಮಾಡುತ್ತದೆ.

    MORE
    GALLERIES

  • 58

    Legs Tingling Problem: ನಿಮ್ಮ ಕೈ, ಕಾಲುಗಳು ಜುಮ್ಮೆನ್ನುತ್ತಾ? ಹಾಗಾದ್ರೆ ಈ ಸಮಸ್ಯೆಗೆ ಮುಖ್ಯ ಕಾರಣಗಳಿವು!

    ಮೂತ್ರಪಿಂಡ ವೈಫಲ್ಯ. ಈ ಕಾಯಿಲೆಯಲ್ಲಿ ಕಿಡ್ನಿ ಕಾರ್ಯವು ಕಡಿಮೆಯಾಗುತ್ತಾ ಹೋಗುತ್ತದೆ. ರಕ್ತದಲ್ಲಿ ತ್ಯಾಜ್ಯ ಉತ್ಪನ್ನಗಳು ಹೆಚ್ಚಾಗುತ್ತವೆ. ಇದು ಸ್ನಾಯು ಮತ್ತು ನರಗಳ ಹಾನಿ ಉಂಟು ಮಾಡುತ್ತದೆ. ಇದು ಕೈಕಾಲುಗಳಲ್ಲಿ ಮರಗಟ್ಟುವಿಕೆ ಮತ್ತು ಜುಮ್ಮೆನಿಸುವಿಕೆ ಉಂಟು ಮಾಡುತ್ತದೆ.

    MORE
    GALLERIES

  • 68

    Legs Tingling Problem: ನಿಮ್ಮ ಕೈ, ಕಾಲುಗಳು ಜುಮ್ಮೆನ್ನುತ್ತಾ? ಹಾಗಾದ್ರೆ ಈ ಸಮಸ್ಯೆಗೆ ಮುಖ್ಯ ಕಾರಣಗಳಿವು!

    ಮಧುಮೇಹ ಸಮಸ್ಯೆ. ಈ ಸಮಸ್ಯೆಯನ್ನು ಡಯಾಬಿಟಿಕ್ ನ್ಯೂರೋಪತಿ ಎಂದು ಕರೆಯುತ್ತಾರೆ. ಅಧಿಕ ಸಕ್ಕರೆಯ ರೋಗವು ನರಗಳನ್ನು ದುರ್ಬಲಗೊಳಿಸುತ್ತದೆ. ಈ ಸಮಸ್ಯೆಯು ವಿಶೇಷವಾಗಿ ಕೈ ಮತ್ತು ಪಾದಗಳ ಮೇಲೆ ಪರಿಣಾಮ ಬೀರುತ್ತದೆ. ಮತ್ತು ರೋಗಿಯು ಸತತವಾಗಿ ಕಾಲುಗಳಲ್ಲಿ ಸಮಸ್ಯೆ ಎದುರಿಸುತ್ತಾನೆ.

    MORE
    GALLERIES

  • 78

    Legs Tingling Problem: ನಿಮ್ಮ ಕೈ, ಕಾಲುಗಳು ಜುಮ್ಮೆನ್ನುತ್ತಾ? ಹಾಗಾದ್ರೆ ಈ ಸಮಸ್ಯೆಗೆ ಮುಖ್ಯ ಕಾರಣಗಳಿವು!

    ವಿಟಮಿನ್ ಬಿ 12 ಕೊರತೆಯು ಪಾದಗಳು ಜುಮ್ಮೆನ್ನುವುದು, ಪಾದಗಳ ಮರಗಟ್ಟುವಿಕೆ ಸಮಸ್ಯೆಗೆ ಕಾರಣವಾಗಿದೆ. ನರಗಳ ಬಲಕ್ಕೆ ವಿಟಮಿನ್ ಬಿ 12 ಅವಶ್ಯಕ. ಈ ಪೋಷಕಾಂಶದ ಕೊರತೆಯು ಪ್ಯಾರೆಸ್ಟೇಷಿಯಾಕ್ಕೆ ಕಾರಣವಾಗಬಹುದು. ಇದರಲ್ಲೂ ನರಗಳ ಜುಮ್ಮೆನ್ನುವುದು, ಮರಗಟ್ಟುವಿಕೆ ಉಂಟಾಗಿ ದಿನನಿತ್ಯದ ಕೆಲಸಕ್ಕೆ ತೊಂದರೆಯಾಗುತ್ತದೆ.

    MORE
    GALLERIES

  • 88

    Legs Tingling Problem: ನಿಮ್ಮ ಕೈ, ಕಾಲುಗಳು ಜುಮ್ಮೆನ್ನುತ್ತಾ? ಹಾಗಾದ್ರೆ ಈ ಸಮಸ್ಯೆಗೆ ಮುಖ್ಯ ಕಾರಣಗಳಿವು!

    ಹೈಪೋಥೈರಾಯ್ಡಿಸಮ್. ಥೈರಾಯ್ಡ್ ಗ್ರಂಥಿಯು ಸಾಕಷ್ಟು ಹಾರ್ಮೋನುಗಳನ್ನು ಉತ್ಪಾದಿಸದಿದ್ದರೆ ಇದು ಕಾಲುಗಳಲ್ಲಿ ದ್ರವದ ಧಾರಣ ಉಂಟು ಮಾಡುತ್ತದೆ. ಇದು ಸಮಸ್ಯೆಗೆ ಕಾರಣವಾಗುತ್ತದೆ. ಆಲ್ಕೋಹಾಲ್ ಸೇವನೆಯು ಯಕೃತ್ತು ಮತ್ತು ಮೂತ್ರಪಿಂಡಗಳು ಮತ್ತು ನರಗಳಿಗೆ ಹಾನಿ ಮಾಡುತ್ತದೆ. ನರಗಳ ಕಾರ್ಯ ನಿರ್ವಹಣೆ ಕಡಿಮೆಯಾಗಿ ಪಾದದಲ್ಲಿ ಸೂಜಿ ಚುಚ್ಚಿದಂತೆ ಆಗುತ್ತದೆ.

    MORE
    GALLERIES