ಮೊದಲ ನೋಟದಲ್ಲಿಯೇ ಒಬ್ಬ ವ್ಯಕ್ತಿ ನಿಮ್ಮನ್ನು ಇಷ್ಟಪಡುತ್ತಾರೆ ಎಂದರೆ ಕೆಲವೊಮ್ಮೆ ಆ ಪ್ರೀತಿ ನಿಜವಾದದ್ದಲ್ಲ ಎಂಬುವುದನ್ನು ಮೊದಲು ಅರ್ಥಮಾಡಿಕೊಳ್ಳಿ. ಇದು ನಿಮ್ಮ ಅನೇಕ ರೀತಿ ಪರಿಣಾಮ ಬೀರಬಹುದು. ನೀವು ಯಾವುದೇ ತಪ್ಪು ಮಾಡದಿದ್ದರೂ, ನೀವು ತಪ್ಪು ಮಾಡಿದ್ದೀರಾ ಎಂದು ಒಪ್ಪಿಕೊಳ್ಳಬೇಕಾಗುತ್ತದೆ. ಪುರುಷರ ಆಲೋಚನೆಗಳು ಹಲವು ರೀತಿ ಇದೆ. ಈ ರೀತಿಯ ಪುರುಷರು ತುಂಬಾ ಡೇಂಜರ್ ಆಗಿರುತ್ತಾರೆ. ಅವರನ್ನು ನೋಡಿದ ನಂತರ ನೀವು ಅವರಿಂದ ದೂರ ಸರಿಯಿರಿ, ಪ್ರೀತಿಯಲ್ಲಿ ಬೀಳಬೇಡಿ.
ಮೋಸ್ಟ್ ಪರ್ಫೆಕ್ಟ್, ಮೋಸ್ಟ್ ಎಲಿಜಿಬಲ್ ಸಿಂಗಲ್: ಕೆಲವರನ್ನು ನೀವು ನೋಡಿದಾಗ ಅವರು ಓದುವುದು, ಕೆಲಸ ಮಾಡುವುದು, ಮಾತನಾಡುವುದು, ಜೀವನಶೈಲಿ ಎಲ್ಲವೂ ಪರಿಪೂರ್ಣವಾಗಿರುತ್ತದೆ. ಅವರು ಇನ್ನೂ ಏಕೆ ಒಂಟಿಯಾಗಿದ್ದಾರೆ ಎಂದು ನೀವು ಯೋಚಿಸಬಹುದು. ಆ ವ್ಯಕ್ತಿ ನಿಮ್ಮನ್ನು ಈ ರೀತಿ ಯೋಚಿಸುವಂತೆ ಮಾಡಬಹುದು. ಆಕರ್ಷಕವಾಗಿರುವ, ಎಲ್ಲಾ ರೀತಿಯ ಕ್ವಾಲಿಟಿಸ್ ಇರುವ ವ್ಯಕ್ತಿ ಮಹಿಳೆಯನ್ನು ಏಕೆ ಪ್ರೀತಿಸಿಲ್ಲ ಎಂದು ಯೋಚಿಸಿ. ಆರಂಭದಲ್ಲಿ ಖುಷಿಯಾಗಿದ್ದ ಸಂಬಂಧವು ಗಂಭೀರವಾದದ್ದಕ್ಕೆ ನಂತರ ಪ್ರೀತಿ ಎಂಬ ವಿಚಾರದಿಂದ ದೂರ ಉಳಿದಿರುತ್ತಾರೆ.
ತಕ್ಷಣ ಮದುವೆಯಾಗಲು ಸಿದ್ಧವಾಗಿರುವ ವ್ಯಕ್ತಿ: ಯಾವುದೇ ವ್ಯಕ್ತಿ ತನಗೆ ಮ್ಯಾಚ್ ಆಗುವಂತಹ ಹುಡುಗಿ ಸಿಕ್ಕರೆ ಅವಳ ಬಗ್ಗೆ ಏನನ್ನೂ ತಿಳಿಯದೇ ತಕ್ಷಣವೇ ಮದುವೆಯಾಗಲು ನಿರ್ಧರಿಸುತ್ತಾನೆ, ಸಂಬಂಧದಲ್ಲಿನ ಭಾವನೆಗಳು ಮತ್ತು ಬದ್ಧತೆಯ ಬಗ್ಗೆ ಕಾಳಜಿ ವಹಿಸುವುದಿಲ್ಲ. ಮದುವೆ ಎಂದರೆ ತುಂಬಾ ಸರಳ. ಇದನ್ನು ಯಾವುದೇ ಸಮಯದಲ್ಲಿ ಎಲ್ಲಿಯಾದರೂ ಸುಲಭವಾಗಿ ಮಾಡಿಕೊಳ್ಳಬಹುದು ಎಂದು ಹಲವರು ಭಾವಿಸುತ್ತಾರೆ. ಆದರೆ ಪ್ರೀತಿ, ಹನಿಮೂನ್ ಮುಗಿದ ಮೇಲೆ ನಿಮ್ಮ ಮೇಲಿನ ಆಕರ್ಷಣೆ ಸ್ವಲ್ಪಮಟ್ಟಿಗೆ ಕಡಿಮೆಯಾಗುತ್ತದೆ. ಇನ್ನೊಬ್ಬ ಹುಡುಗಿಯತ್ತ ಅವರ ಗಮನ ಸೆಳೆಯಲು ಆರಂಭಿಸುತ್ತದೆ. ಬಳಿಕ ನಿಮ್ಮನ್ನು ಮರೆತುಬಿಡುತ್ತಾರೆ.
ನಿಮ್ಮ ಹಣದಿಂದ ಅದ್ದೂರಿಯಾಗಿ ಬದುಕುವ ಜನರು: ಕೆಲವರು ಸಂಬಂಧದ ಆರಾಮ ವಲಯವನ್ನು ತಲುಪಿದ ನಂತರ, ಅವರು ನಿಮ್ಮ ಹಣ ಮತ್ತು ನಿಮ್ಮ ಸೌಕರ್ಯಗಳೊಂದಿಗೆ ಸಂತೋಷದಿಂದ ಬದುಕಲು ಪ್ರಾರಂಭಿಸುತ್ತಾರೆ. ಆದರೆ, ಈ ರೀತಿಯ ಸಂಬಂಧದಿಂದ ವ್ಯಕ್ತಿ ನಿಮ್ಮನ್ನು ಮೋಸ ಮಾಡುತ್ತಿದ್ದಾನೆ ಎನ್ನಲಾಗುತ್ತದೆ. ಕೆಲವರು ಬ್ರ್ಯಾಂಡೆಂಡ್ ಬಟ್ಟೆಗಳನ್ನು ಧರಿಸಿ ತಮ್ಮ ಡ್ರೆಸಿಂಗ್ ಸೆನ್ಸ್ ಮೂಲಕವೇ ಮಹಿಳೆಯರನ್ನು ಆಕರ್ಷಿಸುತ್ತಾರೆ. ಆದರೆ ಅಂಥವರ ಬಳಿ ನಿಜವಾಗಿಯೂ ಹಣವೇ ಇರುವುದಿಲ್ಲ.
ಅಮ್ಮ ಹಾಕಿದ ಗೆರೆ ದಾಟದವರು: ಕೆಲ ವ್ಯಜ್ತಿಗಳಿಗೆ ತಾಯಿಯ ಬಗ್ಗೆ ಪ್ರೀತಿ ಮತ್ತು ಗೌರವ ಹೆಚ್ಚಾಗಿರುತ್ತದೆ. ಹಾಗಾಗಿ ಕೆಲ ಗಂಡಸರು ಅಮ್ಮ ಹಾಕಿದ ಗೆರೆಯನ್ನು ದಾಟುವುದಿಲ್ಲ. ಅವರು ಎಲ್ಲದಕ್ಕೂ ತಾಯಿಯನ್ನು ಅವಲಂಬಿಸಿರುತ್ತಾರೆ. ಅವರ ಜೀವನದಲ್ಲಿ ಇನ್ನೊಬ್ಬ ಮಹಿಳೆ ಬಂದರೆ ಆ ಮಹಿಳೆ ಮುಖ್ಯವಾಗಿರುವುದಿಲ್ಲ. ತಾಯಿ ಹೇಳಿದ್ದೇ ಸರಿ, ತಾಯಿಯ ಮಾತನ್ನು ಮೀರಬಾರದು. ಅಮ್ಮನ ಮಾತನ್ನು ಕೇಳಬೇಕು ಎಂದು ಪತ್ನಿಗಿಂತ ಹೆಚ್ಚಿನ ಪ್ರಾಮುಖ್ಯತೆಯನ್ನು ತಾಯಿಗೆ ನೀಡುತ್ತಾರೆ.
ರಿಲೇಶನ್ಶಿಪ್ ಗಂಭೀರವಾಗಿ ಪರಿಗಣಿಸದ ಜನರು: ಎಲ್ಲಾ ವಿಚಾರಗಳಲ್ಲಿಯೂ ಗಂಭೀರವಾಗಿರಬೇಕಾದ ಅಗತ್ಯವಿಲ್ಲ. ಆದರೆ ಪ್ರೀತಿ, ಮದುವೆ, ರಿಲೇಷನ್ಶಿಪ್ನಲ್ಲಿ ಸಮಸ್ಯೆಗಳು ಬಂದಾಗ, ಕೆಲವೊಮ್ಮೆ ನೀವು ಅವುಗಳನ್ನು ಗಂಭೀರವಾಗಿ ಪರಿಗಣಿಸಬೇಕು ಮತ್ತು ಅದಕ್ಕೆ ತಕ್ಕಂತೆ ವರ್ತಿಸಬೇಕು. ಆದರೆ ಕೆಲವು ವ್ತಯಕ್ತಿಗಳು ಯಾವುದನ್ನೂ ಗಂಭೀರವಾಗಿ ಪರಿಗಣಿಸುವುದಿಲ್ಲ. ನಿಮಗೆ ಎಷ್ಟೇ ಸಹಾಯದ ಅಗತ್ಯವಿದ್ದರೂ ನೆರವಾಗುವುದಿಲ್ಲ. ಈ ರೀತಿಯ ಜನರು ಸಾಮಾನ್ಯವಾಗಿ ಡ್ರಿಪ್ ಮತ್ತು ಪಾರ್ಟಿಗಳನ್ನು ಇಷ್ಟಪಡುತ್ತಾರೆ.
ಅವರು ನಿಮ್ಮ ಬಾಲಿಶತೆಯನ್ನು(Childishness) ಹೊರತರುವುದು ಒಳ್ಳೆಯದು. ಆದರೆ ಗಂಭೀರ ಕ್ಷಣದಲ್ಲಿ ನೀವು ಏಕಾಂಗಿಯಾಗಿರುತ್ತೀರಿ. ಏಕೆಂದರೆ ಗಂಭೀರ ಪರಿಸ್ಥಿತಿಯನ್ನು ಹೇಗೆ ಎದುರಿಸಬೇಕೆಂದು ಅವರಿಗೆ ತಿಳಿದಿಲ್ಲ. ( ಹಕ್ಕು ನಿರಾಕರಣೆ : ಈ ಲೇಖನವು ಸಾರ್ವಜನಿಕ ನಂಬಿಕೆ ಮತ್ತು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ . ನ್ಯೂಸ್ 18 ಇದಕ್ಕೆ ಜವಾಬ್ದಾರಿಯಲ್ಲ)