Weight Loss: ಹೊಸ ಸಿನಿಮಾಗಾಗಿ 15 ಕೆಜಿ ತೂಕ ಇಳಿಸಿಕೊಂಡ ನಟ ಸಿಂಬು
Silambarasan: ವೆಂಧು ತಾನಿಂಧಾತು ಕಾಡು ಸಿನಿಮಾದಲ್ಲಿ ಸಿಂಬು ಅಲಿಯಾಸ್ ಸಿಲಂಬರಸನ್ ನಟಿಸುತ್ತಿದ್ದು, ಇತ್ತೀಚೆಗಷ್ಟೆ ಈ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಆಗಿದೆ. ಈ ಪೋಸ್ಟರ್ ನೋಡಿದವರು ಶಾಕ್ ಆಗಿದ್ದರೋ ಇಲ್ಲವೋ ತಿಳಿಯದು. ಆದರೆ ಸಿಂಬು ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಫೋಟೋ ನೋಡಿ ಮಾತ್ರ ಆಶ್ಚರ್ಯದಿಂದ ಹುಬ್ಬೇರಿಸಿದ್ದಾರೆ. (ಚಿತ್ರಗಳು ಕೃಪೆ: ಸಿಲಂಬರಸನ್ ಇನ್ಸ್ಟಾಗ್ರಾಂ ಖಾತೆ)
ಸಿನಿಮಾಗಾಗಿ ಸ್ಟಾರ್ಗಳು ದೇಹದ ತೂಕ ಹೆಚ್ಚಿಸಿಕೊಳ್ಳುವುದು ಹಾಗೂ ಕಡಿಮೆ ಮಾಡುವುದು ಸಾಮಾನ್ಯವಾಗಿ ಹೋಗಿದೆ. ಈಗ ಕಾಲಿವುಡ್ ನಟ ಸಿಂಬು ಸಹ ಸಿನಿಮಾವೊಂದಕ್ಕಾಗಿ ತುಂಬಾ ಸಪೂರವಾಗಿದ್ದಾರೆ.
2/ 10
ಹೌದು, ಕಾಲಿವುಡ್ ನಟಿ ಸಿಂಬು ನಟನೆಯ ಹೊಸ ಸಿನಿಮಾದ ಪೋಸ್ಟರ್ ಇತ್ತೀಚೆಗಷ್ಟೆ ರಿಲೀಸ್ ಆಗಿದೆ.
3/ 10
ವೆಂಧು ತಾನಿಂಧಾತು ಕಾಡು ಸಿನಿಮಾದಲ್ಲಿ ಸಿಂಬು ಅಲಿಯಾಸ್ ಸಿಲಂಬರಸನ್ ನಟಿಸುತ್ತಿದ್ದಾರೆ.
4/ 10
ಈ ಸಿನಿಮಾಗಾಗಿಯೇ ಸಿಂಬು 15 ಕೆಜಿ ತೂಕ ಇಳಿಸಿಕೊಂಡಿದ್ದಾರೆ.
5/ 10
ತಮ್ಮ ಸಿನಿ ಜೀವನದಲ್ಲಿ ಇದೇ ಮೊದಲ ಬಾರಿಗೆ ಈ ಸಾಹದಕ್ಕೆ ಕೈ ಹಾಕಿದ್ದಾರೆ ಸಿಂಬು.
6/ 10
ಕಳೆದ ಆರು ತಿಂಗಳಿನಿಂದ ತೂಕ ಇಳಿಸಿಕೊಳ್ಳುವ ಪ್ರಯತ್ನದಲ್ಲಿದ್ದರಂತೆ ಈ ನಟ.
7/ 10
ಎರಡು ದಿನಗಳ ಹಿಂದೆ ಸಿಂಬು ತಮ್ಮ ಬಾಡಿ ಟ್ರಾನ್ಸ್ಫರ್ಮೇಷನ್ ಫೋಟೋ ಹಂಚಿಕೊಂಡಿದ್ದು, ನಟನಿಗೆ ಸಿನಿಮಾ ಕುರಿತಾಗಿ ಇರುವ ಶ್ರದ್ಧೆ ನೋಡಿದ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
8/ 10
ಆಗಸ್ಟ್ 6ರಿಂದ ಈ ಸಿನಿಮಾದ ಚಿತ್ರೀಕರಣ ತಿರುಚೆಂದೂರಿನಲ್ಲಿ ಆರಂಭವಾಗಿತ್ತು.
9/ 10
ಈಗ ಕಾರಣಾಂತರಗಳಿಂದಾಗಿ ಈ ಚಿತ್ರದ ಚಿತ್ರೀಕರಣ ಸ್ಥಗಿತಗೊಂಡಿದೆಯಂತೆ.
10/ 10
ಈ ಸಿನಿಮಾದಲ್ಲಿ ನಟಿ ರಾಧಿಕಾ ಶರತ್ ಕುಮಾರ್ ಸಹ ನಟಿಸುತ್ತಿದ್ದು, ಅಮ್ಮ-ಮಗನಾಗಿ ಇವರು ಕಾಣಿಸಿಕೊಳ್ಳಲಿದ್ದಾರಂತೆ. ಕೆಲವು ದಿನಗಳ ಹಿಂದೆ ರಾಧಿಕಾ ಹಾಗೂ ಸಿಂಬು ಅವರ ಫೋಟೋ ಒಂದು ಸಾಮಾಜಿ ಕ ಜಾಲತಾಣದಲ್ಲಿ ವೈರಲ್ ಆಗಿತ್ತು.