Eggs in Summer: ಬೇಸಿಗೆಯಲ್ಲಿ ಪ್ರತಿದಿನ ಮೊಟ್ಟೆ ತಿನ್ನಬೇಕಾ? ಬೇಡವಾ? ನಿಮ್ಮ ಗೊಂದಲಕ್ಕೆ ಇಲ್ಲಿದೆ ಉತ್ತರ

Eating Eggs: ಬೇಸಿಗೆ ಆರಂಭವಾಗಿದ್ದು, ತಾಪಮಾನ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಈ ಸಮಯದಲ್ಲಿ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ನೀಡಬೇಕು. ಕೆಲವರಿಗೆ ಬೇಸಿಗೆಯಲ್ಲಿ ಮೊಟ್ಟೆ ತಿನ್ನಬೇಕಾ? ತಿಂದ್ರೆ ಎಷ್ಟು ತಿನ್ನಬೇಕು ಅನ್ನೋ ಗೊಂದಲ ಇರುತ್ತದೆ. ನಿಮ್ಮ ಪ್ರಶ್ನೆಗೆ ಉತ್ತರ ಇಲ್ಲಿದೆ.

First published:

  • 17

    Eggs in Summer: ಬೇಸಿಗೆಯಲ್ಲಿ ಪ್ರತಿದಿನ ಮೊಟ್ಟೆ ತಿನ್ನಬೇಕಾ? ಬೇಡವಾ? ನಿಮ್ಮ ಗೊಂದಲಕ್ಕೆ ಇಲ್ಲಿದೆ ಉತ್ತರ

    ಮೊಟ್ಟೆ ತಿನ್ನೋದು ಆರೋಗ್ಯಕ್ಕೆ ಒಳ್ಳೆಯದು. ಆರೋಗ್ಯ ತಜ್ಞರು ಪ್ರತಿದಿನ ಮೊಟ್ಟೆ ತಿನ್ನಲು ಸಲಹೆ ನೀಡುತ್ತಾರೆ. ಜನರು ಸಹ ಬಗೆ ಬಗೆಯ ಮೊಟ್ಟೆ ಖಾದ್ಯ ತಿನ್ನಲು ಇಷ್ಟಪಡ್ತಾರೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 27

    Eggs in Summer: ಬೇಸಿಗೆಯಲ್ಲಿ ಪ್ರತಿದಿನ ಮೊಟ್ಟೆ ತಿನ್ನಬೇಕಾ? ಬೇಡವಾ? ನಿಮ್ಮ ಗೊಂದಲಕ್ಕೆ ಇಲ್ಲಿದೆ ಉತ್ತರ

    ಕೆಲವರು ದಿನಕ್ಕೆ 4 ರಿಂದ 5 ಮೊಟ್ಟೆಗಳನ್ನು ತಿನ್ನುತ್ತಾರೆ. ಆದರೆ ಬೇಸಿಗೆಯಲ್ಲಿ ಹೆಚ್ಚು ಮೊಟ್ಟೆ ತಿನ್ನುವುದು ಆರೋಗ್ಯಕ್ಕೆ ಹಾನಿಕಾರಕ ಎಂಬ ವಿಷಯ ನಿಮಗೆ ಗೊತ್ತಿದೆಯಾ? ಅತಿ ಹೆಚ್ಚು ಮೊಟ್ಟೆ ತಿನ್ನೋದರಿಂದ ಏನೆಲ್ಲಾ ಅಪಾಯಗಳು ಉಂಟಾಗುತ್ತವೆ ಅನ್ನೋ ಮಾಹಿತಿ ಇಲ್ಲಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 37

    Eggs in Summer: ಬೇಸಿಗೆಯಲ್ಲಿ ಪ್ರತಿದಿನ ಮೊಟ್ಟೆ ತಿನ್ನಬೇಕಾ? ಬೇಡವಾ? ನಿಮ್ಮ ಗೊಂದಲಕ್ಕೆ ಇಲ್ಲಿದೆ ಉತ್ತರ

    ಮೆಡಿಸರ್ಕಲ್‌ನಲ್ಲಿ ಪ್ರಕಟವಾದ ವರದಿಯ ಪ್ರಕಾರ, ಸಾಲ್ಮೊನೆಲ್ಲಾ ಎಂಬ ಬ್ಯಾಕ್ಟೀರಿಯಾವು ಮೊಟ್ಟೆಗಳಲ್ಲಿ ಕಂಡುಬರುತ್ತದೆ. ಇದು ಕೋಳಿಯಿಂದ ಬರುತ್ತದೆ. ನೀವು ಮೊಟ್ಟೆಯನ್ನು ಸರಿಯಾಗಿ ಕುದಿಸದಿದ್ದರೆ, ಈ ಬ್ಯಾಕ್ಟೀರಿಯಾಗಳು ನಿಮ್ಮ ದೇಹವನ್ನು ಪ್ರವೇಶಿಸಿ ನಿಮ್ಮ ಆರೋಗ್ಯಕ್ಕೆ ಹಾನಿ ಮಾಡುತ್ತದೆ. ಹಾಗಾಗಿ ಮೊಟ್ಟೆಯನ್ನು ಬೇಯಿಸಿ ತಿನ್ನಿ.(ಸಾಂದರ್ಭಿಕ ಚಿತ್ರ)

    MORE
    GALLERIES

  • 47

    Eggs in Summer: ಬೇಸಿಗೆಯಲ್ಲಿ ಪ್ರತಿದಿನ ಮೊಟ್ಟೆ ತಿನ್ನಬೇಕಾ? ಬೇಡವಾ? ನಿಮ್ಮ ಗೊಂದಲಕ್ಕೆ ಇಲ್ಲಿದೆ ಉತ್ತರ

    ಬೇಸಿಗೆಯಲ್ಲಿ ಮೊಟ್ಟೆ ಹೆಚ್ಚು ಮೊಟ್ಟೆ ತಿನ್ನೋದು ಆರೋಗ್ಯದ ಮೇಲೆ ಕೆಲ ನಕಾರಾತ್ಮಕ ಪರಿಣಾಮಗಳನ್ನು ಬೀರುತ್ತದೆ. ಮೊಟ್ಟೆಯಲ್ಲಿ ಪ್ರೊಟೀನ್ ಅಧಿಕವಾಗಿರುವುದರಿಂದ ಹೆಚ್ಚು ಮೊಟ್ಟೆಗಳನ್ನು ತಿನ್ನುವುದರಿಂದ ಮೂತ್ರಪಿಂಡದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಹಾಗಾಗಿ ಬೇಸಿಗೆಯಲ್ಲಿ ಮೊಟ್ಟೆ ಸೇವನೆ ಪ್ರಮಾಣ ಮಿತವಾಗಿರಬೇಕು. (ಸಾಂದರ್ಭಿಕ ಚಿತ್ರ)

    MORE
    GALLERIES

  • 57

    Eggs in Summer: ಬೇಸಿಗೆಯಲ್ಲಿ ಪ್ರತಿದಿನ ಮೊಟ್ಟೆ ತಿನ್ನಬೇಕಾ? ಬೇಡವಾ? ನಿಮ್ಮ ಗೊಂದಲಕ್ಕೆ ಇಲ್ಲಿದೆ ಉತ್ತರ

    ಮೊಟ್ಟೆಯಲ್ಲಿ ಕೊಲೆಸ್ಟ್ರಾಲ್ ಕೂಡ ಇರುತ್ತದೆ. ಈ ಸಂದರ್ಭದಲ್ಲಿ ಅಧಿಕ ಕೊಲೆಸ್ಟ್ರಾಲ್ ಇರುವವರು ಇದನ್ನು ದಿನನಿತ್ಯ ತಿನ್ನಬಾರದು. ಹೃದ್ರೋಗದ ಅಪಾಯ ಹೆಚ್ಚಾಗಬಹುದು. (ಸಾಂದರ್ಭಿಕ ಚಿತ್ರ)

    MORE
    GALLERIES

  • 67

    Eggs in Summer: ಬೇಸಿಗೆಯಲ್ಲಿ ಪ್ರತಿದಿನ ಮೊಟ್ಟೆ ತಿನ್ನಬೇಕಾ? ಬೇಡವಾ? ನಿಮ್ಮ ಗೊಂದಲಕ್ಕೆ ಇಲ್ಲಿದೆ ಉತ್ತರ

    ಕೆಲವರಿಗೆ ಮೊಟ್ಟೆಯಿಂದಲೂ ಅಲರ್ಜಿ ಇರುತ್ತದೆ. ಇಂತಹವರು ಮೊಟ್ಟೆ ಖಾದ್ಯಗಳಿಂದ ದೂರ ಇರಬೇಕು. ನಿಯಮಿತವಾಗಿ ಮೊಟ್ಟೆ ತಿನ್ನೋದರಿಂದ ಅಡ್ಡ ಪರಿಣಾಮಗಳು ಉಂಟಾಗುವುದಿಲ್ಲ. (ಸಾಂದರ್ಭಿಕ ಚಿತ್ರ)

    MORE
    GALLERIES

  • 77

    Eggs in Summer: ಬೇಸಿಗೆಯಲ್ಲಿ ಪ್ರತಿದಿನ ಮೊಟ್ಟೆ ತಿನ್ನಬೇಕಾ? ಬೇಡವಾ? ನಿಮ್ಮ ಗೊಂದಲಕ್ಕೆ ಇಲ್ಲಿದೆ ಉತ್ತರ

    ಮೊಟ್ಟೆ ಸರಿಯಾಗಿ ಬೇಯಿಸದೇ ತಿಂದ್ರೆ ಹೊಟ್ಟೆ ಉಬ್ಬುವಿಕೆ, ವಾಂತಿ ಸೇರಿದಂತೆ ಅಜೀರ್ಣತೆಗೆ ಸಂಬಂಧಿಸಿದ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಹಾಗಾಗಿ ಅಡುಗೆ ಮಾಡುವಾಗ ಮೊಟ್ಟೆ ಸರಿಯಾಗಿ ಬೇಯಿಸಬೇಕು. (ಸಾಂದರ್ಭಿಕ ಚಿತ್ರ)

    MORE
    GALLERIES