ಒಂದು ವರ್ಷದೊಳಗಿನ ಮಕ್ಕಳಿಗೆ ಯಾವುದೇ ಕಾರಣಕ್ಕೂ ಈ ಆಹಾರಗಳನ್ನು ತಿನ್ನಿಸಬೇಡಿ

ಸಣ್ಣ ಮಕ್ಕಳಿಗೆ ಆಹಾರ ನೀಡುವಾಗ ಯಾವ ವಯಸ್ಸಿನಲ್ಲಿ ಯಾವ ಆಹಾರ ಕೊಡಬೇಕು, ಯಾವುದು ಕೊಡಬಾರದು ಎನ್ನುವುದನ್ನು ತಿಳಿದಿರಬೇಕು. ಅದರಲ್ಲೂ ಒಂದು ವರ್ಷದೊಳಗಿನ ಹಸುಗೂಸಿಗೆ ಯಾವ ಆಹಾರ ನೀಡಬಹುದು ಎನ್ನುವುದರ ಸರಿಯಾದ ಮಾಹಿತಿ ಅತ್ಯಗತ್ಯ

First published:

  • 19

    ಒಂದು ವರ್ಷದೊಳಗಿನ ಮಕ್ಕಳಿಗೆ ಯಾವುದೇ ಕಾರಣಕ್ಕೂ ಈ ಆಹಾರಗಳನ್ನು ತಿನ್ನಿಸಬೇಡಿ

    ವೈದ್ಯರು ಮಗುವಿಗೆ ಒಂದು ವರ್ಷ ಆಗುವವರಗೆ ತಾಯಿಯ ಎದೆಹಾಲನ್ನೇ ಕುಡಿಸಿ ಎನ್ನುತ್ತಾರೆ. ಆದ್ರೆ ಪೋಷಕರಿಗೆ ಮಗುವಿಗೆ ನಾನಾ ಬಗೆಯ ಆಹಾರಗಳನ್ನು ನೀಡುವ ತವಕ. ಆದರೆ ಆ ಪುಟ್ಟ ಕಂದನಿಗೆ ಯಾವ ಆಹಾರ ಒಗ್ಗುತ್ತದೆ, ಯಾವುದು ನೀಡಬಾರದು ಎನ್ನುವ ಬಗ್ಗೆ ತಿಳಿದುಕೊಂಡಿರಬೇಕು.

    MORE
    GALLERIES

  • 29

    ಒಂದು ವರ್ಷದೊಳಗಿನ ಮಕ್ಕಳಿಗೆ ಯಾವುದೇ ಕಾರಣಕ್ಕೂ ಈ ಆಹಾರಗಳನ್ನು ತಿನ್ನಿಸಬೇಡಿ

    ಒಂದು ವರ್ಷದೊಳಗಿನ ಮಕ್ಕಳಿಗೆ ಸಿಹಿ ನೀಡುವುದು ಒಳ್ಳೆಯದಲ್ಲ. ಹೆಚ್ಚಾಗಿ ಜೇನುತುಪ್ಪ ನೀಡುವ ಅಭ್ಯಾಸ ಹಲವು ತಂದೆ ತಾಯಿಗೆ ಇರುತ್ತದೆ. ಆದರೆ ಇದು ಕೂಡಾ ಒಳ್ಳೆಯದಲ್ಲ. ಜೇನು ತುಪ್ಪದಲ್ಲಿ ಬ್ಯಾಕ್ಟೀರಿಯಾ ಇರುತ್ತದೆ, ಅದನ್ನು ಅರಗಿಸಿಕೊಳ್ಳುವ ಶಕ್ತಿ ಆ ಮಕ್ಕಳಿಗೆ ಇರುವುದಿಲ್ಲ. ಹಾಗಾಗಿ ಜೇನುತುಪ್ಪ ತಿಂದರೆ ಮಲಬದ್ಧತೆ ಉಂಟಾಗುವ ಸಂಭವವಿರುತ್ತದೆ.

    MORE
    GALLERIES

  • 39

    ಒಂದು ವರ್ಷದೊಳಗಿನ ಮಕ್ಕಳಿಗೆ ಯಾವುದೇ ಕಾರಣಕ್ಕೂ ಈ ಆಹಾರಗಳನ್ನು ತಿನ್ನಿಸಬೇಡಿ

    Peanut Butter: ಕಡಲೆಕಾಯಿ ಬೀಜದ ಪದಾರ್ಥಗಳು ಅದರಲ್ಲೂ ಪೀನಟ್ ಬಟರ್ ಇಷ್ಟವಾಗುತ್ತದೆ ಎಂದು ನೀಡಲು ಹೋಗುತ್ತಾರೆ. ಆದರೆ ಒಂದು ವರ್ಷದೊಳಗಿನ ಅನೇಕ ಮಕ್ಕಳಿಗೆ ಕಡಲೆಕಾಯಿ ಬೀಜ ಅಲರ್ಜಿ ಉಂಟುಮಾಡುತ್ತದೆ. ಹಾಗಾಗಿ ಪುಟ್ಟ ಮಕ್ಕಳಿಗೆ ಇದನ್ನು ನೀಡಬಾರದು

    MORE
    GALLERIES

  • 49

    ಒಂದು ವರ್ಷದೊಳಗಿನ ಮಕ್ಕಳಿಗೆ ಯಾವುದೇ ಕಾರಣಕ್ಕೂ ಈ ಆಹಾರಗಳನ್ನು ತಿನ್ನಿಸಬೇಡಿ

    ಹಣ್ಣು ತರಕಾರಿಗಳು ದೊಡ್ಡವರಿಗೆ ಆರೋಗ್ಯದಾಯಕವಾಗಿರುತ್ತವೆ. ಆದರೆ ಪುಟ್ಟ ಮಕ್ಕಳಿಗೆ ಅಲ್ಲ. ಪುಟ್ಟ ಹೊಟ್ಟೆಗಳೊಳಗೆ ಇನ್ನೂ ಆಸಿಡ್ ಉತ್ಪತ್ತಿ ಆಗುತ್ತಿರುವುದಿಲ್ಲ, ಅದನ್ನು ತನ್ನಷ್ಟಕ್ಕೇ ಆಗುವಂತೆ ಬಿಡಬೇಕು. ಹಾಗಾಗಿ ಅನೇಕ ಸೊಪ್ಪು - ತರಕಾರಿ ಅದರಲ್ಲೂ ಬೀಟ್​ರೂಟ್ ನಂತಹ ತರಕಾರಿಗಳನ್ನು ನೀಡಲೇಬಾರದು

    MORE
    GALLERIES

  • 59

    ಒಂದು ವರ್ಷದೊಳಗಿನ ಮಕ್ಕಳಿಗೆ ಯಾವುದೇ ಕಾರಣಕ್ಕೂ ಈ ಆಹಾರಗಳನ್ನು ತಿನ್ನಿಸಬೇಡಿ

    ಮಕ್ಕಳ ಆರೋಗ್ಯಕ್ಕೆ ಅವಶ್ಯಕತೆ ಇರುವಷ್ಟು ಉಪ್ಪಿನ ಅಂಶ ತಾಯಿಯ ಎದೆಹಾಲಿನಲ್ಲೇ ಸಿಗುತ್ತದೆ. ಅತೀ ಹೆಚ್ಚು ಅಂದರೆ ಕೇವಲ ದಿನಕ್ಕೆ ಒಂದೇ ಒಂದು ಹರಳು ಉಪ್ಪನ್ನು ನೀಡಬಹುದು. ಅದಕ್ಕಿಂತ ಹೆಚ್ಚು ನೀಡಿದರೆ ಆರೋಗ್ಯದಲ್ಲಿ ಏರುಪೇರಾಗುವ ಅಪಾಯವಿರುತ್ತದೆ.

    MORE
    GALLERIES

  • 69

    ಒಂದು ವರ್ಷದೊಳಗಿನ ಮಕ್ಕಳಿಗೆ ಯಾವುದೇ ಕಾರಣಕ್ಕೂ ಈ ಆಹಾರಗಳನ್ನು ತಿನ್ನಿಸಬೇಡಿ

    ಮಗುವಿಗೆ ಕನಿಷ್ಠ ಒಂದು ವರ್ಷ ಆಗುವವರಗೆ ಗೋಡಂಬಿ ಮುಂತಾದ ಡ್ರೈ ಫ್ರೂಟ್ಸ್ ನೀಡಲೇಬೇಡಿ. ಇದರಿಂದ ದೊಡ್ಡ ಮಟ್ಟಿಗೆ ಅಲರ್ಜಿ ಉಂಟಾಗುವ ಅಪಾಯವಿರುತ್ತದೆ.

    MORE
    GALLERIES

  • 79

    ಒಂದು ವರ್ಷದೊಳಗಿನ ಮಕ್ಕಳಿಗೆ ಯಾವುದೇ ಕಾರಣಕ್ಕೂ ಈ ಆಹಾರಗಳನ್ನು ತಿನ್ನಿಸಬೇಡಿ

    ಮಕ್ಕಳು ಎಂದ ಕೂಡಲೇ ಎಲ್ಲರೂ ಚಾಕೊಲೇಟ್ ನೀಡೋಕೆ ಹೋಗ್ತಾರೆ. ಮಕ್ಕಳಿಗೂ ಚಾಕೊಲೇಟ್ ರುಚಿ ಇಷ್ಟವೇ. ಆದರೆ ಒಂದು ವರ್ಷದೊಳಗಿನ ಮಕ್ಕಳಿಗೆ ಚಾಕೊಲೇಟ್ ನೀಡಬಾರದು. ಅದರಲ್ಲಿ ಇರುವ ಕೆಫೀನ್ ಮಕ್ಕಳ ಆರೋಗ್ಯಕ್ಕೆ ಮಾರಕ. ಆದ್ದರಿಂದ ಒಂದು ವರ್ಷ ಆಗುವ ತನಕ ಮಕ್ಕಳಿಂದ ಚಾಕೊಲೇಟ್ ದೂರ ಇಡಿ.

    MORE
    GALLERIES

  • 89

    ಒಂದು ವರ್ಷದೊಳಗಿನ ಮಕ್ಕಳಿಗೆ ಯಾವುದೇ ಕಾರಣಕ್ಕೂ ಈ ಆಹಾರಗಳನ್ನು ತಿನ್ನಿಸಬೇಡಿ

    ಮಕ್ಕಳಿಗೆ ಮೊಟ್ಟೆ ಕೊಡುವ ಮುಂಚೆ ಕೆಲವು ಮುನ್ನೆಚ್ಚರಿಕೆ ಅಗತ್ಯ. ಮೊಟ್ಟೆಯ ಬಿಳಿಭಾಗ ಬೆಳೆಯುವ ಮಕ್ಕಳಿಗೆ ಹೊಟ್ಟೆಗೆ ಸಂಬಂಧಿಸಿದ ಅಲರ್ಜಿ ಉಂಟುಮಾಡುತ್ತದೆ. ಅದೇ ಬೇಯಿಸಿದ ಮೊಟ್ಟೆಯ ಹಳದಿ ಭಾಗ ಅವರ ಪಚನ ಕ್ರಿಯೆಗೆ ಸಹಕಾರಿ. ಹಾಗಾಗಿ ಮೊಟ್ಟೆ ನೀಡುವ ಮುಂಚೆ ಒಮ್ಮೆ ನಿಮ್ಮ ವೈದ್ಯರ ಬಳಿ ಕೇಳಿ ಮಗುವಿನ ಆರೋಗ್ಯಕ್ಕೆ ಸೂಕ್ತವಾದಂತೆ ನೀಡಿದರೆ ಒಳಿತು

    MORE
    GALLERIES

  • 99

    ಒಂದು ವರ್ಷದೊಳಗಿನ ಮಕ್ಕಳಿಗೆ ಯಾವುದೇ ಕಾರಣಕ್ಕೂ ಈ ಆಹಾರಗಳನ್ನು ತಿನ್ನಿಸಬೇಡಿ

    ಮಗುವಿಗೆ ಒಂದು ವರ್ಷ ಆಗುವ ತನಕ ಹಸುವಿನ ಹಾಲು ಮತ್ತು ಸೋಯಾ ಹಾಲು ನೀಡುವುದನ್ನು ತಪ್ಪಿಸಿ. ಇದು ಮಕ್ಕಳಲ್ಲಿ ಭೇದಿ ಉಂಟುಮಾಡುವುದು ಮಾತ್ರ ಅನೇಕ ಆರೋಗ್ಯ ಸಮಸ್ಯೆಗಳನ್ನು ತಂದೊಡ್ಡಬಹುದು. ಅಷ್ಟು ಪುಟ್ಟ ಮಕ್ಕಳಿಗೆ ಇವುಗಳನ್ನು ಅರಗಿಸಿಕೊಳ್ಳುವ ಶಕ್ತಿ ಇರುವುದಿಲ್ಲ. ಬಾಟಲಿಗಳಲ್ಲಿ ಹಸುವಿನ ಹಾಲಿಗೆ ಬೇರೆ ಔಷಧ ಸೇರಿಸಿಯೇ ನೀಡಲು ವೈದ್ಯರು ಸೂಚಿಸುವುದಕ್ಕೆ ಇದೇ ಕಾರಣ

    MORE
    GALLERIES