ಉತ್ತಮ ದೈಹಿಕ ಆರೋಗ್ಯ ಇರುವವರಿಗೆ ಅಧಿಕ ರಕ್ತದೊತ್ತಡವನ್ನು ಹತೋಟಿಯಲ್ಲಿ ಇಟ್ಟುಕೊಳ್ಳುವುದು ಸುಲಭ. ಹೆಚ್ಚು ತೂಕ ಇಲ್ಲದಂತೆ ನೋಡಿಕೊಳ್ಳುವುದು, ಸರಿಯಾದ ಸಮಯಕ್ಕೆ ಉತ್ತಮ ಆಹಾರ ಸೇವನೆ ಮಾಡುವುದು, ದೈಹಿಕ ವ್ಯಾಯಾಮ, ನೆಮ್ಮದಿಯ ಬದುಕು ಇವೆಲ್ಲವುದರ ಜೊತೆಗೆ ಹೆಚ್ಚು ಸಕ್ಕರೆ, ಉಪ್ಪು ಇರದ ಆಹಾರ ಸೇವನೆ ಕೂಡಾ ರಕ್ತದೊತ್ತಡವನ್ನು ಹತೋಟಿಯಲ್ಲಿ ಇಟ್ಟುಕೊಳ್ಳಲು ಸಹಕಾರಿ.