Cooking Oil: ಅಡುಗೆಗೆ ಈ ಎಣ್ಣೆ ಬಳಸಿದ್ರೆ ಖಾಯಿಲೆಗಳು ನಿಮ್ಮ ಹತ್ತಿರಕ್ಕೂ ಬರೋದಿಲ್ವಂತೆ, ಹೃದಯಕ್ಕೆ ಇದು ಅತ್ಯುತ್ತಮ!
ಅನೇಕರು ಸೂರ್ಯಕಾಂತಿ ಎಣ್ಣೆ (Sunflower Oil) ಅಥವಾ ರಿಫೈನ್ಡ್ ಆಯಿಲ್ನ್ನೇ (Refined Oil) ಹೆಚ್ಚಾಗಿ ಅಡುಗೆಯಲ್ಲಿ ಬಳಸುತ್ತಾರೆ. ಆಲಿವ್ ಆಯಿಲ್ (Olive Oil) ಒಳ್ಳೆಯದಾದ್ರೂ ಬಹಳ ದುಬಾರಿ. ಆದ್ರೆ ಅಡುಗೆ ಮನೆಯಲ್ಲೇ ಇರುವ ಈ ಎಣ್ಣೆಯ ಬಗ್ಗೆ ನೀವು ತಿಳಿದುಕೊಳ್ಬೇಕು. ಕೈಗೆಟುಕುವ ಇದನ್ನು ನಮ್ಮ ಹಿರಿಯರು ಅಡುಗೆಯಲ್ಲಿ ಬಳಸುತ್ತಿದ್ದರು. ಹಾಗಾಗೇ ಅವರ ಹೃದಯವೂ ಆರೋಗ್ಯವಾಗಿರುತ್ತಿತ್ತು.
ತಿನ್ನುವ ಆಹಾರದ ಮೂಲಕ ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳೋದು ಹೇಗೆ ಎನ್ನುವ ಆಲೋಚನೆ ಹಲವರಿಗೆ ಇರುತ್ತದೆ. ಇದಕ್ಕೆ ಪೂರಕವಾಗಿ ನಮ್ಮ ಹಿರಿಯರು ತಲತಲಾಂತರದಿಂದ ಬಳಸುತ್ತಾ ಬಂದಿರುವ ಅಡುಗೆ ಎಣ್ಣೆಯಲ್ಲೇ ಉತ್ತರ ಅಡಗಿದೆ.
2/ 6
ಸಾಸಿವೆ ಎಣ್ಣೆ ದೇಹದೊಳಗಿನ ಕೊಬ್ಬಿನ ಅಂಶವನ್ನು ಬ್ಯಾಲೆನ್ಸ್ ಮಾಡುತ್ತದೆ. ಇದರಲ್ಲಿ ಇರುವ ಲಿನೋಲಿಕ್ ಆಸಿಡ್ ಹೃದಯದ ಆರೋಗ್ಯ ಕಾಪಾಡಲು ಬಹಳ ಉಪಕಾರಿಯಾಗಿದೆ. ಹಾಗಾಗಿ ನಮ್ಮ ಹಿರಿಯರು ಸಾಸಿವೆ ಎಣ್ಣೆಯನ್ನು ಹೇರಳವಾಗಿ ಅಡುಗೆಯಲ್ಲಿ ಬಳಸುತ್ತಿದ್ದರು.
3/ 6
ಸಾಸಿವೆ ಎಣ್ಣೆಗೆ ಬ್ಯಾಕ್ಟೀರಿಯಾ ವಿರುದ್ಧ ಹೋರಾಡುವ ಶಕ್ತಿ ಕೂಡಾ ಇದೆ. ಹಾಗಾಗಿ ನಮಗೆ ತಿಳಿಯದೇ ಹೊಟ್ಟೆಯೊಳಗೆ ಯಾವುದಾದರೂ ಸೋಂಕು ಇದ್ದರೆ ಅದನ್ನು ಸಾಸಿವೆ ಎಣ್ಣೆ ಗುಣಪಡಿಸುತ್ತದೆ.
4/ 6
ರೋಗಗಳನ್ನು ಉಂಟುಮಾಡುವ ನಾನಾ ಬಗೆಯ ಸೂಕ್ಷಾಣುಗಳಿಂದ ಕಾಪಾಡಲು ಸಾಸಿವೆ ಎಣ್ಣೆಯಲ್ಲಿ ಇರುವ AITC ಎನ್ನುವ ವಸ್ತು ಸಹಕಾರಿಯಾಗಿದೆ. ಇದು ದೇಹದ ರೋಗನಿರೋಧಕ ಶಕ್ತಿಯನ್ನೂ ವೃದ್ಧಿಸುತ್ತದೆ.
5/ 6
ನೆಗಡಿ ಮತ್ತು ಕೆಮ್ಮಿನಿಂದ ಬಳಲುತ್ತಿರುವವರ ಪಾಲಿಗಂತೂ ಸಾಸಿವೆ ಎಣ್ಣೆ ಸಿದ್ಧೌಷಧವೇ ಸರಿ. ಲವಂಗ ಮತ್ತು ಬೆಳ್ಳುಳ್ಳಿ ಬೆರೆಸಿದ ಸಾಸಿವೆ ಎಣ್ಣೆಯನ್ನು ಎದೆಯ ಭಾಗಕ್ಕೆ ಹಚ್ಚುತ್ತಿದ್ದರೆ ಕಫ ಕಟ್ಟುವುದನ್ನೂ ತಪ್ಪಿಸಬಹುದು.
6/ 6
ಕೂದಲು ಮತ್ತು ಚರ್ಮದ ಆರೋಗ್ಯಕ್ಕೂ ಸಾಸಿವೆ ಎಣ್ಣೆ ಬಹಳ ಪ್ರಯೋಜನಕಾರಿ. ಅಡುಗೆಯಲ್ಲಿ ಬಳಸಿದಾಗ ದೇಹದ ಒಳಗಿನ ಆರೋಗ್ಯ ಕಾಪಾಡುವಂತೆಯೇ ಚರ್ಮಕ್ಕೆ ಅಥವಾ ಕೂದಲಿಗೆ ಹಚ್ಚಿ ಕೆಲ ಸಮಯದ ನಂತರ ತೊಳೆದರೆ ಚರ್ಮ ಮೃದುವಾಗುವುದನ್ನು ಮತ್ತು ಕೂದಲು ಸದೃಢವಾಗುವುದನ್ನು ಗಮನಿಸಬಹುದು.