ರಸ್ತೆಯಲ್ಲಿ ಹೋಗುವಾಗ ಕೆಎಫ್ಸಿ ಬೋರ್ಡ್ ನೋಡಿದರೆ ಸಾಕು, ಕೆಎಫ್ಸಿ ಚಿಕನ್ನತ್ತ ಗಮನ ಹೋಗುತ್ತದೆ. ಆಗ ಅಂಗಡಿ ಒಳಗೆ ಹೋಗಿ ಬರ್ಗರ್ ಜೊತೆಗೆ ಯಾವುದಾದರೂ ಫ್ರೈಡ್ ಚಿಕನ್ ಆರ್ಡರ್ ಮಾಡಿ, ತಿಂದು ತೃಪ್ತರಾಗುತ್ತೀರಾ. ಆದರೆ ಕೆಎಫ್ಸಿ ಪೂರ್ಣ ಹೆಸರು ನಿಮಗೇನು ಅಂತ ತಿಳಿದಿದ್ಯಾ? ಈ ಬ್ರ್ಯಾಂಡ್ ಅನ್ನು ಹೇಗೆ ಬಂತು ಅಥವಾ ಹೇಗೆ ಜನಪ್ರಿಯಗೊಳಿಸಲಾಯಿತು ಈ ಬಗ್ಗೆ ಇಲ್ಲಿದೆ ನೋಡಿ ಮಾಹಿತಿ.
ಎದುರುಗಡೆ ಗೋಡೆಯ ಮೇಲೆ ಅಂಟಿಸಲಾಗಿರುವ ಪೋಸ್ಟರ್ನಲ್ಲಿ ಯಾರೋ ಚಿಕನ್ ಪೀಸ್ ಅನ್ನು ಕಚ್ಚುತ್ತಿರುವ ಫೋಟೋವನ್ನು ನೋಡಬಹುದು. ಜೊತೆಗೆ ವಯಸ್ಸಾಗಿರುವ ಬಿಳಿ ಕೂದಲು ಹೊಂದಿರುವ ಕರ್ನಲ್ ಸ್ಯಾಂಡರ್ಸ್ ಕನ್ನಡಕ ಧರಿಸಿಕೊಂಡು ನಗುತ್ತಿರುತ್ತಾರೆ. (ಕೆಎಫ್ಸಿ) ಕೆಂಟುಕಿ ಫ್ರೈಡ್ ಚಿಕನ್ ಪ್ರಪಂಚದ ಮೂಲೆ ಮೂಲೆಗಳಲ್ಲೂ ಸಿಗುತ್ತದೆ. ಇನ್ನೂ ಈ ಚಿಕನ್ ಫೇಮಸ್ ಆಗಲು 62 ವರ್ಷ ಬೇಕಾಯಿತು. ಅದಕ್ಕೂ ಮುಂಚೆ ಕೆಎಫ್ಸಿ ಚಿಕನ್ ಅಷ್ಟಾಗಿ ಫೇಮಸ್ ಆಗಿರಲಿಲ್ಲ.
ಕೆಎಫ್ಸಿಯ ಪೂರ್ಣ ಹೆಸರು ಕೆಂಟುಕಿ ಫ್ರೈಡ್ ಚಿಕನ್. ಕರ್ನಲ್ ಹಾರ್ಲ್ಯಾಂಡ್ ಡೇವಿಡ್ ಸ್ಯಾಂಡರ್ಸ್ KFC ಅಥವಾ ಕೆಂಟುಕಿ ಫ್ರೈಡ್ ಚಿಕನ್ ಸ್ಥಾಪಕರು. ಡೇವಿಡ್ ಚಿಕ್ಕ ವಯಸ್ಸಿನಲ್ಲೇ ಶಾಲೆಯನ್ನು ತೊರೆದರು. ನಂತರ ಅವರು ಹೊಲಗಳಲ್ಲಿ ರೈಲು, ಅಗ್ನಿಶಾಮಕ, ವ್ಯಾಪಾರಿ, ವಕೀಲ, ಕಾರ್ ಟೈರ್ ಮಾರಾಟಗಾರ ಅಥವಾ ಫಿಲ್ಲಿಂಗ್ ಸ್ಟೇಷನ್ ಕ್ಲರ್ಕ್ ಆಗಿ ಕೆಲಸ ಮಾಡಿದರು.ನಂತರ ರಾಜಕೀಯದಲ್ಲಿ ತಮ್ಮ ಹೆಸರನ್ನು ಮೆಲುಕು ಹಾಕಿಸಿಕೊಂಡರು. ಕೊನೆಗೆ ರೆಸ್ಟೋರೆಂಟ್ ವ್ಯವಹಾರದಲ್ಲಿ ತೊಡಗಿದರು.
ಅದಾದ ನಂತರ, ಅವರು ಒಂದರ ನಂತರ ಒಂದರಂತೆ ಅನೇಕ ಕೆಲಸಗಳನ್ನು ಮಾಡಿದರು. ಹಾಗೆಯೇ ಕೆಲಸವನ್ನು ಕೂಡ ತೊರೆದರು. ಕೆಂಟುಕಿಯ ವಿಂಚೆಸ್ಟರ್ಗೆ ಸ್ಥಳಾಂತರಗೊಂಡರು. ಅಲ್ಲಿ ಹಲವಾರು ಕೆಲಸಗಳನ್ನು ಮಾಡಿದ ನಂತರ 1930 ರಲ್ಲಿ ಆಹಾರವನ್ನು ಮಳಿಗೆ ಪ್ರಾರಂಭಿಸಿದರು. ನಂತರ ಅವರ ಆಹಾರದ ಜನಪ್ರಿಯವಾಗಿ ಬೆಳೆಯಲು ಪ್ರಾರಂಭಿಸಿತು. 1939 ರಲ್ಲಿ, ಸ್ಯಾಂಡರ್ಸ್ ಉತ್ತರ ಕೆರೊಲಿನಾದ ಆಶೆವಾಲಿಯಲ್ಲಿ ಮೋಟೆಲ್ ಅನ್ನು ಖರೀದಿಸಿದರು. ಆ ವರ್ಷದ ನವೆಂಬರ್ನಲ್ಲಿ ಅಂಗಡಿ ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿತ್ತು.
ನಂತರ ಸ್ಯಾಂಡರ್ಸ್ ಮೋಟೆಲ್ ಅನ್ನು 140 ಆಸನಗಳ ರೆಸ್ಟೋರೆಂಟ್ ಆಗಿ ಪರಿವರ್ತಿಸಿದರು. ಸ್ಯಾಂಡರ್ಸ್ 1952 ರಲ್ಲಿ 'ಚಿಕನ್ ಫ್ರೈಸ್' ತಯಾರಿಸಲು ಪ್ರಾರಂಭಿಸಿದರು. ಕೆಲವೇ ದಿನಗಳಲ್ಲಿ ಸ್ಯಾಂಡರ್ಸ್ ಮತ್ತು ಅವರ ಪತ್ನಿ ಸೆಲ್ಬಿ ವ್ಯಾಲಿಯಲ್ಲಿ ರೆಸ್ಟೋರೆಂಟ್ ಅನ್ನು ತೆರೆದರು. ಆಗ ಆರಂಭವಾದ ಆ ರೆಸ್ಟೋರೆಂಟೇ, ಇಂದಿನ ಕೆಂಟುಕಿ ಫ್ರೈಡ್ ಚಿಕನ್ ಆಗಿದೆ. ಇದು ವಿಶ್ವಾದ್ಯಂತ KFC ಎಂದು ಕರೆಯಲ್ಪಡುತ್ತದೆ.