ದಿನೇ ದಿನೇ ಚಿಕನ್ ತಿನ್ನುವವರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಸಂಡೇ ಬಂತೆಂದರೆ ಸಾಕು ಜನ ಮಟನ್, ಚಿಕನ್ ಖರೀದಿಗೆ ಮುಗಿಬೀಳುತ್ತಾರೆ. ಆದರೀಗ ಅಂಗಡಿ ಮುಂದೆ ಕೋಳಿ ಖರೀದಿಸುವ ಪರಿಸ್ಥಿತಿ ಬದಲಾಗಿದೆ. ಕೋಳಿ ಅಂಗಡಿಗಳು ಎಸಿ ಅಂಗಡಿಗಳಾಗಿ ಮಾರ್ಪಟ್ಟಿವೆ. ಅಲ್ಲಿ ಮಾರುವ ಚಿಕನ್ ನೋಡಲು ಚೆನ್ನಾಗಿ ಕಾಣಿಸಿದರೂ ಕೂಡ ಫ್ರೆಶ್ ಆಗಿದ್ಯಾ? ಇಲ್ವಾ ಎಂದು ಅನೇಕ ಮಂದಿಗೆ ತಿಳಿಯುವುದಿಲ್ಲ. ಅದರಲ್ಲೂ ಈಗ ಬಹುತೇಕ ಮಂದಿ ಚಿಕನ್ ಅನ್ನು ಆನ್ಲೈನ್ನಲ್ಲಿಯೇ ಖರೀದಿಸುತ್ತಾರೆ. ಆನ್ಲೈನ್ನಲ್ಲಿ ದೊರೆಯುವ ಕೋಳಿ ಮಾಂಸವಂತೂ ಅಡುಗೆಗೆ ಬೇಕಾಗುವಂತಹ ರೀತಿಯೇ ಕಟ್ ಮಾಡಿ ಪ್ಯಾಕ್ ಮಾಡಿ ಇಡಲಾಗಿರುತ್ತದೆ. (ಸಾಂಕೇತಿಕ ಚಿತ್ರ)
ಆನ್ನಲ್ಲಿ ಆರ್ಡರ್ ಮಾಡಿದ ಚಿಕನ್ ಸರಿಯಾಗಿ ಪ್ಯಾಕ್ ಆಗಿರುತ್ತದೆ ಮತ್ತು ಒಂದು ಹನಿ ರಕ್ತವಿಲ್ಲದೇ ಸಿಗುತ್ತದೆ. ಹಾಗಾಗಿ ಇದನ್ನು ಅಡುಗೆಗೆ ಬಳಸಬಹುದು ಎಂದು ಅನೇಕ ಮಂದಿ ಭಾವಿಸುತ್ತಾರೆ. ಆದರೆ ನಿಜಕ್ಕೂ ಕ್ಲೀನ್ ಮಾಡಿದ ಚಿಕನ್ ಅಥವಾ ಫ್ರೆಶ್ ಚಿಕನ್ ಈ ಎರಡರಲ್ಲಿ ಆರೋಗ್ಯಕ್ಕೆ ಯಾವುದು ಒಳ್ಳೆಯದು ಎಂದು ಹೇಳಲು ಸಾಧ್ಯವಾಗದಿದ್ದರೆ, ನಿಮಗಾಗಿ ಈ ಕೆಳಗಿರುವ ಒಂದಷ್ಟು ಮಾಹಿತಿ ಓದಿ ತಿಳಿದುಕೊಳ್ಳಿ. (ಸಾಂಕೇತಿಕ ಚಿತ್ರ)
ಬೇಕಿಂಗ್ ಕವರ್ನೊಳಗೆ ನೀರು : ಚಿಕನ್ನ ಚೀಲವನ್ನು ಬೇರ್ಪಡಿಸಿದಾಗ ಅದರಲ್ಲಿ ಸಾಕಷ್ಟು ನೀರು ಏಕೆ ಇರುತ್ತದೆ ಎಂದು ಯೋಚಿಸಿದ್ದೀರಾ? ಹೌದು, ನೀರಿಲ್ಲದೇ ಚಿಕನ್ ಪಿಂಕ್ ಕಲರ್ನಲ್ಲಿದ್ದರೆ, ಅದು ಫ್ರೆಶ್ ಆಗಿದೆ ಎಂದರ್ಥ. ಅದರಲ್ಲಿ ಹೆಚ್ಚು ನೀರು ಇದ್ದರೆ, ತಾಜಾತನವನ್ನು ಕಾಪಾಡಿಕೊಳ್ಳಲು ಅದನ್ನು ಆ ರೀತಿ ಇಡಲಾಗಿದೆ ಎಂದರ್ಥ. ಅಲ್ಲದೇ ನೀರನ್ನು ಸುರಿದ ನಂತರ ಕೋಳಿ ಮಾಂಸ ಕುಗ್ಗುತ್ತದೆ. ಸಾಂಕೇತಿಕ ಚಿತ್ರ)