ಅಡಿಗೆ ಸೋಡಾ ಮತ್ತು ನಿಂಬೆ: ಅಡಿಗೆ ಸೋಡಾವನ್ನು ಚರ್ಮಕ್ಕೆ ಅತ್ಯುತ್ತಮವಾದ ಕ್ಲೆನ್ಸರ್ ಎಂದು ಪರಿಗಣಿಸಲಾಗುತ್ತದೆ. ಮತ್ತೊಂದೆಡೆ, ಆಂಟಿ-ಆಕ್ಸಿಡೆಂಟ್ ಗಳಿಂದ ಸಮೃದ್ಧವಾಗಿರುವ ನಿಂಬೆ ಚರ್ಮದ ಸತ್ತ ಕೋಶಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ನಿಂಬೆ ಕತ್ತರಿಸಿ ಅದರ ಮೇಲೆ 1 ಚಮಚ ಅಡಿಗೆ ಸೋಡಾವನ್ನು ಹಚ್ಚಿ ಮತ್ತು ಮೊಣಕೈ-ಮೊಣಕಾಲುಗಳ ಮೇಲೆ ಉಜ್ಜಿಕೊಳ್ಳಿ. 15 ನಿಮಿಷಗಳ ನಂತರ ಶುದ್ಧ ನೀರಿನಿಂದ ತೊಳೆಯಿರಿ.