DIY Hacks: ಅಡುಗೆ ಮನೆಯಲ್ಲಿರುವ ಈ ವಸ್ತುಗಳನ್ನು ಬಳಸಿ ನೀವೇ ಫೇಸ್ಪ್ಯಾಕ್ ಮಾಡ್ಬೋದು
DIY Skin Care Tips: ತ್ವಚೆಯ ಅಂದ ಹೆಚ್ಚಿಸಲು ಮಹಿಳೆಯರು ಹಲವಾರು ವಿಧಾನ ಬಳಸುತ್ತಾರೆ. ರಾಸಾಯನಿಕಯುಕ್ತ ಉತ್ಪನ್ನಗಳ ಬಳಕೆ ಹೆಚ್ಚಾಗಿದೆ. ಅದರ ಬದಲು ಮನೆಯಲ್ಲಿಯೇ ಕೆಲ ವಸ್ತುಗಳನ್ನು ಬಳಸಿ ನಿಮ್ಮ ಅಂದ ಹೆಚ್ಚಿಸಿಕೊಳ್ಳಲು ಸಹಾಯ ಮಾಡುತ್ತದೆ. ಆ ವಸ್ತುಗಳು ಯಾವುವು ಎಂಬುದು ಇಲ್ಲಿದೆ.
ಅಲೋವೆರಾ: ನೀವು ಯಾವುದೇ ತ್ವಚೆಯ ಆರೈಕೆಯ ಉತ್ಪನ್ನ ಖರೀದಿಸಿ ಅದರಲ್ಲಿ ಅಲೋವೆರಾ ಇದ್ದೇ ಇರುತ್ತದೆ. ನಿಮ್ಮ ಸೌಂದರ್ಯವನ್ನ ಕಾಪಾಡಲು ಇದು ಬಹಳ ಮುಖ್ಯವಾಗುತ್ತದೆ. ನೀವು ಸಹ ಇದನ್ನು ಮನೆಯಲ್ಲಿ ಫೇಸ್ಪ್ಯಾಕ್ ತಯಾರಿಸಲು ಬಳಸಬಹುದು.
2/ 8
ಅಲೋವೆರಾವು ಅಲೋಯಿನ್ ಮತ್ತು ಅಲೋಸಿನ್ ಅನ್ನು ಹೊಂದಿರುತ್ತದೆ, ಇದು ಪಿಗ್ಮೆಂಟೇಶನ್ ಸಮಸ್ಯೆಯಿಂದ ನಿಮಗೆ ಪರಿಹಾರ ನೀಡುತ್ತದೆ. ನೀವು ಇದನ್ನು ಕಡಲೆಹಿಟ್ಟಿನ ಜೊತೆ ಮಿಕ್ಸ್ ಮಾಡಿ ಹಚ್ಚಿ, ಸುಮಾರು 30 ನಿಮಿಷಗಳ ನಂತರ ತೊಳೆಯಿರಿ.
3/ 8
ಅರಿಶಿನ: ಅಲೋವೆರಾದಂತೆಯೇ ಅರಿಶಿನ ಸಹ ನಿಮ್ಮ ತ್ವಚೆಯ ಸರ್ವ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ. ಇದು ಆ್ಯಂಟಿ ಬ್ಯಾಕ್ಟೀರಿಯಲ್ ಗುಣಗಳನ್ನು ಹೊಂದಿದ್ದು, ಮೊಡವೆಗಳಿಗೆ ಮುಕ್ತಿ ನೀಡುತ್ತದೆ.
4/ 8
ಕೇವಲ ಅರಿಶಿನವನ್ನು ತೆಗೆದುಕೊಂಡು ಅದಕ್ಕೆ ನೀರು ಹಾಕಿ ಕಲಸಿ ಪೇಸ್ಟ್ ಮಾಡಿಕೊಳ್ಳಿ. ಆ ಪೇಸ್ಟ್ ಅನ್ನು ಸುಮ್ಮನೆ ಮುಖದ ಮೇಲೆ ಹಚ್ಚಿ ಬಿಡಿ. ರಾತ್ರಿಯಿಡಿ ಸಹ ಇದನ್ನು ಹಾಗೆಯೇ ಬಿಡಬಹುದು.
5/ 8
ಕಾಫಿ: ಕಾಫಿ ಪುಡಿ ಸಹ ನಿಮ್ಮ ತ್ವಚೆಯ ಅಂದ ಹೆಚ್ಚಿಸಲು ಸಹಾಯ ಮಾಡುತ್ತದೆ. ಇದರಲ್ಲಿರುವ ಆ್ಯಂಟಿ ಆಕ್ಸಿಡೆಂಟ್ ಹಾಗೂ ಕೆಫಿನ್ ಕಲೆಗಳನ್ನು ಹೋಗಲಾಡಿಸಿ, ತ್ವಚೆ ಹೊಳೆಯುವಂತೆ ಮಾಡುತ್ತದೆ.
6/ 8
ಸ್ವಲ್ಪ ಕಾಫಿ ಪುಡಿಗೆ ಅರ್ಧ ಚಮಚ ಜೇನುತುಪ್ಪ ಅಥವಾ ತುಪ್ಪ ಹಾಕಿ ಕಲಸಿ ಪೇಸ್ಟ್ ಮಾಡಿಕೊಳ್ಳಿ. ಈ ಪೇಸ್ಟ್ ಅನ್ನು ಕಲೆ ಇರುವ ಕಡೆ ಹಚ್ಚಿ ಒಣಗಲು ಬಿಡಿ. ಸುಮಾರು 45 ನಿಮಿಷಗಳ ನಂತರ ತೊಳೆಯಿರಿ.
7/ 8
ಯೋಗರ್ಟ್: ಹಲವಾರು ಜನರಿಗೆ ಈ ಯೋಗರ್ಟ್ ಸಹ ತ್ವಚೆಯ ಅಂದ ಹೆಚ್ಚಿಸಲು ಸಹಾಯ ಮಾಡುತ್ತದೆ ಎಂಬುದು ತಿಳಿದಿಲ್ಲ. ಆದರೆ ಈ ಯೋಗರ್ಟ್ ಸಹ ಪಿಗ್ಮೆಂಟೇಶನ್ ಮತ್ತು ಕಪ್ಪು ಕಲೆಗಳನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ.
8/ 8
ಕೇವಲ ಯೋಗರ್ಟ್ ಅನ್ನು ಇದಕ್ಕೆ ಬಳಸಬಹುದು. ಯೋಗರ್ಟ್ ಬದಲು ನೀವು ಮೊಸರನ್ನು ಸಹ ಬಳಕೆ ಮಾಡುವುದು ನಿಮಗೆ ಸಹಾಯ ಮಾಡುತ್ತದೆ. ಮೊಸರನ್ನು ಮುಖಕ್ಕೆ ಹಚ್ಚಿ 15 ರಿಂದ 20 ನಿಮಿಷದ ಒಳಗೆ ತೆಗೆಯಿರಿ.