ಉತ್ತಮ ಆರೋಗ್ಯಕ್ಕೆ ಮುಖ್ಯವಾದ ಪೋಷಕಾಂಶಗಳು ಮತ್ತು ನಾರಿನಂಶದಿಂದ ತುಂಬಿರುವಂತಹ ತರಕಾರಿಗಳನ್ನು ಸೇವಿಸುವುದು ತುಂಬಾನೇ ಮುಖ್ಯವಾಗುತ್ತದೆ. ಮನೆಗೆ ತಂದಂತಹ ತರಕಾರಿಗಳನ್ನು ದೀರ್ಘಕಾಲದವರೆಗೆ ತಾಜಾವಾಗಿಡುವುದು ನಮ್ಮಲ್ಲಿ ಅನೇಕರಿಗೆ ಸವಾಲಾಗಿದೆ, ವಿಶೇಷವಾಗಿ ನೀವು ಅವುಗಳನ್ನು ದೊಡ್ಡ ಪ್ರಮಾಣದಲ್ಲಿ ಖರೀದಿಸಿದರೆ. ತರಕಾರಿಗಳನ್ನು ಸ್ವಲ್ಪ ನೀವು ಮನೆಗೆ ತಂದು ಇಟ್ಟರೆ ಸಾಕು ಅವು ಎಷ್ಟು ವೇಗವಾಗಿ ತಾಜಾತನ ಕಳೆದುಕೊಳ್ಳುತ್ತವೆ ಅಂತ ನಮಗೆಲ್ಲರಿಗೂ ತಿಳಿದೇ ಇದೆ.
ತರಕಾರಿಗಳನ್ನು ಸಂರಕ್ಷಿಸಿಡಿ: ತರಕಾರಿಗಳನ್ನು ತಾಜಾವಾಗಿಡಲು ನೀವು ಅವುಗಳನ್ನು ಸಂರಕ್ಷಿಸಿಡುವುದು ಮುಖ್ಯ. ಜೋಳ, ಬಟಾಣಿ ಮತ್ತು ಹಸಿರು ಬೀನ್ಸ್ ನಂತಹ ತರಕಾರಿಗಳನ್ನು ಸಂಗ್ರಹಿಸಲು ನೀವು ಆಯ್ಕೆ ಮಾಡಬಹುದಾದ ಅತ್ಯುತ್ತಮ ಸಂರಕ್ಷಕ ತಂತ್ರಗಳಲ್ಲಿ ಘನೀಕರಣವು ಒಂದಾಗಿದೆ. ತರಕಾರಿಗಳನ್ನು ಹೆಪ್ಪುಗಟ್ಟಿಸುವ ಮೊದಲು ನೀರಿನಲ್ಲಿ ಹಾಕಿ ಕುದಿಸುವುದು ಒಳ್ಳೆಯದು. ಏಕೆಂದರೆ ಇದು ಅವುಗಳ ಬಣ್ಣ ಮತ್ತು ವಿನ್ಯಾಸವನ್ನು ಉಳಿಸಿಕೊಳ್ಳಲು ಸಹಾಯ ಮಾಡುತ್ತದೆ.