Kiss Day 2023: ಮುತ್ತು ಕೇವಲ ಪ್ರೀತಿಯ ಸಂಕೇತವಲ್ವ, ಆರೋಗ್ಯಕ್ಕೂ ಒಳ್ಳೆಯದಂತೆ!

Kiss Day 2023: ವ್ಯಾಲೆಂಟೈನ್ಸ್ ಡೇಗೂ ಒಂದು ದಿನದ ಹಿಂದೆ ಪ್ರಪಂಚದಾದ್ಯಂತ ಕಿಸ್ ಡೇ ಅನ್ನು ಆಚರಿಸಲಾಗುತ್ತದೆ. ಕಿಸ್ ಡೇಯಂದು, ಪ್ರೇಮಿಗಳು ಚುಂಬಿಸುವುದರ ಮೂಲಕ ಈ ಲೋಕದಿಂದಲೇ ತಮ್ಮನ್ನು ತಾವು ಮರೆತುಬಿಟ್ಟಿರುತ್ತಾರೆ. ವಿವಿಧ ಭಾವಗಳ ಜೊತೆಗೆ ಮುತ್ತು ಮನಸ್ಸನ್ನು ರೋಮಾಂಚನಗೊಳಿಸುವ ಪ್ರಣಯ ಭಾವಗಳೂ ಹೌದು. ಅದರ ಹೊರತಾಗಿ, ಚುಂಬನವು ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ.

First published:

  • 17

    Kiss Day 2023: ಮುತ್ತು ಕೇವಲ ಪ್ರೀತಿಯ ಸಂಕೇತವಲ್ವ, ಆರೋಗ್ಯಕ್ಕೂ ಒಳ್ಳೆಯದಂತೆ!

    ಯಾವುದೇ ಸಂಬಂಧವಾದರೂ ಪ್ರೀತಿಯನ್ನು ವ್ಯಕ್ತಪಡಿಸಲು ಚುಂಬನವು ಸುಲಭವಾದ ಮಾರ್ಗವಾಗಿದೆ. ನಮ್ಮ ಪ್ರೀತಿಪಾತ್ರರಿಗೆ ನಾವು ಅವರನ್ನು ಪ್ರೀತಿಸುತ್ತೇವೆ. ನಮಗೆ ಅವರು ತುಂಬಾ ಮುಖ್ಯ ಎಂದು ಹೇಳಲು ಇದು ಒಂದು ಸಿಹಿಯಾದ ವಿಧಾನವಾಗಿದೆ. Image Credits Gettyimages

    MORE
    GALLERIES

  • 27

    Kiss Day 2023: ಮುತ್ತು ಕೇವಲ ಪ್ರೀತಿಯ ಸಂಕೇತವಲ್ವ, ಆರೋಗ್ಯಕ್ಕೂ ಒಳ್ಳೆಯದಂತೆ!

    ಆದರೆ ಇದು ಕೇವಲ ಭಾವನೆಗಳು ಅಥವಾ ಅವರ ಅಭಿವ್ಯಕ್ತಿಯ ಬಗ್ಗೆ ವ್ಯಕ್ತಪಡಿಸುದಿಲ್ಲ. ಈ ರೀತಿಯ ಚುಂಬನಗಳನ್ನು ಮಾಡುವುದರಿಂದ ಮಾನಸಿಕವಾಗಿ ಮತ್ತು ದೈಹಿಕವಾಗಿ ನೀವು ಅನೇಕ ಪ್ರಯೋಜನಗಳನ್ನು ಪಡೆಯುತ್ತೀರಿ ಮತ್ತು ನಿಮ್ಮ ಬಾಂಧವ್ಯವೂ ಗಟ್ಟಿಯಾಗುತ್ತದೆ. Image Credits Gettyimages

    MORE
    GALLERIES

  • 37

    Kiss Day 2023: ಮುತ್ತು ಕೇವಲ ಪ್ರೀತಿಯ ಸಂಕೇತವಲ್ವ, ಆರೋಗ್ಯಕ್ಕೂ ಒಳ್ಳೆಯದಂತೆ!

    ಚುಂಬನವು ಸಂತೋಷದ ಹಾರ್ಮೋನ್ ಅನ್ನು ಹೆಚ್ಚಿಸುತ್ತದೆ. ಚುಂಬನ ಪ್ರಕ್ರಿಯೆಯು ಮೆದುಳಿನಲ್ಲಿರುವ ಆಕ್ಸಿಟೋಸಿನ್, ಡೋಪಮೈನ್ ಮತ್ತು ಸಿರೊಟೋನಿನ್ನಂತಹ ಕೆಲವು ರಾಸಾಯನಿಕಗಳ ಬಿಡುಗಡೆಯನ್ನು ಉತ್ತೇಜಿಸುತ್ತದೆ. ಇದು ಮೆದುಳಿನ ಆನಂದ ಕೇಂದ್ರಗಳನ್ನು ಉತ್ತೇಜಿಸುವ ಮೂಲಕ ನಿಮಗೆ ಒಳ್ಳೆಯದನ್ನು ನೀಡುತ್ತದೆ. ಇದು ನಿಮ್ಮ ಕಾರ್ಟಿಸೋಲ್ (ಒತ್ತಡದ ಹಾರ್ಮೋನ್) ಮಟ್ಟವನ್ನು ಕಡಿಮೆ ಮಾಡುತ್ತದೆ. Image Credits Gettyimages

    MORE
    GALLERIES

  • 47

    Kiss Day 2023: ಮುತ್ತು ಕೇವಲ ಪ್ರೀತಿಯ ಸಂಕೇತವಲ್ವ, ಆರೋಗ್ಯಕ್ಕೂ ಒಳ್ಳೆಯದಂತೆ!

    ನೀವು ಯಾರನ್ನಾದರೂ ಚುಂಬಿಸಿದಾಗ, ಆಕ್ಸಿಟೋಸಿನ್ ಬಿಡುಗಡೆಯಾಗುವುದರಿಂದ ನೀವು ಪ್ರೀತಿ ಮತ್ತು ಭಾವನೆಗಳನ್ನು ಅನುಭವಿಸುತ್ತೀರಿ. ಮೊದಲ ಚುಂಬನವು ಸಂಬಂಧಗಳಲ್ಲಿ ತೃಪ್ತಿಯನ್ನು ತರುತ್ತದೆ. ದೀರ್ಘಾವಧಿಯ ಸಂಬಂಧಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. Image Credits Gettyimages

    MORE
    GALLERIES

  • 57

    Kiss Day 2023: ಮುತ್ತು ಕೇವಲ ಪ್ರೀತಿಯ ಸಂಕೇತವಲ್ವ, ಆರೋಗ್ಯಕ್ಕೂ ಒಳ್ಳೆಯದಂತೆ!

    ಚುಂಬನವು ಕಾರ್ಟಿಸೋಲ್ ಮಟ್ಟವನ್ನು ಮತ್ತು ಒತ್ತಡವನ್ನು ಕಡಿಮೆ ಮಾಡುತ್ತದೆ. ಚುಂಬಿಸುವುದು, ತಬ್ಬಿಕೊಳ್ಳುವುದು ಅಥವಾ ಐ ಲವ್ ಯೂ ಹೇಳುವಂತಹ ಪ್ರೀತಿಯ ಇತರ ರೂಪಗಳು ಒತ್ತಡ ನಿರ್ವಹಣೆಗೆ ಸಂಬಂಧಿಸಿದ ಶಾರೀರಿಕ ಪ್ರಕ್ರಿಯೆಗಳ ಮೇಲೆ ಪರಿಣಾಮ ಬೀರುತ್ತವೆ. Image Credits Gettyimages

    MORE
    GALLERIES

  • 67

    Kiss Day 2023: ಮುತ್ತು ಕೇವಲ ಪ್ರೀತಿಯ ಸಂಕೇತವಲ್ವ, ಆರೋಗ್ಯಕ್ಕೂ ಒಳ್ಳೆಯದಂತೆ!

    ನಮ್ಮಲ್ಲಿ ಜನರು ಆಗಾಗ ಈ ಮಾತನ್ನು ಹೇಳುತ್ತಲೇ ಇರುತ್ತಾರೆ. ಮುತ್ತು ಇಲ್ಲದ ಬದುಕು ಜೀವನವೇ ಅಲ್ಲ. ಎಷ್ಟೇ ದಿನಚರಿ ಮತ್ತು ಯಾಂತ್ರಿಕವಾಗಿದ್ದರೂ ಆಗೊಮ್ಮೆ ಈಗೊಮ್ಮೆ ಮುತ್ತು ನೀಡುವುದರಿಂದ ಥ್ರಿಲ್ ಆಗಿರುತ್ತದೆ. ಏಕೆಂದರೆ ಕಿಸ್ ಪ್ರೀತಿಯನ್ನು ವ್ಯಕ್ತಪಡಿಸುವ ಪ್ರಮುಖ ಸಾಧನಗಳಲ್ಲಿ ಒಂದಾಗಿದೆ. Image Credits Gettyimages

    MORE
    GALLERIES

  • 77

    Kiss Day 2023: ಮುತ್ತು ಕೇವಲ ಪ್ರೀತಿಯ ಸಂಕೇತವಲ್ವ, ಆರೋಗ್ಯಕ್ಕೂ ಒಳ್ಳೆಯದಂತೆ!

    ಆದರೆ ಈ ಚುಂಬನಗಳಲ್ಲಿ ಹಲವು ವಿಧಗಳಿವೆ. ಕೆಲವರು ಫ್ಲೈಯಿಂಗ್ ಕಿಸ್ ಕೊಡುತ್ತಾರೆ. ಇನ್ನು ಕೆಲವರು ಕೆನ್ನೆಗೆ ಮುತ್ತಿಡುತ್ತಾರೆ. ಒಟ್ಟಾರೆ ಮುತ್ತನ್ನು ಹೇಗೆ ನೀಡಿದರೂ ಕೂಡ ಪ್ರೇಮಿಗಳ ನಡುವಿನ ಪ್ರೀತಿಯ ಬಾಂಧವ್ಯವನ್ನು ಹೆಚ್ಚಿಸುತ್ತದೆ. Image Credits Gettyimages

    MORE
    GALLERIES