Kidney Stones: ಕಿಡ್ನಿ ಕಲ್ಲುಗಳ ಸಮಸ್ಯೆ ನಿವಾರಿಸಲು ಮಾತ್ರೆಯೊಂದೇ ಅಲ್ಲ, ಈ ವಿಧಾನ ಪಾಲಿಸಿ

ಯಾರು ಬೇಕಾದ್ರೂ, ಯಾವಾಗ ಬೇಕಾದ್ರೂ, ಯಾವುದಾದ್ರೂ ಕಾಯಿಲೆಗೆ ತುತ್ತಾಗಬಹುದು. ವ್ಯಕ್ತಿಯು ದೀರ್ಘಕಾಲ ಒಂದೇ ರೀತಿಯ ಬದುಕು ಅನುಭವಿಸುವುದು ತುಂಬಾ ಕಷ್ಟ ಸಾಧ್ಯ. ವಿವಿಧ ಕಾಯಿಲೆಗಳು ಇತ್ತೀಚಿಗೆ ಜನರ ಜೀವ ಹಿಂಡುತ್ತಿವೆ. ಅದರಲ್ಲೂ ಸಾಮಾನ್ಯವಾಗಿ ಯಾರನ್ನೂ ಬೇಕಾದ್ರೂ ಕಿಡ್ನಿ ಕಲ್ಲುಗಳ ಸಮಸ್ಯೆ ಕಾಡಬಹುದು. ಮಹಿಳೆಯರಿಗಿಂತ ಹೆಚ್ಚು ಪುರುಷರಲ್ಲಿ ಕಿಡ್ನಿ ಕಲ್ಲುಗಳ ಸಮಸ್ಯೆ ಕಾಡುತ್ತದೆ. ಇದನ್ನು ತೊಡೆದು ಹಾಕುವ ಪದಾರ್ಥಗಳ ಬಗ್ಗೆ ನೋಡೋಣ.

First published:

  • 18

    Kidney Stones: ಕಿಡ್ನಿ ಕಲ್ಲುಗಳ ಸಮಸ್ಯೆ ನಿವಾರಿಸಲು ಮಾತ್ರೆಯೊಂದೇ ಅಲ್ಲ, ಈ ವಿಧಾನ ಪಾಲಿಸಿ

    ಮಹಿಳೆಯರಿಗಿಂತ ಹೆಚ್ಚಿನ ಪುರುಷರು ಮೂತ್ರಪಿಂಡದ ಕಲ್ಲುಗಳ ಅಪಾಯ ಹೊಂದಿರುತ್ತಾರೆ. ಸುಮಾರು ಅರ್ಧದಷ್ಟು ಜನರು 10 ರಿಂದ 15 ವರ್ಷಗಳಲ್ಲಿ ಮತ್ತೆ ಕಿಡ್ನಿ ಕಲ್ಲುಗಳ ಸಮಸ್ಯೆ ಹೊಂದಿರುತ್ತಾರೆ. ಇದು ನೋವಿನ ಸ್ಥಿತಿ. ಇದು ಸಾಮಾನ್ಯ ಜೀವನದ ಮೇಲೆ ತೀವ್ರವಾಗಿ ಪರಿಣಾಮ ಬೀರುತ್ತದೆ.

    MORE
    GALLERIES

  • 28

    Kidney Stones: ಕಿಡ್ನಿ ಕಲ್ಲುಗಳ ಸಮಸ್ಯೆ ನಿವಾರಿಸಲು ಮಾತ್ರೆಯೊಂದೇ ಅಲ್ಲ, ಈ ವಿಧಾನ ಪಾಲಿಸಿ

    ಮೂತ್ರಪಿಂಡದ ಕಲ್ಲುಗಳು ರೂಪುಗೊಳ್ಳಲು ಹಲವು ಕಾರಣಗಳಿವೆ. ಕ್ಯಾಲ್ಸಿಯಂ, ಆಕ್ಸಲೇಟ್ ಮತ್ತು ಯೂರಿಕ್ ಆಮ್ಲದಂತಹ ತ್ಯಾಜ್ಯ ಉತ್ಪನ್ನಗಳು ದೇಹದಿಂದ ಹೊರಗೆ ಹೋಗಲು ಸಾಧ್ಯವಾಗದಿದ್ದರೆ ಕಿಡ್ನಿ ಕಲ್ಲುಗಳು ಉಂಟಾಗುತ್ತವೆ. ಚಿಕ್ಕ ಹರಳುಗಳು ಕಾಲಾನಂತರದಲ್ಲಿ ದೊಡ್ಡದಾಗುತ್ತವೆ.

    MORE
    GALLERIES

  • 38

    Kidney Stones: ಕಿಡ್ನಿ ಕಲ್ಲುಗಳ ಸಮಸ್ಯೆ ನಿವಾರಿಸಲು ಮಾತ್ರೆಯೊಂದೇ ಅಲ್ಲ, ಈ ವಿಧಾನ ಪಾಲಿಸಿ

    ಸಣ್ಣ ಕಲ್ಲುಗಳು ಮೂತ್ರದ ಮೂಲಕ ಹೊರಗೆ ಹೋಗುತ್ತವೆ. ಕೆಲವೊಮ್ಮೆ ಇವು ಮೂತ್ರದ ಹಾದಿಯಲ್ಲಿ ಸಿಲುಕುತ್ತವೆ. ಆಗ ಮೂತ್ರ ವಿಸರ್ಜನೆ ವೇಳೆ ಸುಡುವ ಸಂವೇದನೆ ಉಂಟಾಗುತ್ತದೆ. ತೀವ್ರ ನೋವು, ಹೊಟ್ಟೆ ಮತ್ತು ಬೆನ್ನಿನ ನಡುವೆ ದೇಹದ ಒಂದು ಬದಿಯಲ್ಲಿ ತೀವ್ರವಾದ ನೋವು, ಮೂತ್ರದಲ್ಲಿ ರಕ್ತ, ವಾಕರಿಕೆ ಮತ್ತು ವಾಂತಿ ಆಗುತ್ತದೆ.

    MORE
    GALLERIES

  • 48

    Kidney Stones: ಕಿಡ್ನಿ ಕಲ್ಲುಗಳ ಸಮಸ್ಯೆ ನಿವಾರಿಸಲು ಮಾತ್ರೆಯೊಂದೇ ಅಲ್ಲ, ಈ ವಿಧಾನ ಪಾಲಿಸಿ

    ಮೂತ್ರಪಿಂಡದ ಕಲ್ಲು ಸಮಸ್ಯೆ ತಡೆಯಲು ಹಲವು ಔಷಧಿಗಳು ಮತ್ತು ಚಿಕಿತ್ಸೆಗಳು ಲಭ್ಯವಿದೆ. ಕಲ್ಲುಗಳ ಗಾತ್ರ ಮತ್ತು ಸಂಖ್ಯೆ ಅವಲಂಬಿಸಿ ಮೂತ್ರಪಿಂಡದ ಕಲ್ಲುಗಳು ಹಾದುಹೋಗಲು ಹಲವಾರು ವಾರಗಳು ಅಥವಾ ತಿಂಗಳು ಬೇಕಾಗುತ್ತದೆ. ಶಸ್ತ್ರಚಿಕಿತ್ಸೆ ಅಗತ್ಯವಾಗಬಹುದು. ಕೆಲವು ಸರಳ ಮನೆಮದ್ದುಗಳು ಮೂತ್ರಪಿಂಡದ ಕಲ್ಲು ಸಮಸ್ಯೆ ತೆಗೆದು ಹಾಕುತ್ತದೆ.

    MORE
    GALLERIES

  • 58

    Kidney Stones: ಕಿಡ್ನಿ ಕಲ್ಲುಗಳ ಸಮಸ್ಯೆ ನಿವಾರಿಸಲು ಮಾತ್ರೆಯೊಂದೇ ಅಲ್ಲ, ಈ ವಿಧಾನ ಪಾಲಿಸಿ

    ಮೂತ್ರಪಿಂಡದ ಕಲ್ಲು ಸಮಸ್ಯೆ ಹೊಡೆದೋಡಿಸಲು ಹೆಚ್ಚು ನೀರು ಕುಡಿಯಿರಿ. ದಿನಕ್ಕೆ 2 ರಿಂದ 2.5 ಲೀಟರ್ ಮೂತ್ರ ಹೊರ ಹೋದರೆ ಅದು ಮೂತ್ರಪಿಂಡದ ಕಲ್ಲುಗಳನ್ನು ಅಭಿವೃದ್ಧಿಪಡಿಸುವ ಸಾಧ್ಯತೆ ಕಡಿಮೆ. ಇಷ್ಟು ಮೂತ್ರ ವಿಸರ್ಜಿಸಲು ದಿನಕ್ಕೆ 2 ಲೀಟರ್ ನೀರನ್ನು ಸೇವಿಸಿ.

    MORE
    GALLERIES

  • 68

    Kidney Stones: ಕಿಡ್ನಿ ಕಲ್ಲುಗಳ ಸಮಸ್ಯೆ ನಿವಾರಿಸಲು ಮಾತ್ರೆಯೊಂದೇ ಅಲ್ಲ, ಈ ವಿಧಾನ ಪಾಲಿಸಿ

    ಕಿಡ್ನಿ ಸ್ಟೋನ್ಸ್ ನೈಸರ್ಗಿಕವಾಗಿ ಹೊರ ಹೋಗುವಂತೆ ಮಾಡಲು ಕ್ಯಾಲ್ಸಿಯಂ ಸೇವನೆ ಹೆಚ್ಚಿಸಿ. ಕ್ಯಾಲ್ಸಿಯಂ ಭರಿತ ವಸ್ತುಗಳ ಸೇವನೆಯು ಕರುಳಿನಲ್ಲಿ ಆಕ್ಸಲೇಟ್ ಅನ್ನು ಬಂಧಿಸುವ ಮೂಲಕ ಕೆಲಸ ಮಾಡುತ್ತವೆ. ಅದನ್ನು ಹೆಚ್ಚು ಹೀರಿಕೊಳ್ಳಲು ಬಿಡಲ್ಲ. ಕಿಡ್ನಿ ಸ್ಟೋನ್ಸ್ ಸಮಸ್ಯೆ ಪರಿಹರಿಸಲು ನಿಂಬೆ ರಸ ಸೇವಿಸಿ. ನಿಂಬೆಯಲ್ಲಿರುವ ಸಿಟ್ರಿಕ್ ಆಮ್ಲವು ಕ್ಯಾಲ್ಸಿಯಂ ಅನ್ನು ಬಂಧಿಸುತ್ತದೆ. ಕಲ್ಲಿನ ರಚನೆ ತಡೆಯುತ್ತದೆ.

    MORE
    GALLERIES

  • 78

    Kidney Stones: ಕಿಡ್ನಿ ಕಲ್ಲುಗಳ ಸಮಸ್ಯೆ ನಿವಾರಿಸಲು ಮಾತ್ರೆಯೊಂದೇ ಅಲ್ಲ, ಈ ವಿಧಾನ ಪಾಲಿಸಿ

    ಸೋಡಿಯಂ ಸೇವನೆ ಕಡಿಮೆ ಮಾಡಿ. ಇಲ್ಲದಿದ್ದರೆ ಸೋಡಿಯಂ ಸಮೃದ್ಧ ಆಹಾರ ಪದಾರ್ಥಗಳು ಮೂತ್ರಪಿಂಡದ ಕಲ್ಲುಗಳನ್ನು ರೂಪಿಸುವ ಸಾಧ್ಯತೆ ಹೆಚ್ಚು. ಸೋಡಿಯಂ ನಿಮ್ಮ ಮೂತ್ರದಲ್ಲಿ ಕ್ಯಾಲ್ಸಿಯಂ ಪ್ರಮಾಣ ಹೆಚ್ಚಿಸುತ್ತದೆ. ನೀವು ದಿನಕ್ಕೆ 2,300 ಮಿಲಿಗ್ರಾಂಗಳಷ್ಟು ಸೋಡಿಯಂ ಸೇವಿಸಬೇಡಿ.

    MORE
    GALLERIES

  • 88

    Kidney Stones: ಕಿಡ್ನಿ ಕಲ್ಲುಗಳ ಸಮಸ್ಯೆ ನಿವಾರಿಸಲು ಮಾತ್ರೆಯೊಂದೇ ಅಲ್ಲ, ಈ ವಿಧಾನ ಪಾಲಿಸಿ

    ಪ್ರಾಣಿ ಪ್ರೋಟೀನ್ ಸೇವನೆ ತಪ್ಪಿಸಿ. ಇದು ಕಿಡ್ನಿ ಸ್ಟೋನ್ಸ್ ಸಮಸ್ಯೆ ಕಡಿಮೆ ಮಾಡುತ್ತದೆ. ಮಾಂಸ, ಮೊಟ್ಟೆ ಮತ್ತು ಸಮುದ್ರಾಹಾರವು ಪ್ರಾಣಿ ಪ್ರೋಟೀನ್ ಆಗಿದೆ. ಆದರೆ ನಿವು ಮಧುಮೇಹ ರೋಗಿಗಳು ಆಗಿದ್ದರೆ, ಈ ಪದಾರ್ಥ ಸೇವನೆ ಕಡಿಮೆ ಮಾಡಿ.

    MORE
    GALLERIES