Kidney problems: ಕಿಡ್ನಿ ಸಮಸ್ಯೆ(Kidney Problem) ಇತ್ತೀಚೆಗೆ ಹೆಚ್ಚಿನ ಜನರನ್ನು ಕಾಡುತ್ತಿದೆ. ಅದಕ್ಕೆ ಕಾರಣ ಅವರ ಲೈಫ್ಸ್ಟೈಲ್(Lifestyle) ಎಂದರೆ ತಪ್ಪಿಲ್ಲ. ಮುಖ್ಯವಾಗಿ ಕಿಡ್ನಿಗಳ ಆರೋಗ್ಯ(Health) ಕಾಪಾಡಿಕೊಳ್ಳಬೇಕೆಂದರೆ ಹೆಚ್ಚಾಗಿ ನೀರು(Water) ಕುಡಿಯಬೇಕು. ಉಪ್ಪಿನ ಅಂಶ(Salt) ಕಡಿಮೆ ಸೇವಿಸಬೇಕು. ಜೊತೆಗೆ ನಾವು ತಿನ್ನುವ ಆಹಾರದಲ್ಲಿ ಫೈಬರ್(Fiber) ಅಂಶ ಹೆಚ್ಚಾಗಿರಬೇಕು.
ಈ ಸಮಸ್ಯೆಯನ್ನು ಹೋಗಲಾಡಿಸಲು, ನಿಮ್ಮ ಮೂತ್ರಪಿಂಡಗಳನ್ನು ಆರೋಗ್ಯವಾಗಿಡಲು ಅನುಸರಿಸಬೇಕಾದ ಸಲಹೆಗಳು ಇಲ್ಲಿವೆ ನೋಡಿ. ಕಿಡ್ನಿ ಸಮಸ್ಯೆಯನ್ನು ಹೋಗಲಾಡಿಸಲು ಹೆಚ್ಚು ನೀರು ಕುಡಿಯಬೇಕು. ಉಪ್ಪಿನ ಸೇವನೆಯನ್ನು ಕಡಿಮೆ ಮಾಡಬೇಕು. ನಿಮ್ಮ ಆಹಾರದಲ್ಲಿ ಸಾಕಷ್ಟು ಫೈಬರ್ ಇದೆ ಎಂದು ಖಚಿತಪಡಿಸಿಕೊಳ್ಳಿ. ಜಂಕ್ ಫುಡ್ ಅನ್ನು ಆದಷ್ಟು ತಪ್ಪಿಸಿ. ಮೂತ್ರಪಿಂಡದ ತೊಂದರೆ ಇರುವವರು ಭಾರೀ ವ್ಯಾಯಾಮವನ್ನು ತಪ್ಪಿಸಬೇಕು. ಮೇಲಾಗಿ ಇಂತಹವರು ಮಾದಕ ವಸ್ತುಗಳ ಸೇವನೆಯನ್ನು ಆದಷ್ಟು ಕಡಿಮೆ ಮಾಡಬೇಕು. ಮಧುಮೇಹ ಮತ್ತು ಬಿಪಿ ನಿಯಂತ್ರಣದಲ್ಲಿಟ್ಟುಕೊಳ್ಳಬೇಕು.