ಧೂಮಪಾನ ಮಾಡುವ ಅಭ್ಯಾಸ ಇದ್ದವರಿಗೆ ಹೃದಯದ ತೊಂದರೆ ಕಟ್ಟಿಟ್ಟ ಬುತ್ತಿ. ಏಕೆಂದರೆ ಸಿಗರೇಟ್ ತನ್ನಲ್ಲಿ ರಾಸಾಯನಿಕ ಅಂಶಗಳನ್ನು ಒಳಗೊಂಡಿರುತ್ತದೆ. ಇದು ರಕ್ತನಾಳಗಳನ್ನು ಬ್ಲಾಕ್ ಮಾಡುತ್ತದೆ. ಇದರಿಂದ ಸರಿಯಾಗಿ ರಕ್ತ ಸಂಚಾರ ಆಗುವುದಿಲ್ಲ. ಯಾವುದೇ ಸಂದರ್ಭ ದಲ್ಲಿ ಹೃದಯದ ಮೇಲೆ ಅತಿ ಹೆಚ್ಚಿನ ಒತ್ತಡ ಉಂಟಾಗಿ ಹೃದಯಾಘಾತ ಆಗಬಹುದು ಮತ್ತು ಇದ್ದಕ್ಕಿ ದ್ದಂತೆ ಸಾವು ಸಂಭವಿಸಬಹುದು.