Taj Mahal: ನೆರೆ ರಾಷ್ಟ್ರದಲ್ಲಿದೆ ಬಡವರ 'ತಾಜ್ ಮಹಲ್'..!

Taj Mahal: ಈ ಕಟ್ಟಡವನ್ನು ಬಡವರ ತಾಜ್​ ಮಹಲ್ ಎಂದು ಕರೆಯಲಾಗುತ್ತದೆ. ಬಾಂಗ್ಲಾದೇಶಿಗರು ಭಾರತದ ತಾಜ್​ ಮಹಲ್​ ಅನ್ನು ವೀಕ್ಷಿಸಲು ಬಯಸುತ್ತಾರೆ.

First published:

  • 15

    Taj Mahal: ನೆರೆ ರಾಷ್ಟ್ರದಲ್ಲಿದೆ ಬಡವರ 'ತಾಜ್ ಮಹಲ್'..!

    ಜಗತ್ತಿನ ಅದ್ಭುತಗಳಲ್ಲಿ ಒಂದಾದ ತಾಜ್​ಮಹಲ್ ಐತಿಹಾಸಿಕ ಸ್ಮಾರಕ. ದೇಶ ವಿದೇಶಗಳ ಪ್ರವಾಸಿಗರನ್ನು ಸೆಳೆಯುವ ಭಾರತದ ಈ ಕಟ್ಟಡವು ಪ್ರೇಮದ ಸಂಕೇತ ಎಂದು ಖ್ಯಾತಿ ಪಡೆದಿದೆ. ಆದರೆ ಇದೇ ಕಟ್ಟಡವನ್ನು ಹೋಲುವ ಮತ್ತೊಂದು ಪ್ರೇಮ ಸೌಧ ನಮ್ಮ ನೆರೆ ರಾಷ್ಟ್ರದಲ್ಲಿದೆ ಎಂದರೆ ನಂಬುತ್ತೀರಾ?

    MORE
    GALLERIES

  • 25

    Taj Mahal: ನೆರೆ ರಾಷ್ಟ್ರದಲ್ಲಿದೆ ಬಡವರ 'ತಾಜ್ ಮಹಲ್'..!

    ಹೌದು, ಬಾಂಗ್ಲಾದೇಶದಲ್ಲಿ ತಾಜ್ ಮಹಲನ್ನು ಹೋಲುವ ಕಟ್ಟಡವೊಂದನ್ನು ನಿರ್ಮಿಸಲಾಗಿದೆ. ಈ ಕಟ್ಟಡವು ಭಾರತದ ಐತಿಹಾಸಿಕ ಸ್ಮಾರಕದ ನಕಲಿ ರೂಪದಂತಿದೆ.

    MORE
    GALLERIES

  • 35

    Taj Mahal: ನೆರೆ ರಾಷ್ಟ್ರದಲ್ಲಿದೆ ಬಡವರ 'ತಾಜ್ ಮಹಲ್'..!

    2008 ರಲ್ಲಿ ಬಾಂಗ್ಲಾ ಚಿತ್ರ ನಿರ್ಮಾಪಕ ಅಹ್ಸುನುಲ್ಲಾ ಮೊನಿ , 56 ಮಿಲಿಯನ್ ಡಾಲರ್​ ಅನ್ನು ಖರ್ಚು ಮಾಡಿ ಈ ಕಟ್ಟಡವನ್ನು ನಿರ್ಮಿಸಿದ್ದಾರೆ.  ಈ ಸುಂದರ ಕಟ್ಟಡ ಮತ್ತು ಉದ್ಯಾನವನದ ಕೆಲಸ ಕಾರ್ಯಗಳನ್ನು ಪೂರ್ಣಗೊಳಿಸಲು ಐದು ವರ್ಷಗಳನ್ನು ತೆಗೆದುಕೊಳ್ಳಲಾಗಿದೆ.

    MORE
    GALLERIES

  • 45

    Taj Mahal: ನೆರೆ ರಾಷ್ಟ್ರದಲ್ಲಿದೆ ಬಡವರ 'ತಾಜ್ ಮಹಲ್'..!

    ಅಷ್ಟೇ ಅಲ್ಲದೆ ಈ ಕಟ್ಟಡವನ್ನು ಬಡವರ ತಾಜ್​ ಮಹಲ್ ಎಂದು ಕರೆಯಲಾಗುತ್ತದೆ. ಬಾಂಗ್ಲಾದೇಶಿಗರು ಭಾರತದ ತಾಜ್​ ಮಹಲ್​ ಅನ್ನು ವೀಕ್ಷಿಸಲು ಬಯಸುತ್ತಾರೆ. ಆದರೆ ಹಣದ ಕೊರತೆಯಿಂದ ಇಲ್ಲಿನ ಬಡವರು ಪ್ರೇಮ ಸೌಧವನ್ನು ನೋಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಅದರ ಪ್ರತಿರೂಪವನ್ನು ನಾನು ಬಾಂಗ್ಲಾದಲ್ಲಿ ನಿರ್ಮಿಸಿದ್ದೇನೆ ಎನ್ನುತ್ತಾರೆ ನಿರ್ಮಾಪಕ ಅಹ್ಸುನುಲ್ಲಾ ಮೊನಿ.

    MORE
    GALLERIES

  • 55

    Taj Mahal: ನೆರೆ ರಾಷ್ಟ್ರದಲ್ಲಿದೆ ಬಡವರ 'ತಾಜ್ ಮಹಲ್'..!

    ಬ್ಲಾಂಗ್ಲಾದಲ್ಲಿರುವ ಈ ಕಟ್ಟಡದ ನಿರ್ಮಾಣಕ್ಕಾಗಿ ಇಟಲಿಯಿಂದ ವಿಶೇಷವಾದ ಮಾರ್ಬಲ್​ ಮತ್ತು ಗ್ರಾನೈಟ್​ ಕಲ್ಲುಗಳನ್ನು ತರಿಸಲಾಗಿದೆ. ಹಾಗೆಯೇ ಇದರ ಗುಮ್ಮಟದ ವಿನ್ಯಾಸಕ್ಕಾಗಿ ಬೆಲ್ಜಿಯಂ ದೇಶದಿಂದ 160.ಕೆ.ಜಿಯ ಕಂಚನ್ನು ಆಮದು ಮಾಡಿಕೊಳ್ಳಲಾಗಿದೆ. ಸದ್ಯ ಈ ಕಟ್ಟಡವು ಕೂಡ ತಾಜ್  ಮಹಲ್​ನಂತೆ ಪ್ರವಾಸಿಗರ ನೆಚ್ಚಿನ ತಾಣವಾಗಿ ಮಾರ್ಪಟ್ಟಿರುವುದು ವಿಶೇಷ.

    MORE
    GALLERIES