Health Care: ಕಲ್ಮೇಘ ತಿನ್ನೋದ್ರಿಂದ ದೇಹಕ್ಕೆ ಇಷ್ಟೆಲ್ಲಾ ಪ್ರಯೋಜನ ಸಿಗುತ್ತೆ!

ಆಯುರ್ವೇದವು ಪ್ರಾಚೀನ ವೈದ್ಯಕೀಯ ಪದ್ಧತಿ. ಇದರಲ್ಲಿ ಹಲವಾರು ಗಿಡಮೂಲಿಕೆಗಳನ್ನು ಔಷಧಿಯಾಗಿ ಬಳಕೆ ಮಾಡಲಾಗುತ್ತದೆ. ಅಧಿಕ ಮರ, ಸಸ್ಯ ಮತ್ತು ಗಿಡಗಳನ್ನು ಔಷಧಿಗೆ ಬಳಕೆ ಮಡಲಾಗುತ್ತದೆ. ಇವುಗಳ ಬಗ್ಗೆ ಹೆಚ್ಚಿನ ಜನರಿಗೆ ಗೊತ್ತಿಲ್ಲ. ಅಂತಹ ಮೂಲಿಕೆಗಳಲ್ಲಿ ಕಲ್ಮೇಘ ಸಹ ಒಂದಾಗಿದೆ. ಇದು ಯಾವೆಲ್ಲಾ ಆರೋಗ್ಯ ಪ್ರಯೋಜನ ನೀಡುತ್ತದೆ ಎಂದು ನೋಡೋಣ.

First published:

  • 18

    Health Care: ಕಲ್ಮೇಘ ತಿನ್ನೋದ್ರಿಂದ ದೇಹಕ್ಕೆ ಇಷ್ಟೆಲ್ಲಾ ಪ್ರಯೋಜನ ಸಿಗುತ್ತೆ!

    ಕಲ್ಮೇಘ ಸಸ್ಯವು ಹೆಚ್ಚಾಗಿ ಭಾರತದ ಉತ್ತರ ಮತ್ತು ಪಶ್ಚಿಮ ಬಂಗಾಳದಲ್ಲಿ ಹೆಚ್ಚು ಸಿಗುತ್ತದೆ. ಇದು ರುಚಿಯಲ್ಲಿ ಕಹಿ. ಕಲ್ಮೇಘವು ಉತ್ತಮ ಹಾಗೂ ಔಷಧೀಯ ಗುಣಲಕ್ಷಣ ಹೊಂದಿದೆ. ಅನೇಕ ಕಡೆಗಳಲ್ಲಿ ಕಲ್ಮೇಘವನ್ನು ಚಿರಾಯತ ಎಂದು ಕರೆಯುತ್ತಾರೆ. ಕಲ್ಮೇಘಕ್ಕೆ ಇನ್ನೊಂದು ಹೆಸರು ಕಹಿಗಳ ರಾಜ ಆಗಿದೆ.

    MORE
    GALLERIES

  • 28

    Health Care: ಕಲ್ಮೇಘ ತಿನ್ನೋದ್ರಿಂದ ದೇಹಕ್ಕೆ ಇಷ್ಟೆಲ್ಲಾ ಪ್ರಯೋಜನ ಸಿಗುತ್ತೆ!

    ಕಲ್ಮೇಘ ಮೂಲಿಕೆಯನ್ನು ಶೀತ ಸಮಸ್ಯೆ ನಿವಾರಣೆಗೆ ಬಳಕೆ ಮಾಡ್ತಾರೆ. ಇದು ಸಾಮಾನ್ಯ ಶೀತ ಮತ್ತು ಜ್ವರ ನಿವಾರಣೆಗೆ ಸಹಾಯ ಮಾಡುತ್ತದೆ. ಈ ಮೂಲಿಕೆ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಜೊತೆಗೆ ಕಲ್ಮೇಘ ಗಿಡಮೂಲಿಕೆಯು ಹೊಟ್ಟೆಗೆ ಸಂಬಂಧಿಸಿದ ಅನೇಕ ಕಾಯಿಲೆ ನಿವಾರಣೆಗೆ ಪ್ರಯೋಜನಕಾರಿ ಆಗಿದೆ.

    MORE
    GALLERIES

  • 38

    Health Care: ಕಲ್ಮೇಘ ತಿನ್ನೋದ್ರಿಂದ ದೇಹಕ್ಕೆ ಇಷ್ಟೆಲ್ಲಾ ಪ್ರಯೋಜನ ಸಿಗುತ್ತೆ!

    ಕಲ್ಮೇಘ ಬಳಸುವುದು ಸುಲಭ. ನೀರಿನಲ್ಲಿ ಕುದಿಸಿ ಕುಡಿಯಬಹುದು. ಕಲ್ಮೇಘ ಎಲೆಗಳನ್ನು ತೊಳೆದು ಸ್ವಲ್ಪ ಸಮಯ ನೀರಿನಲ್ಲಿ ನೆನೆಸಿಟ್ಟು, ನಂತರ ಕುದಿಸಿ. ನೀರು ಅರ್ಧ ಗ್ಲಾಸ್ ಬರುವವರೆಗೆ ಕುಸಿದಿ ನಂತರ ಶೋಧಿಸಿ ಕುಡಿಯಲಾಗುತ್ತದೆ.

    MORE
    GALLERIES

  • 48

    Health Care: ಕಲ್ಮೇಘ ತಿನ್ನೋದ್ರಿಂದ ದೇಹಕ್ಕೆ ಇಷ್ಟೆಲ್ಲಾ ಪ್ರಯೋಜನ ಸಿಗುತ್ತೆ!

    ಕಲ್ಮೇಘ ನಿಯಂತ್ರಣಕ್ಕೆ ಸಹಕಾರಿಯಾಗಿದೆ. ಮಧುಮೇಹಿಗಳು ಪ್ರತಿದಿನ ಬೆಳಿಗ್ಗೆ ಕಲ್ಮೇಘ ನೀರು ಕುಡಿಯುವಂತೆ ಸಲಹೆ ನೀಡಲಾಗುತ್ತದೆ. ಕಲ್ಮೇಘದ ಒಣಗಿದ ಎಲೆಗಳ ಕಷಾಯವು ಸಕ್ಕರೆ ರೋಗಿಗೆ ಹೆಚ್ಚು ಪ್ರಯೋಜನಕಾರಿ. ಕಲ್ಮೇಘ ದೇಹದಲ್ಲಿ ಇನ್ಸುಲಿನ್ ಪ್ರಮಾಣ ಹೆಚ್ಚಿಸಲು ಸಹಾಯ ಮಾಡುತ್ತದೆ.

    MORE
    GALLERIES

  • 58

    Health Care: ಕಲ್ಮೇಘ ತಿನ್ನೋದ್ರಿಂದ ದೇಹಕ್ಕೆ ಇಷ್ಟೆಲ್ಲಾ ಪ್ರಯೋಜನ ಸಿಗುತ್ತೆ!

    ಒತ್ತಡ ನಿವಾರಣೆಗೆ ಮತ್ತು ಮೆದುಳನ್ನು ಶಕ್ತಿಯುತಗೊಳಿಸಲು ಕಲ್ಮೇಘ ಮೂಲಿಕೆಯ ಕಷಾಯ ಸೇವನೆ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಕಲ್ಮೇಘ ಮೂಲಿಕೆಯಲ್ಲಿರುವ ಸ್ವಾರ್ಥಿಯಾ ಮಾರ್ಟಿನ್ ಎಂಬ ಅಂಶವು ಒತ್ತಡ ಕಡಿಮೆ ಮಾಡಲು ಸಹಕಾರಿ. ಜೊತೆಗೆ ಇದು ಮೆದುಳಿನ ಆರೋಗ್ಯಕ್ಕೆ ಸಹಕಾರಿ. ಮತ್ತು ಪರಿಹಾರ ನೀಡುತ್ತದೆ.

    MORE
    GALLERIES

  • 68

    Health Care: ಕಲ್ಮೇಘ ತಿನ್ನೋದ್ರಿಂದ ದೇಹಕ್ಕೆ ಇಷ್ಟೆಲ್ಲಾ ಪ್ರಯೋಜನ ಸಿಗುತ್ತೆ!

    ಯಕೃತ್ತಿನ ಕಾಯಿಲೆ ನಿವಾರಣೆಗೆ ಮತ್ತು ಯಕೃತ್ತು ಆರೋಗ್ಯದಿಂದ ಇರಲು ಕಲ್ಮೇಘ ಸೇವನೆ ಸಹಾಯ ಮಾಡುತ್ತದೆ. ಕಲ್ಮೇಘ ಮೂಲಿಕೆಯು ಯಕೃತ್ತನ್ನು ನಿರ್ವಿಷಗೊಳಿಸುವ ಸಾಮರ್ಥ್ಯ ಹೊಂದಿದೆ. ಇದರಲ್ಲಿರುವ ಹೆಪಟೊಪ್ರೊಟೆಕ್ಟಿವ್ ಮತ್ತು ಹೆಪಟೊಸ್ಟಿಮ್ಯುಲೇಟರಿ ಅಂಶಗಳು ಕಾಮಾಲೆ ಸಮಸ್ಯೆ ನಿವಾರಣೆಗೆ ಸಹಕಾರಿ. ಪಿತ್ತರಸ ನಿಯಂತ್ರಿಸಿ, ಯಕೃತ್ತಿನ ಕೆಲಸವನ್ನು ಸುಗಮಗೊಳಿಸುತ್ತದೆ.

    MORE
    GALLERIES

  • 78

    Health Care: ಕಲ್ಮೇಘ ತಿನ್ನೋದ್ರಿಂದ ದೇಹಕ್ಕೆ ಇಷ್ಟೆಲ್ಲಾ ಪ್ರಯೋಜನ ಸಿಗುತ್ತೆ!

    ಇನ್ನು ಕಲ್ಮೇಘ ನೀರಿನಿಂದ ಮುಖ ತೊಳೆದರೆ ಮೊಡವೆ ಸಮಸ್ಯೆ ಮಾಯವಾಗುತ್ತದೆ. ಕಲ್ಮೇಘ ಚರ್ಮದ ಆರೈಕೆಗೆ ಸಹ ಪ್ರಯೋಜನಕಾರಿ ಆಗಿದೆ. ಇದು ಚರ್ಮದ ಉರಿ, ಶುಷ್ಕತೆ ಅಥವಾ ತುರಿಕೆ ಸಮಸ್ಯೆ ನಿವಾರಣೆಗೆ ಸಹಾಯ ಮಾಡುತ್ತದೆ. ಕಲ್ಮೇಘ ರಕ್ತ ಶುದ್ಧಿಕಾರಕ ಗುಣ ಹೊಂದಿದೆ. ಚರ್ಮದ ಸಮಸ್ಯೆ ಕಡಿಮೆ ಮಾಡುತ್ತದೆ.

    MORE
    GALLERIES

  • 88

    Health Care: ಕಲ್ಮೇಘ ತಿನ್ನೋದ್ರಿಂದ ದೇಹಕ್ಕೆ ಇಷ್ಟೆಲ್ಲಾ ಪ್ರಯೋಜನ ಸಿಗುತ್ತೆ!

    ತೂಕ ನಷ್ಟಕ್ಕೆ ಕಲ್ಮೇಘ ಸೇವನೆ ಸಹಕಾರಿ. ಕಲ್ಮೇಘ ನೀರು ಕುಡಿದರೆ ಚಯಾಪಚಯ ದರ ಹೆಚ್ಚುತ್ತದೆ. ಚಯಾಪಚಯ ಸುಧಾರಣೆಯು ತೂಕ ನಷ್ಟಕ್ಕೆ ಸಹಕಾರಿ. ವೇಗವಾದ ಚಯಾಪಚಯ ಕ್ರಿಯೆಯು ಫ್ಯಾಟ್ ಬರ್ನ್ ಮಾಡುತ್ತದೆ. ಅಸಿಡಿಟಿ, ಅಜೀರ್ಣ, ಮಲಬದ್ಧತೆ ಸಮಸ್ಯೆ ನಿವಾರಿಸುತ್ತದೆ.

    MORE
    GALLERIES