ಸಾಯೋದ್ರೊಳಗೆ ಒಮ್ಮೆ ನೋಡು ಜೋಗಾ ಗುಂಡಿ…. ಜೋಗ ಜಲಪಾತದ ವೈಭವ ಸವಿಯಿರಿಯೊಮ್ಮೆ
ಜೀವನಚೈತ್ರ ಚಿತ್ರದಲ್ಲಿ ಡಾ| ರಾಜಕುಮಾರ್ ಹಾಡಿರುವ “ಮಾನವನಾಗಿ ಹುಟ್ಟಿದ್ಮೇಲೆ ಏನೇನ್ ಕಂಡಿ…” ಹಾಡಿನಲ್ಲಿ “ಸಾಯೋತನಕ ಸಂಸಾರದೊಳಗೆ ಗಂಡಾಗುಂಡಿ, ಹೇರಿಕೊಂಡು ಹೋಗೋದಿಲ್ಲ ಸತ್ತಾಗ್ ಬಂಡಿ…. ಇರೋದ್ರೊಳಗೆ ಒಮ್ಮೆ ನೋಡು ಜೋಗಾದ್ ಗುಂಡಿ” ಎಂಬ ಸಾಲು ಬರುತ್ತವೆ. ಮೂಗೂರು ಮಲ್ಲಪ್ಪ ಬರೆದಿರುವ ಈ ಹಾಡು ಜೋಗ ಜಲಪಾತದ ಭವ್ಯತೆಯನ್ನ ಸಾರುತ್ತದೆ. ವಿಶ್ವದ ಅತ್ಯಂತ ನಯನಮನೋಹರ ಜಲಪಾತಗಳಲ್ಲಿ ಜೋಗ ಕೂಡ ಒಂದು. ಈ ಬಾರಿ ಮುಂಗಾರು ಮಳೆ ಭರ್ಜರಿಯಾಗಿ ಮತ್ತು ಭರಪೂರವಾಗಿ ಹುಯ್ದಿರುವುದರಿಂದ ಜೋಗದ ವೈಭವ ನೋಡಲು ಎರಡು ಕಣ್ಣು ಖಂಡಿತ ಸಾಲದು. ಇಂಥ ಜೋಗದ ಜಲಧಾರೆಯ ದೃಶ್ಯವನ್ನ ಡಿಪಿ ಸತೀಶ್ ಮತ್ತು ಅಶೋಕ್ ಹೆಗಡೆ ತಮ್ಮ ಕ್ಯಾಮೆರಾಗಳಲ್ಲಿ ಸೆರೆ ಹಿಡಿದಿದ್ದಾರೆ.
ಶಿವಮೊಗ್ಗದ ಜೋಗವು ಭಾರತದ ಎರಡನೇ ಹಾಗೂ ವಿಶ್ವದ ಐದನೇ ಅತೀ ಎತ್ತರದ ಜಲಪಾತವಾಗಿದೆ. ಇಲ್ಲಿರುವ ಜಲಪಾತ 900 ಅಡಿ ಎತ್ತರದ್ದಾಗಿದೆ.
2/ 10
ಶರಾವತಿ ಜಲಾಯನ ಪ್ರದೇಶದಲ್ಲಿ ಭರ್ಜರಿಯಾದ ಹಿನ್ನೆಲೆಯಲ್ಲಿ ಜೋಗದಲ್ಲಿ ಜಲಧಾರೆ ಧುಮ್ಮಿಕ್ಕಿ ಹರಿಯುತ್ತಿದೆ.
3/ 10
ಬೆಂಗಳೂರಿನಿಂದ 400 ಕಿಮೀ ದೂರದಲ್ಲಿರುವ ಜೋಗಕ್ಕೆ ದೇಶ ವಿದೇಶಗಳಿಂದಲೂ ಪ್ರವಾಸಿಗರು ತಮ್ಮ ಕಣ್ತುಂಬಿಸಿಕೊಳ್ಳಲು ಬರುತ್ತಾರೆ.
4/ 10
ಕಡಿದಾದ ಬಂಡೆ ಕಣಿವೆಗಳ ಮೂಲಕ ಶರಾವತಿ ಹರಿಯುವುದನ್ನು ನೋಡುವುದೇ ಒಂದು ಸೊಬಗು.
5/ 10
ಜೋಗದಲ್ಲಿ ರಾಜ, ರಾಣಿ, ರೋರರ್, ರಾಕೆಟ್ ಎಂಬ ನಾಲ್ಕು ಜಲಪಾತಗಳಿವೆ.
6/ 10
ಸಾಹಸಿಗರ ನೆಚ್ಚಿನ ತಾಣಗಳಲ್ಲಿ ಜೋಗ ಜಲಪಾತವೂ ಒಂದು. ನಿಸರ್ಗಕ್ಕೆ ಅತ್ಯಂತ ಆಪ್ತವಾಗಿರುವ ಸ್ಥಳಗಳಲ್ಲಿ ಇದೂ ಒಂದು.
7/ 10
ಜೋಗದಿಂದ 10 ಕಿಮೀ ಹಿಂದಕ್ಕಿರುವ ಲಿಂಗನಮಕ್ಕಿಯಲ್ಲಿ ಅಣೆಕಟ್ಟು ನಿರ್ಮಾಣವಾಗಿರುವುದರಿಂದ ಬೇಸಿಗೆಯಲ್ಲಿ ಜೋಗಕ್ಕೆ ನೀರಿನ ಪ್ರವಾಹ ಬರುವುದು ಕಡಿಮೆಯೇ. ಹೀಗಾಗಿ ಬೇಸಿಗೆಯಲ್ಲಿ ನೀರಿಲ್ಲದೇ ಜೋಗ ಭಣಗುಟ್ಟುತ್ತದೆ.
8/ 10
ಬ್ರಿಟನ್ನ ವೈಸ್ರಾಯ್ ಆಗಿದ್ದ ಲಾರ್ಡ್ ಹಾರ್ಡಿಂಜೆ ಅವರು ಜೋಗದ ಸೌಂದರ್ಯವನ್ನು ನಿತ್ಯನೂತನವೆಂದು ಬಣ್ಣಿಸಿದ್ದಾರೆ.
9/ 10
ಬ್ರಿಟನ್ನ ಅನೇಕ ವೈಸ್ರಾಯ್ಗಳು, ಗವರ್ನರ್ ಜನರಲ್ಗಳು ಹಾಗೂ ಭಾರತದ ರಾಷ್ಟ್ರಪತಿಗಳು, ಪ್ರಧಾನಿಗಳು ಜೋಗಕ್ಕೆ ಭೇಟಿ ಕೊಡುವುದು ಸಾಮಾನ್ಯ.
10/ 10
ರಾಜ್ಯದಲ್ಲಿ ಮಳೆಯಾಯಿತೆಂದರೆ ಜೋಗಕ್ಕೆ ಭೇಟಿ ನೀಡಲು ನೀವು ಪ್ಲಾನ್ ಶುರು ಮಾಡಬೇಕು.