Jack Fruit: ತೂಕ ಹೆಚ್ಚಾಗುತ್ತೆ ಅಂತ ಭಯ ಬೇಡ; ಹಲಸಿನ ಆರೋಗ್ಯಕರ ಗುಣ ತಿಳಿಯಿರಿ
ಮೈಯಲ್ಲೇ ಮುಳ್ಳಾದರೂ ಸಿಹಿಯನ್ನೇ ತುಂಬಿಕೊಂಡಿರುವ ಹಣ್ಣು ಹಲಸು (Jack fruit). ಎಷ್ಟೇ ದೂರದಲ್ಲಿ ಹಲಸು ಕೂಯ್ಯುತ್ತಿರಲಿ, ಅದರ ವಾಸನೆ ನಿಮ್ಮ ಮೂಗಿಗೆ ಬಡಿಯದಿರದು. ಇಂತಹ ರುಚಿಕರ ಹಲಸು ಅನೇಕ ಔಷಧೀಯ ಗುಣಗಳನ್ನು ಕೂಡ ಹೊಂದಿದೆ
ಹಲಸಿನಲ್ಲಿ ಯಥೇಚ್ಚವಾಗಿ ಪೊಟ್ಯಾಶಿಯಂ ಗುಣ ಇದ್ದು, ರಕ್ತದೊತ್ತಡ ನಿಯಂತ್ರಿಸುವಲ್ಲಿ ಸಹಕಾರಿಯಾಗಿದೆ. ವಿಟಮಿನ್ ಸಿ, ಎ ಗುಣಗಳನ್ನು ಹೊಂದಿರುವ ಈ ಹಣ್ಣು ಉತ್ತಮ ಜೀರ್ಣ ಕ್ರಿಯೆಗೆ ಸಹಾಯಕವಾಗಬಲ್ಲದು. ಅದಕ್ಕೆ ಅನ್ನುವುದು ಊಟ ಮಾಡುವ ಮೊದಲ ಹಲಸು ತಿನ್ನು ಉಂಡ ಮೇಲೆ ಮಾವು ತಿನ್ನು ಎಂದು
2/ 8
ರುಚಿಕರಿಯದ ಈ ಹಲಸು ತೂಕ ಇಳಿಕೆಗೂ ತುಂಬಾ ಪ್ರಯೋಜನಕಾರಿಯಾಗಿದೆ. ಹೆಚ್ಚು ಜೀರ್ಣ ಶಕ್ತಿ ಗುಣ ಹೊಂದಿರುವ ಹಿನ್ನಲೆ ಈ ಹಣ್ಣು ತಿನ್ನುವುದರಿಂದ ನಿಮ್ಮ ತೂಕ ಹೆಚ್ಚುತ್ತೆ ಎಂಬ ಭಯ ಬೇಡ
3/ 8
ಸಿಕ್ಕಾಪಟ್ಟೆ ಸಿಹಿಯಾಗಿರುವ ಈ ಹಲಸನ್ನು ತಿಂದರೆ ನಿಮ್ಮ ಶುಗರ್ ಲೆವೆಲ್ ಜಾಸ್ತಿ ಯಾಗುತ್ತದೆ ಎಂಬ ಆಂತಕ ನಿಮಗಿದ್ದರೆ, ಅದನ್ನು ಬಿಟ್ಟು ಬಿಡಿ. ಹಸಲು ನಿಮ್ಮ ಶುಗಲ್ ಲೆವೆಲ್ ನಿಯಂತ್ರಣದಲ್ಲಿ ಇಡುವಲ್ಲಿ ಸಹಕರಿಸುತ್ತದೆ.
4/ 8
ಅಷ್ಟೇ ಅಲ್ಲದೇ ಹಲಸು ನಿಮ್ಮ ಕಣ್ಣು ಮತ್ತು ಚರ್ಮದ ಆರೋಗ್ಯವನ್ನು ಇನ್ನಷ್ಟು ಹೆಚ್ಚಿಸುತ್ತದೆ. ಇದರಲ್ಲಿರುವ ಆ್ಯಂಟಿ ಏಜಿಂಗ್ ಗುಣ ನಿಮ್ಮ ಚರ್ಮವನ್ನು ಹೊಳೆಯುವಂತೆ ಮಾಡುವ ಜೊತೆಗೆ ಕಣ್ಣಿನ ದೃಷ್ಟಿ ಹೆಚ್ಚಿಸುವುದಕ್ಕೆ ಕೂಡ ಸಹಕಾರಿಯಾಗಿದೆ.
5/ 8
ಕ್ಯಾನ್ಸರ್ ನಿಯಂತ್ರಿಸುವಲ್ಲಿ ಸಹಕಾರಿಯಾಗಿದೆ ಈ ಹಲಸು. ಹಲಸಿನಲ್ಲಿರುವ ವಿಟಮಿನ್ ಸಿ ಸೇರಿದಂತೆ ಅನೇಕ ಅಂಶಗಳು ಕ್ಯಾನ್ಸರ್ ಗುಣಗಳನ್ನು ನಿಯಂತ್ರಿಸುತ್ತದೆ. ಹೆಚ್ಚಿನ ಪೋಷಕಾಂಶ ಸಮೃದ್ಧ ಗುಣ ಹೊಂದಿರುವ ಹಿನ್ನಲೆ ಅನೇಕರ ಆರೋಗ್ಯ ಸಮಸ್ಯೆಗೆ ನಿವಾರಣೆ ಆಗಬಲ್ಲದು.
6/ 8
ಇನ್ನು ಹೆಚ್ಚಿನ ನಿಕಾನ್ ಗುಣ ಇದರಲ್ಲಿ ಇರುವುದರಿಂದ ಇದು ನಿಮ್ಮ ಮೂಳೆಗಳ ಬಲವರ್ಥನೆಗೆ ಸಹಕಾರಿಯಾಗಿದೆ. ಇದರಿಂದ ಆರೋಗ್ಯಯುತ ಮೂಳೆಗಳನ್ನು ನೀವು ಪಡೆಯಬಹುದಾಗಿದೆ.
7/ 8
ಮಳೆಗಾಲದ ಅವಧಿಯಲ್ಲಿ ಯಥೇಚ್ಚವಾಗಿ ಹಣ್ಣಾಗುವ ಹಲಸು ಹೆಚ್ಚಿನ ರೋಗ ನಿರೋಧಕ ಶಕ್ತಿ ಗುಣವನ್ನು ಹೊಂದಿದದು ಇದು ಮಳೆಗಾಲದಲ್ಲಿ ಬೀಳುವ ಕಾಯಿಲೆಗಳಿಂದ ನಿಮ್ಮನ್ನು ರಕ್ಷಿಸುತ್ತದೆ.
8/ 8
ನರಗಳ ಆರೋಗ್ಯಗಳ ವೃದ್ಧಿಯಲ್ಲೂ ಹಲಸು ಪ್ರಮುಖ ಪಾತ್ರವನ್ನು ಹೊಂದಿದೆ. ಹಲಸಿನಲ್ಲಿರುವ ವಿಟಮಿನ್, ಪೊಟಾಶಿಯಂ ಹಾಗೂ ಪೋಷಕಾಂಶಗಳು ನರಗಳ ವ್ಯವಸ್ಥೆಯನ್ನು ಸುಧಾರಿಸುವಲ್ಲಿ ಪ್ರಮುಖವಾಗಿದೆ.