ಶಾಪಿಂಗ್ ಸೈಟ್ನಲ್ಲಿ ಸರಕುಗಳನ್ನು ಖರೀದಿಸುವಾಗ, ಸೈಟ್ ವಿಶ್ವಾಸಾರ್ಹವಾಗಿದೆ ಎಂಬುದನ್ನು ಮೊದಲು ಖಚಿತಪಡಿಸಿಕೊಳ್ಳಿ. ಇಲ್ಲದಿದ್ದರೆ ನೀವು ಇನ್ನೊಂದು ಸೈಟ್ ಆಯ್ಕೆ ಮಾಡಿಕೊಳ್ಳಿ. ನೀವು ತೆಗೆದುಕೊಳ್ಳುತ್ತಿರುವ ಯಾವುದೇ ಉತ್ಪನ್ನದ ಸಂಪೂರ್ಣ ವಿವರವನ್ನು ಓದಿ. ಉತ್ಪನ್ನದ ಬಗ್ಗೆ ಎಷ್ಟು ಜನರು ಸಕಾರಾತ್ಮಕ ವಿಮರ್ಶೆಗಳನ್ನು ನೀಡಿದ್ದಾರೆ ಎಂಬುದನ್ನು ಸಹ ನೋಡಿ. ಬಳಕೆದಾರರ ವಿಮರ್ಶೆ ಸಕಾರಾತ್ಮಕವಾಗಿಲ್ಲದಿದ್ದರೆ ಆ ಉತ್ಪನ್ನವನ್ನು ಖರೀದಿಸಬೇಡಿ.
ಉತ್ಪನ್ನವನ್ನು ಅರ್ಡರ್ ಮಾಡುವಾಗ, ಅದರ ಎಲ್ಲಾ ನಿಯಮಗಳು ಮತ್ತು ಷರತ್ತುಗಳನ್ನು ಎಚ್ಚರಿಕೆಯಿಂದ ಪರಿಶೀಲಿಸಿ. ಸರಕುಗಳನ್ನು ನೇರ ಕಂಪನಿಯಿಂದ ವಿತರಿಸಲಾಗುತ್ತಿದೆಯೇ ಅಥವಾ ಮೂರನೇ ವ್ಯಕ್ತಿಯ ಮೂಲಕ ನಿಮ್ಮನ್ನು ತಲುಪುತ್ತಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ. ಏಕೆಂದರೆ ಕಳಪೆ ಸರಕುಗಳನ್ನು ಕಳುಹಿಸಿದ್ರೆ ಅದನ್ನು ಹಿಂದಿರುಗಿಸಲು ಇದರಿಂದ ಸುಲಭವಾಗಲಿದೆ. ಹಾಗೆಯೇ ಸಾಧ್ಯವಾದಷ್ಟು ಕಂಪೆನಿ ನೇರವಾಗಿ ವಿತರಿಸುವ ವಸ್ತುಗಳ ಖರೀದಿಗೆ ಹೆಚ್ಚಿನ ಆದ್ಯತೆ ನೀಡುವುದು ಉತ್ತಮ.