ಸಾಮಾನ್ಯವಾಗಿ ನಾವು ಮನೆಯಲ್ಲಿ ಹಿರಿಯರು ‘ಅವರ ದೇಹ ತುಂಬಾನೇ ಹೀಟ್, ಇವರ ದೇಹ ತುಂಬಾನೇ ಕೂಲ್’ ಅಂತೆಲ್ಲಾ ಹೇಳುತ್ತಿರುತ್ತಾರೆ. ಹೀಗಂದರೆ ಏನು ಅಂತ ಅನೇಕ ಬಾರಿ ನಾವು ತಲೆ ಕೆಡೆಸಿಕೊಂಡಿರುತ್ತೇವೆ. ಕೆಲವೊಬ್ಬರ ದೇಹವು ಶಾಖದಿಂದ ಕೂಡಿದ್ದರೆ, ಇನ್ನೂ ಕೆಲವರದ್ದು ತಂಪಾಗಿರುತ್ತದೆ. ತಜ್ಞರು ಸಾಮಾನ್ಯ ದೇಹದ ತಾಪಮಾನವನ್ನು ಸುಮಾರು 98.6º ಫ್ಯಾರೆನ್ಹೀಟ್ ಅಂತ ಪರಿಗಣಿಸುತ್ತಾರೆ. ಆದರೆ ಇದು ದಿನದ ಸಮಯವನ್ನು ಅವಲಂಬಿಸಿ 0.9º ಫ್ಯಾರೆನ್ಹೀಟ್ ವರೆಗೆ ಬದಲಾಗಬಹುದು. ಇದು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತದೆ.